ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಣಸಿನಕಾಯಿ ಬೆಳೆಯಲ್ಲಿ ಸೊರಗು ರೋಗ, ಕರಿಹೇನು ನಿಯಂತ್ರಣಕ್ಕೆ ಈ ಕ್ರಮ ಕೈಗೊಳ್ಳಿ

|
Google Oneindia Kannada News

ಬಳ್ಳಾರಿ,ನ ನವೆಂಬರ್ 11: ಸಿರುಗುಪ್ಪ ತಾಲೂಕಿನಲ್ಲಿ ಅಕ್ಟೋಬರ್ ಮಾಹೆಯಲ್ಲಿ ಸುರಿದ ಮಳೆಯ ತೇವಾಂಶದಿಂದ ಮೆಣಸಿನಕಾಯಿ ಬೆಳೆಯಲ್ಲಿ ಸೊರಗು ರೋಗ ಮತ್ತು ಕರಿಹೇನಿನ ಹಾವಳಿ ಜಾಸ್ತಿಯಿದ್ದು, ಹೋಗಲಾಡಿಸುವುದಕ್ಕೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಹಲವು ಸಲಹೆ ನೀಡಿದ್ದಾರೆ.

ಈ ರೋಗವು ಪ್ಯುಜೆರಿಯಂ ಎಂಬ ಶೀಲಿಂಧ್ರದಿಂದ ಮೆಣಸಿಕಾಯಿ ಗಿಡಕ್ಕೆ ಬರುತ್ತದೆ. ಭೂಮಿಗೆ ಹೊಂದಿಕೊಂಡಂತೆ ಇರುವ ಕಾಂಡದ ಭಾಗದಲ್ಲಿ ಬಿಳಿ ಹತ್ತಿಯ ದಾರದಂತೆ ಕಾಣುವ ಶಿಲೀಂಧ್ರ ಕಾಣಿಸುತ್ತದೆ. ಇದರಿಂದ ಎಲೆ ಮತ್ತು ಕಾಂಡಗಳಿಗೆ ಬೇರುಗಳಿಂದ ಆಹಾರ ಮತ್ತು ನೀರು ಸರಬರಾಜು ಆಗುವುದು ನಿಂತು ಹೋಗುತ್ತದೆ, ಪರಿಣಾಮವಾಗಿ ಗಿಡ ಬಾಡುತ್ತ ಕ್ರಮೇಣ ಒಣಗುತ್ತದೆ.

ಸೊರಗು ರೋಗದ (ವಿಲ್ಟ್) ನಿರ್ವಹಣೆ ಕ್ರಮಗಳು
ಹೊಲಗಳಲ್ಲಿ ನೀರು ನಿಲ್ಲದಂತೆ ಬಸಿ ಕಾಳುವೆಗಳನ್ನು ತೆಗೆದು ಸಂಪೂರ್ಣ ನೀರು ಹೊರಹೋಗುವಂತೆ ಮಾಡಬೇಕು. ಸೋಡೋಮೋನಸ್ ಪ್ಲೋರೋಸೆಸ್ಸ್ (ಜೈವಿಕ ಬ್ಯಾಕ್ಟಿರಿಯಾ) 5 ml ಪ್ರತಿ ಲೀಟರ್ ನೀರಿನೊಂದಿಗೆ ಸೇರಿಸಿ ಸಿಂಪಡಣೆ ಮಾಡುವುದು ಮತ್ತು ಗಿಡಗಳ ಬುಡಕ್ಕೆ ಬಿಡುವುದು. ಟಾಟಾ ಮಾಸ್ಟರ್ (ಮೆಟಲ್ಯಾಕ್ಸಿಲ್ ಶೇ.8 ಜೊತೆಗೆ ಮ್ಯಾಂಕೋಜೆಬ್ ಶೇ.64) 2ml ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪಡಣೆ ಮಾಡುವುದು ಮತ್ತು ಗಿಡಗಳ ಬುಡಕ್ಕೆ ಬಿಡಬೇಕು. 19:19:19 (ಎನ್‍ಪಿಕೆ) 5 ಗ್ರಾಂ ಪ್ರತಿ ಲೀಟರ್ ನೀರಿನ ಜೊತೆಗೆ ಲಿಬರಲ್ (ಲಘು ಪೋಷಕಾಂಶಗಳ ಮಿಶ್ರಿತ) 1 ಗ್ರಾಂ ಅನ್ನು ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪಡಣೆ ಮಾಡಬೇಕು ಎಂದು ಮಾಹಿತಿ ನಿಡಿದ್ದಾರೆ.

