ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸರ್ಕಾರದಿಂದ ದೇಶ ದ್ರೋಹದ ಕೆಲಸ: ರೈತ ಸಂಘ

|
Google Oneindia Kannada News

ಬೆಂಗಳೂರು, ಜೂನ್ 12: ಕರ್ನಾಟಕ ಸರಕಾರ ಸಚಿವ ಸಂಪುಟದಲ್ಲಿ ರಾಜ್ಯದ ಕೃಷಿ ಜಮೀನುಗಳನ್ನು ಯಾರು ಬೇಕಾದರೂ ಹೊಂದಲು ಅವಕಾಶ ನೀಡುವ ಉದ್ದೇಶದಿಂದ ಭೂ ಸುಧಾರಣಾ ಕಾಯ್ದೆ- 1961 ರ ಕಲಂ 79 (ಎ) ಮತ್ತು (ಬಿ) ಗಳನ್ನು ರದ್ದು ಪಡಿಸುವುದಾಗಿ ಘೋಷಿಸಿರುವುದು ರಾಜ್ಯವನ್ನು ಅಧೋಗತಿ ತಳ್ಳುವ ಮತ್ತು ಕಾರ್ಪೊರೇಟ್ ಕಂಪನಿಗಳ ವಶ ಮಾಡುವ ಗುಲಾಮಿತನದ ಹಾಗೂ ಶತಮೂರ್ಖತನದ ಪ್ರತೀಕವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆರೋಪಿಸಿದೆ.

Recommended Video

Bengaluru corona cases are getting scarier everyday | Bengaluru | Oneindia Kannada

ಇದು ವ್ಯವಸಾಯದಲ್ಲಿ ತೊಡಗಿರುವ ಎಲ್ಲ ರೈತರು ಹಾಗೂ ಗೇಣಿದಾರರು, ಕೃಷಿಕೂಲಿಕಾರರು ಕಾರ್ಮಿಕರು, ಕಸುಬುದಾರರು, ಅವರನ್ನು ಆಧರಿಸಿದ ಸಣ್ಣ ವ್ಯಾಪಾರಿಗಳು, ಕೃಷಿ ವ್ಯಾಪಾರಿಗಳು, ಒಟ್ಟಾರೆ, ಗ್ರಾಮೀಣ ಪ್ರದೇಶವನ್ನೇ ಮಸಣ ಮಾಡುವ ಮತ್ತು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ನಾಶ ಮಾಡುವ ಹಾಗೂ ರಾಜ್ಯವನ್ನು ಅತ್ಯಂತ ಗಂಭೀರವಾದ ಮತ್ತು ಆಳವಾದ ಸಂಕಟಕ್ಕೀಡು ಮಾಡುವ ದುಷ್ಕೃತ್ಯವಾಗಿದೆ.

ಮೋದಿ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ಮೋದಿ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ಇದು, ಕೃಷಿ ಭೂಮಿಯನ್ನು ಪಡೆಯುವ ಮೂಲಕ ಶತಶತಮಾನಗಳ ಅಮಾನವೀಯ ಜಾತಿ ತಾರತಮ್ಯ ಹಾಗೂ ಅಸ್ಪೃಶ್ಯಾಚರಣೆಯ ಶೋಷಣೆಯಿಂದ ಹೊರ ಬರಲು ಹಾಗೂ ಆ ಮೂಲಕ ಸ್ವತಂತ್ರ ಹಾಗೂ ಸ್ವಾವಲಂಬಿ ಹಾದಿ ಹಿಡಿಯಲು ತವಕಿಸುತ್ತಿರುವ ರಾಜ್ಯದ ಕೊಟ್ಯಾಂತರ ದಲಿತರು, ಮಹಿಳೆಯರು, ಹಿಂದುಳಿದ ಹಾಗೂ ಮುಂದುವರಿದ ಜಾತಿಗಳ ಗ್ರಾಮೀಣ ಬಡವರ ಆಶಯಗಳನ್ನು ಮಣ್ಣು ಪಾಲು ಮಾಡುತ್ತದೆ ಎಂದು ಆಕ್ರೋಶ ವ್ಯಕ್ತವಾಗಿದೆ.

 ಕಾರ್ಪೊರೇಟ್ ಕಂಪನಿಗಳ ಕೈಗೆ ರಾಜ್ಯ

ಕಾರ್ಪೊರೇಟ್ ಕಂಪನಿಗಳ ಕೈಗೆ ರಾಜ್ಯ

ಇದು ದೇಶವನ್ನು ಮತ್ತು ರಾಜ್ಯವನ್ನು ಕಾರ್ಪೊರೇಟ್ ಕಂಪನಿಗಳ ಕೈಗೆ ನೇರವಾಗಿ ಹಾಗೂ ಅತ್ಯಂತ ವೇಗವಾಗಿ ವರ್ಗಾಯಿಸುವ ಮತ್ತು ದೇಶದ ಹಾಗೂ ರಾಜ್ಯದ ಆಹಾರದ ಸ್ವಾವಲಂಬನೆಗೆ ಮತ್ತು ದೇಶದ ಸ್ವಾತಂತ್ರ್ಯ ವನ್ನು ಕಾರ್ಪೊರೇಟ್ ಕಂಪನಿಗಳಿಗೆ ಒತ್ತೆ ಇಡುವ ದೇಶ ದ್ರೋಹದ ಗುಲಾಮಿ ನಿರ್ಧಾರವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಕಟುವಾಗಿ ವಿಮರ್ಶಿಸಿದೆ.

