ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ 01ರಿಂದ ಸುಸ್ಥಿರ ಕೃಷಿ ಕ್ರಾಂತಿಗೆ ಮುನ್ನುಡಿ : ಎಚ್ಡಿಕೆ

|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿ ಸರ್ಕಾರದದಿಂದ ಕೃಷಿಗೆ ಸಿಕ್ಕಿದ್ದೇನು? | oneindia Kannada

ಬೆಂಗಳೂರು, ಅಕ್ಟೋಬರ್ 23: ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಮತ್ತು ಬೆಂಗಳೂರು ವರದಿಗಾರರ ಕೂಟವು ಇಂದು ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪಾಲ್ಗೊಂಡು ಮಾತನಾಡಿದರು. ಮೈತ್ರಿ ಸರ್ಕಾರದ ಸಾಧನೆಗಳು ಮತ್ತು ಸವಾಲುಗಳ ಕುರಿತು ಅನೇಕ ವಿಷಯಗಳ ಬಗ್ಗೆ ಅಂಕಿ ಅಂಶಗಳನ್ನು ಹಂಚಿಕೊಂಡರು.

ಮೈತ್ರಿ ಸರ್ಕಾರ ರಚನೆಯಾಗಿ ಇಂದಿಗೆ ಐದು ತಿಂಗಳು ಪೂರ್ಣವಾಗಿವೆ. ನನ್ನಿಂದ ಆದ ವೈಫಲ್ಯಗಳಿಗೆ ಇಂದು ನಿಮ್ಮಿಂದ ಸಲಹೆಗಳನ್ನು ನಾನು ಬಯಸಿದ್ದೇನೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಘೋಷಣೆ ಮಾಡಿದ ಸಾಲ ಮನ್ನಾ ಮೊತ್ತವನ್ನು ಪೂರ್ತಿ ಭರಿಸಲಾಗಿದೆ. ಈಗ ಮಾಡಿರುವ 9,458 ಕೋಟಿ ಸಾಲ ಮನ್ನಾ ಮೊತ್ತವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಮಾರ್ಚ್​ವರೆಗೆ ಸಾಲ ಮನ್ನಾ ಯೋಜನೆ ಅವಧಿ ಇದೆ. 44 ಲಕ್ಷ ಕುಟುಂಬಗಳು ಇದರ ಲಾಭ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.

ಸುಸ್ಥಿರ ಕೃಷಿಗೆ ಇಸ್ರೇಲ್ ಮಾದರಿ ಕೃಷಿ ಪದ್ಧತಿ ಕುರಿತಂತೆ ನವೆಂಬರ್ 1 ರಂದು ಸಮಿತಿ ವರದಿ ಸಲ್ಲಿಕೆಯಾಗಲಿದೆ ಎಂದರು.

ಇಸ್ರೇಲ್ ಮಾದರಿ ಕೃಷಿ ಪದ್ಧತಿ

ಇಸ್ರೇಲ್ ಮಾದರಿ ಕೃಷಿ ಪದ್ಧತಿ

ಇಸ್ರೇಲ್ ಮಾದರಿ ಕೃಷಿ ಪದ್ಧತಿ: ಈ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಅಧ್ಯಯನ ನಡೆಸಿ, ಅನುಷ್ಠಾನದ ವಿಧಾನದ ಕುರಿತು ವರದಿ ನೀಡಲು ಸಹಕಾರ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದು, ಈ ಸಮಿತಿಯು ನವೆಂಬರ್ 1 ರಂದು ವರದಿ ಸಲ್ಲಿಸಲಿದೆ.

ಈಗಾಗಲೇ ರಾಜ್ಯದಲ್ಲಿ ಇಸ್ರೇಲ್ ಮಾದರಿ ಕೃಷಿಪದ್ಧತಿ ಜಾರಿಗೆ ಮಂಡ್ಯದಲ್ಲಿ 900 ಎಕರೆ ಭೂಮಿಯನ್ನು ಗೊತ್ತುಪಡಿಸಲಾಗಿದೆ. "ಇದು ಪೈಲೆಟ್ ಪ್ರಾಜೆಕ್ಟ್ ಆಗಲಿದೆ. ಇದಕ್ಕೆ ಇಸ್ರೇಲ್ ನಿಂದ ಪರಿಣತರನ್ನು ಕರೆಸಿ ಅಗತ್ಯ ಮಾಹಿತಿ ಮತ್ತು ತರಬೇತಿಯನ್ನು ಕೊಡಿಸಲು ಉದ್ದೇಶಿಸಿದ್ದೇನೆ," ಎಂದು ಸಿಎಂ ತಮ್ಮ ಟ್ಟಿಟ್ಟರಿನಲ್ಲಿ ಹೇಳಿಕೊಂಡಿದ್ದರು.