Know How to control wilt disease in Chilli Crop

ಕರಿಹೇನು ನಿರ್ವಹಣೆ (Black Thrips)ನಿರ್ವಹಣೆ ಕ್ರಮಗಳು
ಗಿಡದಿಂದ ಗಿಡಕ್ಕೆ ಸೂಕ್ತ ಅಂತರ ಕಾಪಾಡುವುದು ಅತ್ಯಗತ್ಯ. ಬೇವೆರಿಯ ಬೇಸಿಯಾನ ಜೈವಿಕ ಕೀಟನಾಶಕವನ್ನು 5 ರಿಂದ 10 ಗ್ರಾಂ ಪ್ರತಿ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸುವುದು. ಬದುಗಳ ಸುತ್ತ ಜೋಳ ಅಥವಾ ಸಜ್ಜೆಯಂತಹ ಬೆಳೆಗಳನ್ನು ಬೆಳೆಯುವುದರಿಂದ ಕೀಟಪಸರಿಸುವುದನ್ನು ತಡೆಗಟ್ಟಬಹುದು. Movento OD 2ml + Alanto 1.5 ml + ಬೇವಿನ ಹೆಣ್ಣೆ 5 ಮಿಲಿಗ್ರಾಂ ಅನ್ನು ಪ್ರತಿ ಲೀಟರ್‌ ನೀರಿಗೆ ಬೆರಸಿ ಸಿಂಪರಣೆ ಮಾಡುವುದು.

ನಾಲ್ಕು ದಿನದ ನಂತರ Spinosad 0.3ml + Sivanto 2ml ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡಬೇಕು. ಒಂದು ವಾರದ ನಂತರ Movento OD 2ml + Sivanto 2ml ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡುಬೇಕು. Dinatefuron(Token) 0.4 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಣೆ ಮಾಡುವುದು. (Tracer) 0.3ml ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಣೆ ಮಾಡಬೇಕು. Spinotoram(Delegate) 0.5ml ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡುವುದು.

ರೈತರ ಮೆಣಸಿನ ಕಾಯಿ ತೋಟದಲ್ಲಿ ಹೆಚ್ಚಿನ ಕರಿಹೇನು ಕೀಟ ಬಾಧೆ ಕಂಡುಬಂದಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಬೇಕು ಎಂದು ಜಿಲ್ಲಾ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

Know How to control wilt disease in Chilli Crop

ಹನಿ ನೀರಾವರಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಸಿರುಗುಪ್ಪ ತೋಟಗಾರಿಕೆ ಇಲಾಖೆಯಿಂದ ಪ್ರಸ್ತಕ ಸಾಲಿಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ಹನಿ ನೀರಾವರಿ ಸೌಲಭ್ಯ ಪಡೆಯಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಸಿರುಗುಪ್ಪ ತಾಲೂಕಿಗೆ 2000 ಎಕರೆ ಪ್ರದೇಶಗಳಲ್ಲಿ ಅನುಷ್ಠಾನ ಗಳಿಸಲು ಗುರಿಯನ್ನು ನಿಗದಿಪಡಿಸಲಾಗಿದೆ. ಇದುವರೆಗೆ ಸಿರುಗುಪ್ಪ ತಾಲೂಕಿನ 117 ಫಲಾನುಭವಿಗಳ ಪೈಕಿ ಕೇವಲ 547 ಎಕರೆ ಪ್ರದೇಶದಲ್ಲಿ ಮಾತ್ರ ಹನಿ ನೀರಾವರಿಯನ್ನು ಆಳವಡಿಕೊಂಡಿದ್ದು, ಇನ್ನೂ 1453 ಎಕರೆ ಪ್ರದೇಶದಲ್ಲಿ ಹನಿ ನೀರಾವರಿ ಆಳವಡಿಸಿದಂತಹ ರೈತರಿಗೆ ಸಹಾಯಧನ ನೀಡಲು ಅವಕಾಶವಿದೆ.

ರೈತರು ಕಡ್ಡಾಯವಾಗಿ ಕೊಳವೆ ಬಾವಿ ಅಥವಾ ನೀರಾವರಿ ಸೌಲಭ್ಯವನ್ನು ಹೊಂದಿರಬೇಕು. ಸಾಮಾನ್ಯ ರೈತರಿಗೆ ಶೇ.75ರಷ್ಟು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ ಶೇ.90ರಷ್ಟು ಸಹಾಯಧನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಹೋಬಳಿವಾರು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಹಾಗೂ ಸಿರುಗುಪ್ಪದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಅಥವಾ ದೂ.08396-222066 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

English summary
Know How to control wilt disease in Chilli Crop, What are the measures to follow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X