ರಾಹುಲ್ ಕರ್ನಾಟಕ ಭೇಟಿ : ಶನಿವಾರ ಏನೇನಾಯ್ತು?
ಹಾವೇರಿ, ಅಕ್ಟೋಬರ್ 10 : ಎರಡು ದಿನಗಳ ಭೇಟಿಗಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಶನಿವಾರ ಹಾವೇರಿ ಜಿಲ್ಲೆಗೆ ಭೇಟಿ ನೀಡಿದ ಅವರು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ಆತ್ಮಹತ್ಯೆ ಮಾಡಿಕೊಂಡ ರೈತ ಅಶೋಕ್ ಮನೆಗೆ ಭೇಟಿ, 6 ಕಿ.ಮೀ.ಪಾದಯಾತ್ರೆ, ಗುಡಗೂರ ಗ್ರಾಮದಲ್ಲಿ ಸಮಾವೇಶ ಉದ್ದೇಶಿಸಿ ಭಾಷಣ, ಲಂಬಾಣಿ ತಾಂಡಕ್ಕೆ ಭೇಟಿ ಸೇರಿದಂತೆ ಇಂದು ವಿವಿಧ ಕಾರ್ಯಕ್ರಮಗಳಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡರು. ರಾಹುಲ್ ಶನಿವಾರದ ಭೇಟಿಯ ಕ್ಷಣ-ಕ್ಷಣದ ಮಾಹಿತಿಗಳು ಇಲ್ಲಿವೆ.....[ಕರ್ನಾಟಕದಲ್ಲಿ ರಾಹುಲ್ ಗಾಂಧಿ : ಶುಕ್ರವಾರ ಏನೇನಾಯ್ತು?]

ಸಮಯ 4.02 : ಸಂಜೆ 5.15ಕ್ಕೆ ಕೆಂಪೆಗೌಡ ವಿಮಾನ ನಿಲ್ದಾಣದಿಂದ ರಾಹುಲ್ ಗಾಂಧಿ ದೆಹಲಿಗೆ ವಾಪಸ್ ತೆರಳಲಿದ್ದಾರೆ
ಸಮಯ 3.45 : ರಾಹುಲ್ ಹಾವೇರಿ ಭೇಟಿ ಮುಕ್ತಾಯ, ಬೆಂಗಳೂರಿನತ್ತ ಹೊರಟ ರಾಹುಲ್ ಗಾಂಧಿ
ಸಮಯ 2 ಗಂಟೆ : ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. [ಸಿದ್ದರಾಮಯ್ಯ ಮಾಡಿದ ಘೋಷಣೆಗಳು]
ಸಮಯ 1.45 : ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ 'ಪ್ರಧಾನಿ ಮೋದಿ ಅವರು ಉದ್ಯಮಿಗಳ ಜೊತೆ ಇರುವ ಪೋಟೋ ಸಿಗುತ್ತದೆ. ಅವರು ಬಡವರ ಜೊತೆ ಬೆರೆಯುವುದಿಲ್ಲ. ಅವರ ಜೊತೆ ಫೋಟೋ ತೆಗೆಸಿಕೊಳ್ಳುವುದಿಲ್ಲ' ಎಂದು ವಾಗ್ದಾಳಿ ನಡೆಸಿದರು.
ಸಮಯ 12.18 : 50 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿರುವ ಸಮಾವೇಶವನ್ನು ಉದ್ದೇಶಿಸಿ ರಾಹುಲ್ ಗಾಂಧಿ ಶೀಘ್ರದಲ್ಲಿಯೇ ಭಾಷಣ ಮಾಡಲಿದ್ದಾರೆ. ಸಚಿವ ಎಚ್.ಕೆ.ಪಾಟೀಲ್ ಅವರು ಸಮಾವೇಶ ಉದ್ದೇಶಿಸಿ ಮಾತನಾಡಿ 'ರೈತ ಬಾಂಧವರಿಗೆ ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದು ಯಾರೂ ಆತ್ಮಹತ್ಯೆಯಂತಹ ಪ್ರಯತ್ನಗಳಿಗೆ ಮುಂದಾಗಬಾರದೆಂದು' ಮನವಿ ಮಾಡಿದರು.