ದೇಶ ಹಾಗೂ ರಾಜ್ಯವನ್ನು ಕರೋನಾ - 19 ರ ಸಂಕಟದಿಂದ ಬಿಡುಗಡೆ ಮಾಡುವ ಕೆಲಸದಲ್ಲಿ ತನ್ನನ್ನು ತೊಡಗಿಸಿ ಕೊಳ್ಳುವ ಬದಲು, ಅವರನ್ನು ರೋಗದಿಂದ ಸಾಯಲು ಬಿಟ್ಟು, ಬಿಜೆಪಿ, ತನಗೆ ಜನತೆ ನೀಡಿರುವ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು, ಕಾರ್ಪೊರೇಟ್ ಕಂಪನಿಗಳ ಗುಲಾಮಿ ರಾಷ್ಟ್ರವಾಗಿ ಪರಿವರ್ತಿಸಲು ಕ್ರಮವಹಿಸುತ್ತಿದೆ.

ಕೃಷಿ ಬಿಕ್ಕಟ್ಟಿಗೆ ಪರಿಹಾರ ರೈತರ ಹೊಲದಲ್ಲಿಲ್ಲ, ಬದಲಿಗೆ...ಕೃಷಿ ಬಿಕ್ಕಟ್ಟಿಗೆ ಪರಿಹಾರ ರೈತರ ಹೊಲದಲ್ಲಿಲ್ಲ, ಬದಲಿಗೆ...

 ಕೇಂದ್ರದಿಂದ ದೇಶ ವಿರೋಧಿ ಮೂರು ಸುಗ್ರೀವಾಜ್ಞೆ

ಕೇಂದ್ರದಿಂದ ದೇಶ ವಿರೋಧಿ ಮೂರು ಸುಗ್ರೀವಾಜ್ಞೆ

ಅದಾಗಲೇ, ಜೂನ್ 15 ರಂದು ದೇಶ ವಿರೋಧಿ ಮೂರು ಸುಗ್ರೀವಾಜ್ಞೆ ಗಳನ್ನು ಕೇಂದ್ರ ಸರಕಾರ ಹೊರಡಿಸಿ,ಮುಂಗಡ ವ್ಯಾಪಾರ ಮತ್ತು ಕಂಪನಿಗಳ ಗುತ್ತಿಗೆ ಬೇಸಾಯಕ್ಕೆ ನೆರವಾಗುವ ಮೂಲಕ ಕೃಷಿ ಹಾಗೂ ಕೈಗಾರಿಕೆಗಳನ್ನು ಮತ್ತು ದೇಶವನ್ನು ಕಾರ್ಪೊರೇಟ್ ಕಂಪನಿಗಳ ಕೈಗೆ ವರ್ಗಾಯಿಸುವ ನಿರ್ಧಾರವನ್ನು ಕೈಗೊಂಡಿದೆ.

ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ಕಾರ್ಪೊರೇಟ್ ಕಂಪನಿಗಳಿಗೆ ಜಮೀನುಗಳನ್ನು, ನೇರವಾಗಿ ಒದಗಿಸುವ ಹಾಗೂ ಆ ಮೂಲಕ ರಾಜ್ಯವನ್ನು ಹಾಳುಗೆಡಹುವ ಕ್ರಮಕ್ಕೆ ರಾಜ್ಯ ದ ಈ ಘನ ಸರಕಾರ ಈ ಮೂಲಕ ಮುಂದಾಗುತ್ತಿದೆ. ಇದು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾರ್ಪೊರೇಟ್ ಕಂಪನಿಗಳ ಸೇವೆಯನ್ನು ಪೈಪೋಟಿಯಲ್ಲಿ ಕೈಗೊಳ್ಳುತ್ತಿರುವುದನ್ನು ಬಹಿರಂಗ ಪಡಿಸುತ್ತಿದೆ.

MSP ಹೆಸರಿನಲ್ಲಿ ರೈತರಿಗೆ ದ್ರೋಹವೆಸಗಿದ ಬಿಜೆಪಿ: ರೈತ ಸಂಘMSP ಹೆಸರಿನಲ್ಲಿ ರೈತರಿಗೆ ದ್ರೋಹವೆಸಗಿದ ಬಿಜೆಪಿ: ರೈತ ಸಂಘ

