ಲಾಲ್‌ ಬಾಗ್‌ ಹೂವಲ್ಲಿ ಮೈದಾಳಿದ ಸ್ವಾಮಿ ವಿವೇಕಾನಂದ

ಬೆಂಗಳೂರು: 64ನೇ ಗಣರಾಜ್ಯೋತ್ಸವ ನಿಮಿತ್ತ ರಾಜಧಾನಿ ಬೆಂಗಳೂರಿನ ಲಾಲ್‌ ಬಾಗ್‌ ನಲ್ಲಿ ಫ‌ಲಪುಷ್ಪ ಪ್ರದರ್ಶನ ಸಂಭ್ರಮ. ದೇಶ ಕಂಡ ಅಪ್ರತಿಮ ದಾರ್ಶನಿಕ ಸ್ವಾಮಿ ವಿವೇಕಾನಂದರ ಹೂ ಪ್ರತಿಮೆ ಈ ಬಾರಿ ಲಾಲ್‌ ಬಾಗ್‌ ನಲ್ಲಿ ಆಕರ್ಷಣೆಯ ಕೇಂದ್ರವಾಗಿದ್ದು, ಲಾಲ್‌ ಬಾಗ್‌ ಫ‌ಲಪುಷ್ಪ ವೈಭವವನ್ನು ದ್ವಿಗುಣಗೊಳಿಸಲಿದೆ.

'ಪ್ಯಾರಿಸ್‌ ಐಫೆಲ್‌ ಟವರ್‌ ಮುಂಭಾಗ ಸ್ವಾಮಿ ವಿವೇಕಾನಂದರು ನಿಂತಿರುವ ದೃಶ್ಯ'ವನ್ನು ಹೂವುಗಳಲ್ಲಿ ಬಿಡಿಸಲಾಗುತ್ತದೆ. ಸ್ವಾಮಿ ವಿವೇಕಾನಂದರ 150ನೇ ಹುಟ್ಟುಹಬ್ಬ ಆಚರಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸರಕಾರ ಈ ಬಾರಿಯ ಫ‌ಲಪುಷ್ಪ ಪ್ರದರ್ಶನದಲ್ಲಿ ವಿವೇಕಾನಂದರ ಮೇರುವ್ಯಕ್ತಿತ್ವವನ್ನು ಅನಾವರಣಗೊಳಿಸಲಿದೆ.

Bangalore Lalbagh Republic Day Flower Show 2013 Swamy Vivekananda special Attraction

ಸುಮಾರು 34 ಅಡಿ ಎತ್ತರದ ಪ್ಯಾರಿಸ್‌ ಐಫೆಲ್‌ ಟವರ್‌ ಪ್ರತಿರೂಪ ನಿರ್ಮಾಣಕ್ಕಾಗಿ ಲಕ್ಷಕ್ಕೂ ಹೆಚ್ಚು ಹೂವುಗಳನ್ನು ಸುಮಾರು 34 ಲಕ್ಷ ರೂ. ವೆಚ್ಚದಲ್ಲಿ ಬಳಸಲಾಗುತ್ತಿದೆ. ಊಟಿಯಿಂದ ವಿವಿಧ ಬಣ್ಣದ ಗುಲಾಬಿ ಹೂವುಗಳನ್ನು ತರಿಸಲಾಗಿದೆ. ಜ. 18 ರಿಂದ 27ರವರೆಗೆ 2 ಬಾರಿ ಹೂ ಗಳನ್ನು ಬದಲಾಯಿಸಲಾಗುತ್ತದೆ.

ಇದೇ ಜನವರಿ 18 ರಿಂದ 27 ರವರೆಗೆ ಸಸ್ಯಕಾಶಿ ಲಾಲ್‌ ಬಾಗ್‌ಗೆ ಭೇಟಿ ನೀಡಿ ಈ ದೃಶ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಆದರೆ ಲಾಲ್‌ ಬಾಗ್‌ ಫ‌ಲಪುಷ್ಪದಲ್ಲಿ ಇಷ್ಟೇ ಅಲ್ಲ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮೈಸೂರು ಉದ್ಯಾನ ಕಲಾಸಂಘ, ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಲಾಲ್‌ ಬಾಗ್‌ನ ಗಾಜಿನ ಮನೆಯಲ್ಲಿ ಪ್ರತಿವರ್ಷದಂತೆ ಇನ್ನೂ ಏನೇನೋ ಆಕರ್ಷಣೆಗಳಿವೆ.

ಈ ಬಾರಿ ಫ‌ಲಪುಷ್ಪ ಪ್ರದರ್ಶನಕ್ಕೆ 5 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ. ಫ‌ಲಪುಷ್ಪ ಪ್ರದರ್ಶನ ವೀಕ್ಷಣೆಗಾಗಿ ಲಾಲ್‌ ಬಾಗ್‌ ನತ್ತ ನೂರಾರು ಕಾರು, ಖಾಸಗಿ ಬಸ್‌ ಹಾಗೂ ದ್ವಿಚಕ್ರ ವಾಹನಗಳಲ್ಲಿ ಜನ ಆಗಮಿಸಲಿದ್ದಾರೆ. ವಾಹನ ಸವಾರರು ಪಾರ್ಕಿಂಗ್‌ ಗಾಗಿ ಶಾಂತಿ ನಗರ ಬಸ್‌ ನಿಲ್ದಾಣ, ಹೊಂಬೇಗೌಡ ಆಟದ ಮೈದಾನ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳನ್ನು ಪಾರ್ಕಿಂಗ್‌ ಗಾಗಿ ಬಳಸಿಕೊಳ್ಳಬಹುದು ಎಂದು ಮೈಸೂರು ಉದ್ಯಾನ ಕಲಾ ಸಂಘ ಕಾರ್ಯದರ್ಶಿ ವಿಕೆ ರಾಜಗೋಪಾಲ್‌ ತಿಳಿಸಿದ್ದಾರೆ.

ಕಳೆದ ಬಾರಿ ಗಣರಾಜ್ಯೋತ್ಸವ ಫ‌ಲಪುಷ್ಪ ಸಂದರ್ಭದಲ್ಲಿ ದೊಡ್ಡವರಿಗೆ 30 ರೂ. ಗಳಿದ್ದ ಪ್ರವೇಶ ಶುಲ್ಕವನ್ನು ಈ ಬಾರಿ 40 ರೂ. ಗೆ ಹೆಚ್ಚಿಸಲಾಗಿದೆ. ಮಕ್ಕಳಿಗೆ ಎಂದಿನಂತೆ 10 ರೂ. ಶುಲ್ಕ ಇರುತ್ತದೆ. ಆದರೆ ಜ 26 ರಂದು ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷದ ಲಾಲ್‌ ಬಾಗ್ ಫ‌ಲಪುಷ್ಪ ಪ್ರದರ್ಶನ ಸಂಭ್ರಮ ವೀಕ್ಷಿಸಬೇಕೇ? ಇಲ್ಲಿ ಕ್ಲಿಕ್ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+