ಕಡಿಮೆ ಸಂಪನ್ಮೂಲಗಳಲ್ಲಿ ವಿಪುಲವಾದ ಪ್ರತಿಫಲ

ಕಡಿಮೆ ಸಂಪನ್ಮೂಲಗಳಲ್ಲಿ ವಿಪುಲವಾದ ಪ್ರತಿಫಲ

ಈಗಾಗಲೇ ಕೃಷಿ ಸಚಿವರು, ತೋಟಗಾರಿಕೆ ಸಚಿವರು ಹಾಗೂ ಅಧಿಕಾರಿಗಳನ್ನೊಳಗೊಂಡ ನಿಯೋಗವು ಸೆಪ್ಟೆಂಬರ್ ತಿಂಗಳಿನಲ್ಲಿ ಇಸ್ರೇಲ್ ಭೇಟಿ ನೀಡಿ ಅಧ್ಯಯನ ನಡೆಸಿದೆ. ಅಲ್ಲಿನ ಕೃಷಿ ತಂತ್ರಜ್ಞಾನ, ನೀರಾವರಿ ವ್ಯವಸ್ಥೆ, ತೋಟಗಾರಿಕೆ, ಪಶು ಸಂಗೋಪನೆ, ಅಂತರ್ಜಲ ನಿರ್ವಹಣೆ ಮುಂತಾದ ಅನೇಕ ವಿಚಾರಗಳನ್ನು ಅಧ್ಯಯನ ನಡೆಸಿದೆ. ಕೃಷಿ ಹಾಗೂ ಪಶುಸಂಗೋಪನೆಯಲ್ಲಿ ಸುಧಾರಿತ ತಂತ್ರಜ್ಞಾನಗಳನ್ನು ಅನುಸರಿಸುವ ಮೂಲಕ ಅತಿ ಕಡಿಮೆ ಸಂಪನ್ಮೂಲಗಳಲ್ಲಿ ವಿಪುಲವಾದ ಪ್ರತಿಫಲ ಪಡೆಯುತ್ತಿರುವ ಇಸ್ರೇಲ್ ದೇಶದ ಮಾದರಿಯಲ್ಲಿ ಕರ್ನಾಟಕದಲ್ಲಿ ಕೃಷಿ ಪದ್ಧತಿ ಬೆಳವಣಿಗೆಗೆ ಸರ್ಕಾರ ಮುಂದಾಗಿದೆ.

ನೀರು ನಿರ್ವಹಣೆಯಲ್ಲಿ ಮುಂಚೂಣಿ

ನೀರು ನಿರ್ವಹಣೆಯಲ್ಲಿ ಮುಂಚೂಣಿ

ಸಮಿತಿಯು 7 ಸಭೆಗಳನ್ನು ನಡೆಸಿದೆಯಲ್ಲದೆ 7 ಬಾರಿ ಕ್ಷೇತ್ರ ಭೇಟಿ ಮಾಡಿದ್ದು, ಕೃಷಿ ಮತ್ತು ತೋಟಗಾರಿಕಾ ಸಚಿವರೊಂದಿಗೆ ಶಿಫಾರಸಿನ ಕುರಿತು ಚರ್ಚೆ ನಡೆಸಿದೆ. ನವೆಂಬರ್ 1 ರಂದು ವರದಿ ಸಲ್ಲಿಸಲಿದ್ದು, ನವೆಂಬರ್ ತಿಂಗಳಲ್ಲಿಯೇ ಸಚಿವ ಸಂಪುಟ ಸಭೆಯಲ್ಲಿಯೂ ಈ ಕುರಿತು ಚರ್ಚಿಸಿ, ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು.

ನೀರು ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿರುವ ಇಸ್ರೇಲ್, ತನ್ನ ನೀರು ಪುನರ್ಬಳಕೆ ಮತ್ತು ಸಂಸ್ಕರಣೆಯ ತಂತ್ರಜ್ಞಾನಗಳಿಂದ ನೀರಾವರಿಗೆ ಘನನೀರನ್ನು ಬಳಸಿಕೊಳ್ಳುವ ಮಾದರಿಯನ್ನು ಹಾಕಿಕೊಟ್ಟಿದೆ. ತನ್ನ ಆಂತರಿಕವಾಗಿ ಬಳಕೆಯಾದ ಶೇ 80ರಷ್ಟು ನೀರನ್ನು ಮರುಬಳಕೆ ಮಾಡುತ್ತದೆ. ಇದನ್ನು ಸಂಸ್ಕರಿಸಿ ಸುಮಾರು ಶೇ 50ರಷ್ಟು ನೀರನ್ನು ಕೃಷಿಗೆ ಬಳಸುತ್ತದೆ.

ಇಸ್ರೇಲ್‌ ನೀರಾವರಿ ಪದ್ಧತಿ

ಇಸ್ರೇಲ್‌ ನೀರಾವರಿ ಪದ್ಧತಿ

ಸಾಮಾನ್ಯ ಕೃಷಿ ಪದ್ಧತಿಯಲ್ಲಿ ನೀರು ಪೈಪ್ ಹಾಗೂ ಇತರೆ ಸಾಧನಗಳ ಮೂಲಕ ಮಣ್ಣು ಅಥವಾ ಬೇರಿಗೆ ನೇರವಾಗಿ ತಲುಪುತ್ತದೆ. ಇಸ್ರೇಲ್‌ ನೀರಾವರಿ ಪದ್ಧತಿಯಲ್ಲಿ ಕೃಷಿ ಸಸ್ಯಗಳ ಬೇರಿಗೆ ನಿಧಾನವಾಗಿ ತಲುಪುತ್ತದೆ.

ಭಾರತ-ಇಸ್ರೇಲ್ ಕೃಷಿ ಯೋಜನೆಯಡಿ ವಿವಿಧ ರಾಜ್ಯಗಳಲ್ಲಿ ಉತ್ಕೃಷ್ಟತೆಯ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಭಾರತದ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಅಗತ್ಯವಾದ ಕಿರು ನೀರಾವರಿ ಪದ್ಧತಿಯಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲು ಮುಂದಾಗಿದೆ. ಭಾರತದಲ್ಲಿ ಈ ಪದ್ಧತಿ ಅಳವಡಿಸಿಕೊಳ್ಳಲು ಕರ್ನಾಟಕ ಈಗ ಮುಂದಾಗಿದೆ.

English summary
Congress-JD(S) alliance government led by HD Kumaraswamy in Karnataka completed 150 days in office today (October 23). Here are list of achievements and plans for Agriculture sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X