Get Updates
Get notified of breaking news, exclusive insights, and must-see stories!

Arecanut & Copra Price: ಕೊಬ್ಬರಿಗೆ ಬಂಪರ್ ಬೆಲೆ; ಅಡಿಕೆ ಧಾರಣೆ ಕೂಡ ಏರಿಕೆಯತ್ತ

ತೆಂಗು ಮತ್ತು ಕೊಬ್ಬರಿ ಬೆಲೆಯಲ್ಲಿ ಭಾರಿ ಏರಿಕೆಯಾಗುತ್ತಿದ್ದು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಸೈನಿಕ ಹುಳು ಕಾಟ ಸೇರಿದಂತೆ ಹಲವು ರೋಗಗಳಿಂದ ತೆಂಗು ಬೆಳೆಗಾರರು ಕಂಗಾಲಾಗಿದ್ದರು. ಇದರ ನಡುವೆ ಕೊಬ್ಬರಿ ಬೆಲೆ ಕೂಡ ಕುಸಿತ ಕಂಡಿದ್ದು ಮತ್ತಷ್ಟು ಸಂಕಷ್ಟ ತಂದಿತ್ತು. ಅದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಕೊಬ್ಬರಿ ಬೆಲೆ ಏರಿಕೆಯಾಗುತ್ತಿದ್ದು ಇದೀಗ ಕ್ವಿಂಟಲ್ ಕೊಬ್ಬರಿ ದರ 17,000 ರೂಪಾಯಿ ತಲುಪಿದೆ.

ಗುರುವಾರ ಅರಸೀಕೆರೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ದರ ಕನಿಷ್ಠ 15,500 ರೂಪಾಯಿ ಇದ್ದರೆ, ಗರಿಷ್ಠ 17,000 ರೂಪಾಯಿಗೆ ಮಾರಾಟವಾಗಿದ್ದು ಈ ವರ್ಷದಲ್ಲಿ ಹೊಸ ದಾಖಲೆ ಬರೆದಿದೆ. ತಿಪಟೂರು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ಕನಿಷ್ಠ 16,300 ರೂಪಾಯಿಯಂತೆ ಹರಾಜಾಗಿದೆ.

kobri cop price surpasses Rs 17000 per quintal arecanut price details

ಹುಳಿಯಾರು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ಕನಿಷ್ಠ 16,000 ರೂಪಾಯಿ ಇದ್ದರೆ ಗರಿಷ್ಠ 16,000 ರೂಪಾಯಿಗೆ ಮಾರಾಟವಾಗಿದೆ. ನಾಗಮಂಗಲ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕನಿಷ್ಠ ದರ 13,000 ರೂಪಾಯಿ ಆಗಿದ್ದು ಗರಿಷ್ಠ ದರ 16,000 ರೂಪಾಯಿ ಆಗಿತ್ತು.

ಕೊಬ್ಬರಿ ಮಾತ್ರವಲ್ಲದೆ ತೆಂಗು, ಎಳನೀರಿಗೂ ಭರ್ಜರಿ ಬೇಡಿಕೆ ಬಂದಿದ್ದು, ಬೆಲೆ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಎಳನೀರು ದರ ಒಂದಕ್ಕೆ 50-55 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ. ತೆಂಗಿನ ಕಾಯಿ ಬೆಲೆ ಕೂಡ ಸಾವಿರಕ್ಕೆ 15000-25000 ರೂಪಾಯಿಗೆ ಮಾರಾಟವಾಗುತ್ತಿದೆ.

ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ (ಕ್ವಿಂಟಾಲ್‌ಗೆ)