ಸಮಯ 12 ಗಂಟೆ : ಪಾದಯಾತ್ರೆ ಮೂಲಕ ಗುಡುಗೂರಿಗೆ ಆಗಮಿಸಿದ ರಾಹುಲ್ ಗಾಂಧಿ. ಬಹಿರಂಗ ಸಮಾವೇಶ ಉದ್ದೇಶಿಸಿ ಭಾಷಣ
ಸಮಯ 11.10 : ಆತ್ಮಹತ್ಯೆ ಮಾಡಿಕೊಂಡ ರೈತ ಅಶೋಕ ಮಡಿವಾಳ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಶೋಕ ಅವರ ಪುತ್ರನಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿದರು [ರಾಹುಲ್ ಕರ್ನಾಟಕ ಭೇಟಿ ಚಿತ್ರಗಳು]
ಸಮಯ 10.50 : ಅಶೋಕ ಮಡಿವಾಳ ಅವರ ನಿವಾಸದಿಂದ ಪಾದಯಾತ್ರೆ ಆರಂಭಿಸಿದ ರಾಹುಲ್ ಗಾಂಧಿ
Day 2 Padyatra Route in Haveri:Maiduru- Gadagur- Thanda villages
— Office of RG (@OfficeOfRG) October 10, 2015 ಸಮಯ 10.18 : ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೈದೂರು ತಾಂಡದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಅಶೋಕ ಮಡಿವಾಳ ನಿವಾಸಕ್ಕೆ ಹೊರಟ ರಾಹುಲ್ ಗಾಂಧಿ
ಸಮಯ 10.04 : ಹಲವಾರು ಸಂಘಟನೆಗಳ ಕಾರ್ಯಕರ್ತರು ಮತ್ತು ಕಳಸಾ-ಬಂಡೂರಿ ಹೋರಾಟಗಾರರು ರಾಹುಲ್‌ಗೆ ಮನವಿ ಸಲ್ಲಿಸಿದರು. ಕಳಸಾ ಬಂಡೂರಿ ನಾಲಾ ಯೋಜನೆ ಕುರಿತು ಪ್ರಧಾನಿ ಮೋದಿ ಅವರ ಬಳಿ ಮಾತನಾಡುವಂತೆ ಕೋರಿದರು.
Meeting the Kalasa- Banduri delegation in Ranebennur pic.twitter.com/Y7zZtdFOLC
— Office of RG (@OfficeOfRG) October 10, 2015 ಸಮಯ 10 ಗಂಟೆ : ರಾಹುಲ್ ಗಾಂಧಿ ರಾಣಿಬೆನ್ನೂರಿನ ಹೆಲಿಪ್ಯಾಡ್‌ಗೆ ಆಗಮಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಶಾಸಕ ಕೆ.ಬಿ. ಕೋಳಿವಾಡ ಮುಂತಾದವರು ರಾಹುಲ್ ಅವರನ್ನು ಸ್ವಾಗತಿಸಿದರು.
ಸಮಯ 9.55 : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾವೇರಿಗೆ ಆಗಮಿಸಿದ್ದಾರೆ
ಸಮಯ 9.15 : 'ರೈತರಿಗೆ ಇಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗುತ್ತದೆ' ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು. ಹಾವೇರಿಯಲ್ಲಿ ಶನಿವಾರ ಬೆಳಗ್ಗೆ ಮಾಧ್ಯಮಗಳ ಜೊತೆ ಹರಿಪ್ರಸಾದ್ ಮಾತನಾಡಿದರು.
ಸಮಯ 8.30 : ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಹೊರಟ ರಾಹುಲ್ ಗಾಂಧಿ, ಎಚ್‌ಎಎಲ್‌ನಿಂದ ಬಳ್ಳಾರಿಗೆ ಪ್ರಯಾಣ. ಬಳ್ಳಾರಿಯಿಂದ ರಾಣೆಬೆನ್ನೂರಿಗೆ ತೆರಳಿರುವ ರಾಹುಲ್ ಗಾಂಧಿ.
ಸಮಯ 8 ಗಂಟೆ : ಇಂದಿನ ಕಾರ್ಯಕ್ರಮಗಳು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೈದೂರು ತಾಂಡದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಅಶೋಕ ಮಡಿವಾಳರ ಕುಟುಂಬಕ್ಕೆ ಭೇಟಿ. ಆರು ಕಿ.ಮೀ ಪಾದಯಾತ್ರೆ, ಗುಡಗೂರ ಗ್ರಾಮದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಭಾಷಣ, ಲಂಬಾಣಿ ತಾಂಡಕ್ಕೆ ಭೇಟಿ












Click it and Unblock the Notifications