ಜೂನ್ ವೇಳೆಗೆ ಸಾಲಮನ್ನಾ ಪ್ರಕ್ರಿಯೆ ಪೂರ್ಣ: ಬಂಡೆಪ್ಪ ಕಾಶೆಂಪುರ
ಬೆಂಗಳೂರು, ಏಪ್ರಿಲ್ 26: ಜೂನ್ ತಿಂಗಳ ಅಂತ್ಯದ ವೇಳೆಗೆ ರೈತರ ಸಾಲಮನ್ನಾ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಅವರು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ನೀತಿ ಸಂಹಿತೆ ಘೋಷಣೆ ಆಗುವ ಮೊದಲು ಸಹಕಾರಿ ಬ್ಯಾಂಕ್‌ಗಳ ಸಾಲಮನ್ನಾಕ್ಕೆ 2600 ಕೋಟಿ ಬಿಡುಗಡೆ ಮಾಡಲಾಗಿತ್ತು, ಅದರಲ್ಲಿ 2000 ಕೋಟಿ ರೈತರ ಸಾಲದ ಖಾತೆಗೆ ಜಮಾ ಆಗಿದೆ ಎಂದು ಮಾಹಿತಿ ನೀಡಿದರು.
ಖಾಸಗಿ ಬ್ಯಾಂಕ್‌ಗಳಲ್ಲಿನ ರೈತರ ಬೆಳೆಸಾಲ ಮನ್ನಾಕ್ಕಾಗಿ 2800 ಕೋಟಿ ಬಿಡುಗಡೆ ಮಾಡಲಾಗಿತ್ತು, ಅದು ಸಹ ಅರ್ಹ ರೈತರ ಸಾಲದ ಖಾತೆಗೆ ಜಮಾ ಆಗಿದೆ ಎಂದು ಹೇಳಿದರು.

ಚುನಾವಣಾ ನೀತಿಸಂಹಿತೆ ಅಡ್ಡಬಂದ ಕಾರಣ ಸಾಲಮನ್ನಾ ಯೋಜನೆ ತ್ವರಿತವಾಗಿ ಆಗಲಿಲ್ಲ, ಚುನಾವಣಾ ನೀತಿಸಂಹಿತೆ ಅಂತ್ಯವಾದ ಬಳಿಕ ಯೋಜನೆಗೆ ಮತ್ತೆ ವೇಗದೊರಕಲಿದೆ ಎಂದು ಅವರು ಹೇಳಿದ್ದಾರೆ.
ಸಾಲಮನ್ನಾ ಆಗಿಲ್ಲವೆಂದು ಮಂಡ್ಯ ಲೋಕಸಭಾ ಕ್ಷೇತ್ರ ಪಕ್ಷೇತರ ಸುಮಲತಾ ಅವರು ಆಕ್ಷೇಪ ಎತ್ತಿದ್ದಕ್ಕೆಪ್ರತಿಕ್ರಿಯಿಸಿದ ಅವರು, ಅಂಕಿ-ಅಂಶ, ಸೂಕ್ತ ಮಾಹಿತಿ ತಿಳಿಯದೆ ಯಾರೂ ಸಹ ಮಾತನಾಡಬಾರದು ಎಂದು ಹೇಳಿದರು.
ನಾನು ಸರ್ಕಾರ ನಡೆಸುತ್ತಿದ್ದು, ನಮ್ಮ ಬಳಿ ಮಾಹಿತಿ ಇದೆ, ಯಾರೂ ಸಹ ಆಧಾರ ರಹಿತವಾಗಿ ಆರೋಪ ಮಾಡಬಾರದು ಎಂದು ಅವರು ಹೇಳಿದರು.












Click it and Unblock the Notifications