ಕ್ರಮ
ಸಂಖ್ಯೆ
ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಕಾರ್ಕಳ ಹೊಸ ವೆರೈಟಿ ₹25,000 ₹40,500 ₹30,000
2 ಬಂಟ್ವಾಳ ಹೊಸ ವೆರೈಟಿ ₹28,500 ₹40,500 ₹40,000
3 ಬಂಟ್ವಾಳ ಕೋಕಾ ₹18,000 ₹28,500 ₹23,500
4 ಕುಮಟಾ ಚಿಪ್ಪು ₹21,869 ₹24,899 ₹23,659
5 ಕುಮಟಾ ಫ್ಯಾಕ್ಟರಿ ₹6,019 ₹16,829 ₹15,499
6 ಪುತ್ತೂರು ಹೊಸ ವೆರೈಟಿ ₹26,000 ₹40,500 ₹35,000
7 ಶಿವಮೊಗ್ಗ ಬೆಟ್ಟೆ ₹42,009 ₹55,840 ₹55,029
8 ಶಿವಮೊಗ್ಗ ರಾಶಿ ₹30,059 ₹49,299 ₹48,099
9 ಶಿವಮೊಗ್ಗ ಸರಕು ₹54,400 ₹88,986 ₹61,569
10 ಸಿದ್ದಾಪುರ ಬಿಳೆ ಗೊಟು ₹24,109 ₹26,419 ₹25,759
11 ಸಿದ್ದಾಪುರ ಚಾಲಿ ₹31,009 ₹33,799 ₹33,399
12 ಸಿದ್ದಾಪುರ ತಟ್ಟಿ ಬೆಟ್ಟೆ ₹34,889 ₹34,889 ₹34,889
13 ಶಿರಸಿ ಕೆಂಪು ಗೋಟು ₹13,905 ₹18,899 ₹17,003
14 ಶಿರಸಿ ರಾಶಿ ₹41,100 ₹46,699 ₹43,108
15 ಚನ್ನಗಿರಿ ರಾಶಿ ₹43,512 ₹49,499 ₹45,201
16 ಚಿತ್ರದುರ್ಗ ಅಪಿ ₹47,619 ₹48,059 ₹47,879
17 ಚಿತ್ರದುರ್ಗ ಬೆಟ್ಟೆ ₹33,329 ₹33,799 ₹33,549
18 ಚಿತ್ರದುರ್ಗ ರಾಶಿ ₹47,139 ₹47,569 ₹47,389

ಅಡಿಕೆ ಬೆಲೆ ಕೂಡ ಏರಿಕೆಯತ್ತ

ಕಳೆದ ಕೆಲವು ದಿನಗಳಿಂದ ಕುಸಿತ ಕಂಡಿದ್ದ ಅಡಿಕೆ ಬೆಲೆ ಮತ್ತೆ ನಿಧಾನವಾಗಿ ಏರಿಕೆಯ ಹಾದಿ ಹಿಡಿದಿದೆ. ಭೂತಾನ್‌ನಿಂದ ಹಸಿ ಅಡಿಕೆ ಆಮದಿಗೆ ಕೇಂದ್ರ ಒಪ್ಪಿಗೆ ಕೊಟ್ಟ ಬೆನ್ನಲ್ಲೇ ಅಡಿಕೆ ಬೆಳೆಗಾರರಲ್ಲಿ ಆತಂಕ ಮನೆ ಮಾಡಿತ್ತು. ಆದರೆ ರಾಶಿ ಕೆಂಪಡಿಕೆ ಧಾರಣೆ ನಿಧಾನವಾಗಿ ಮತ್ತೆ ಹೆಚ್ಚುತ್ತಿದ್ದು ಅಡಿಕೆ ಬೆಳೆಗಾರರಲ್ಲಿ ಆತಂಕವನ್ನು ದೂರಾಗಿಸಿದೆ.

ಗುರುವಾರ ಬಂಟ್ವಾಳ ಮಾರುಕಟ್ಟೆಯಲ್ಲಿ ಹೊಸ ವೆರೈಟಿ ಅಡಿಕೆ ಬೆಲೆ ಕನಿಷ್ಠ 28,500 ರೂಪಾಯಿ ಇದ್ದರೆ ಗರಿಷ್ಠ ಬೆಲೆ 40,500 ರೂಪಾಯಿ ಆಗಿತ್ತು. ಪುತ್ತೂರು ಮಾರುಕಟ್ಟೆಯಲ್ಲಿ ಹೊಸವೆರೈಟಿ ಅಡಿಕೆ ಬೆಲೆ ಕನಿಷ್ಠ 26,000 ರೂಪಾಯಿ ಇದ್ದರೆ ಗರಿಷ್ಠ 40,500 ರೂಪಾಯಿಗೆ ಮಾರಾಟವಾಗಿದೆ.

ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ (ಕ್ವಿಂಟಾಲ್‌ಗೆ)

ಕ್ರಮ
ಸಂಖ್ಯೆ
ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಅರಸೀಕೆರೆ ಕೊಬ್ಬರಿ ₹15,500 ₹17,000 ₹16,000
2 ಅರಸೀಕೆರೆ ಬೇರೆ ₹7,000 ₹9,000 ₹7,720
3 ತಿಪಟೂರು ಕೊಬ್ಬರಿ ₹16,300 ₹17,000 ₹16,300
4 ಹುಳಿಯಾರ್ ಬಾಲ್ ₹16,000 ₹16,400 ₹16,264
5 ನಾಗಮಂಗಲ ಸಣ್ಣ ₹9,000 ₹11,000 ₹10,000
6 ನಾಗಮಂಗಲ ಮಾಧ್ಯಮ ₹13,000 ₹16,000 ₹15,000

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+