ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರಿಗೆ ನೊಟೀಸ್‌ ನೀಡುವ ಬ್ಯಾಂಕ್ ಮ್ಯಾನೇಜರ್‌ಗಳಿಗೆ ಸಿಎಂ ಎಚ್ಚರಿಕೆ

|
Google Oneindia Kannada News

ಬೆಂಗಳೂರು, ನವೆಂಬರ್ 14: ಬೆಳೆ ಸಾಲ ಮರುಪಾವತಿ ಮಾಡದ ರೈತರಿಗೆ ನೊಟೀಸ್ ನೀಡುವ ಬ್ಯಾಂಕ್ ಮ್ಯಾನೇಜರ್‌ಗಳಿಗೆ ಸಿಎಂ ಕುಮಾರಸ್ವಾಮಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಟಿಪ್ಪು ಜಯಂತಿ ಪ್ರತಿ ವರ್ಷ ನಡೆಯುತ್ತೆ: ಕುಮಾರಸ್ವಾಮಿ ಸ್ಪಷ್ಟನೆಟಿಪ್ಪು ಜಯಂತಿ ಪ್ರತಿ ವರ್ಷ ನಡೆಯುತ್ತೆ: ಕುಮಾರಸ್ವಾಮಿ ಸ್ಪಷ್ಟನೆ

ಜವಾಹರ್‌ಲಾಲ್ ನೆಹರು ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ಸಾಲ ಮರುಪಾವತಿ ಮಾಡಿಲ್ಲವೆಂದು ಬಂಧನ ನೊಟೀಸ್‌ ಕಳಿಸುವ ಬ್ಯಾಂಕ್ ಮ್ಯಾನೆಜರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಭತ್ತಕ್ಕೆ ಬೆಂಬಲ ಬೆಲೆ:ಕುಮಾರಸ್ವಾಮಿ ಮಹತ್ವದ ಘೋಷಣೆಭತ್ತಕ್ಕೆ ಬೆಂಬಲ ಬೆಲೆ:ಕುಮಾರಸ್ವಾಮಿ ಮಹತ್ವದ ಘೋಷಣೆ

ರೈತರ ಸಾಲಮನ್ನಾಕ್ಕೆ ಸರ್ಕಾರ ಕಾರ್ಯೋನ್ಮುಖವಾಗಿದೆ, ಈಗಾಗಲೇ ಹಲವು ಹಂತದ ಮಾತುಕತೆಗಳು ಮುಗಿದಿವೆ ಅದಾಗ್ಯೂ ನೊಟೀಸ್‌ ನೀಡಲಾಗುತ್ತಿರುವುದು ಅಕ್ಷಮ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Kumaraswamy warns bank managers for giving notice to farmers

ಸರ್ಕಾರವು ರೈತರ ಬೆಳೆ ಸಾಲವನ್ನು ಮನ್ನಾ ಮಾಡಿಯೇ ತೀರುತ್ತದೆ ಈ ಬಗ್ಗೆ ಯಾವ ಅನುಮಾನವೂ ಬೇಡ ಎಂದಿರುವ ಅವರು, ಈ ಸದ್ಯ ನೊಟೀಸ್‌ ನೀಡಲಾಗಿರುವ ಬೆಳಗಾವಿಯ ರೈತರ ಸಾಲವೂ ಸಾಲಮನ್ನಾದ ಪರಿಧಿಯೊಳಗೆ ಇದೆ ಎಂದು ಅವರು ಹೇಳಿದ್ದಾರೆ.

ಸಂಪುಟ ವಿಸ್ತರಣೆಗೆ ಕಾಂಗ್ರೆಸ್‌ ಮೇಲೆ ಜೆಡಿಎಸ್ ಒತ್ತಡ?ಸಂಪುಟ ವಿಸ್ತರಣೆಗೆ ಕಾಂಗ್ರೆಸ್‌ ಮೇಲೆ ಜೆಡಿಎಸ್ ಒತ್ತಡ?

ಇತ್ತೀಚೆಗೆ ತಾಯಿ-ಮಗು ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ಇಲಾಖೆಗೆ ಸೂಚನೆ ನೀಡಿ ಅವರಿಗೆ ನೊಟೀಸ್‌ ನೀಡಿದ ಬ್ಯಾಂಕ್ ವ್ಯವಸ್ಥಾಪಕರನ್ನು ಬಂಧಿಸಲು ಸೂಚಿಸಲಾಗಿತ್ತು. ಆದರೆ ಅವರದ್ದು ಬೆಳೆ ಸಾಲ ಅಲ್ಲಾ ಎನ್ನುವುದು ತಿಳಿದುಬಂತು.

ಮನೆ ಕಟ್ಟಲೆಂದು ಮಾವನವರು 25 ಲಕ್ಷ ಸಾಲ ಪಡೆದಿದ್ದರು ಆದಕ್ಕೆ ನೊಟೀಸ್ ನೀಡಲಾಗಿತ್ತು. ಹೀಗೆ ಬೇರೆ-ಬೇರೆ ಉದ್ದೇಶಕ್ಕೆ ಪಡೆದ ಸಾಲಕ್ಕೂ ನೊಟೀಸ್‌ ಜಾರಿ ಮಾಡಲಾಗಿದೆ. ಅಂತಹುಗಳನ್ನು ತನಿಖೆ ನಡೆಸಿ ಆ ನಂತರ ವ್ಯವಸ್ಥಾಪಕರ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಹೇಳಿದರು.

English summary
CM Kumaraswamy warns bank managers who giving notice to farmers about crop loans. He said government will take action against bank managers who send notice to farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X