 ಉಳುವವನೇ ಭೂಮಿ ಒಡೆಯ ಆಶಯಕ್ಕೆ ವಿರುದ್ಧ

ಉಳುವವನೇ ಭೂಮಿ ಒಡೆಯ ಆಶಯಕ್ಕೆ ವಿರುದ್ಧ

ಸ್ವಾತಂತ್ರ ಕಾಲದಿಂದಲೇ, ಉಳುವವನೇ ಭೂಮಿ ಒಡೆಯನಾಗಬೇಕೆಂಬ ಹಕ್ಕೊತ್ತಾಯ ಮತ್ತು ಕ್ಯೋಟ್ಯಂತರ ಗ್ರಾಮೀಣ ಜನತೆಯ ಅಪಾರ ತ್ಯಾಗ ಬಲಿದಾನದ ವೀರ ಗಾಥೆಗೆ, ಅದರ ಆಶಯಕ್ಕೆ ಈ ನಿರ್ಧಾರ ಎಳ್ಳು ನೀರು ಬಿಡಲಿದೆ. ಅದೇ ರೀತಿ, ಅಂತಹ ಬೃಹತ್ ಹೋರಾಟದ ಕಾರಣದಿಂದ ಮತ್ತು ದೇಶದ ಸಮಗ್ರ ಅಭಿವೃದ್ಧಿಯ ಕಾರಣದಿಂದ ಪಾಳೆಯಗಾರಿ ವಿರೋಧಿಯಾದ ಭೂಸುಧಾರಣೆಯ ಕಾಯ್ದೆಯು ಜಾರಿಗೆ ತರಲಾಗಿತ್ತು. ಮಿತಿಗಳನ್ನು ಹೊಂದಿದ್ದರೂ, ಕರ್ನಾಟಕ ಭೂ ಸುಧಾರಣಾ ಕಾಯ್ದೆ - 1961 ರ ಮೂಲ ಉದ್ದೇಶಗಳನ್ನೇ ಸರಕಾರದ ಈ ನಿಲುಮೆ ಬುಡ ಮೇಲು ಮಾಡುತ್ತದೆ.

MSP ಘೋಷಿಸಿದ ಕೇಂದ್ರ-MSP ಘೋಷಿಸಿದ ಕೇಂದ್ರ-"ಕಾಣ್ತಾ ಇದೆ ಕಾಣ್ತಾ ಇಲ್ಲಾ ಸ್ವಾಮಿ"

ಇದರ ಕಲಂ 79(ಎ) ಮತ್ತು( ಬಿ) ಗಳು ಕೃಷಿ ಭೂಮಿಯನ್ನು ಹೊಂದಲು ವ್ಯವಸಾಯದಲ್ಲಿ ತೊಡಗಿರದ ಯಾವುದೇ ವ್ಯಕ್ತಿಗಳನ್ನು, ಸಂಸ್ಥೆಗಳನ್ನು ಮತ್ತು ಕಂಪನಿಗಳನ್ನು ನಿಷೇಧಿಸಿತ್ತು. ಆ ಮೂಲಕ ಒಂದು ಕಡೆ, ಕೃಷಿಯಲ್ಲಿ ತೊಡಗಿರುವವರ ಉದ್ಯೋಗ ಭದ್ರತೆ, ರಾಜ್ಯದ ಆಹಾರದ ಸ್ವಾವಲಂಬನೆ, ಕೃಷಿ ಆಧಾರಿತ ಕೈಗಾರಿಕೆಗಳಿಗೆ ಕಚ್ಚಾ ಮಾಲು ಒದಗಿಸುವ ರಾಜ್ಯದ ಅಭಿವೃದ್ಧಿಯ ಘನ ಉದ್ದೇಶವನ್ನು ಹೊಂದಿದ್ದಿತು.ಇನ್ನೊಂದು ಕಡೆ, ಅದು, ಅರೇ ಪಾಳೆಯಗಾರಿ ದೌರ್ಜನ್ಯಕ್ಕೊಳಗಾದವರ, ಜಾತಿ ಹಾಗೂ ಲಿಂಗ ತಾರತಮ್ಯ ಮತ್ತು ಅಸ್ಪೃಶ್ಯಾಚರಣೆಯ ವಿಮೋಚನೆಯ ನಿರೀಕ್ಷೆಗಳ ಆಶಯಗಳಾಗಿತ್ತು.

 ಕರ್ನಾಟಕ ಭೂ ಸುಧಾರಣಾ ಕಾಯ್ದೆ ದುರ್ಬಲ

ಕರ್ನಾಟಕ ಭೂ ಸುಧಾರಣಾ ಕಾಯ್ದೆ ದುರ್ಬಲ

ಸದರಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ - 1961 ರ ಸದರಿ ಕಲಂಗಳನ್ನು ಹಿಂದಿನ ಸಿದ್ದರಾಮಯ್ಯನವರ ಕಾಂಗ್ರೆಸ್ ನೇತ್ರತ್ವದ ಸರಕಾರ ವಾರ್ಷಿಕ 20 ಲಕ್ಷ ರೂ ಕೃಷಿಯೇತರ ಆದಾಯ ಹೊಂದಿರುವ ಯಾರು ಬೇಕಾದರೂ ಕೃಷಿ ಭೂಮಿ ಹೊಂದಲು ಅವಕಾಶ ನೀಡುವಂತೆ ತಿದ್ದುಪಡಿ ಮಾಡಿ ದುರ್ಬಲ ಗೊಳಿಸಿತ್ತು.

ಇದೀಗ ಬಿಜೆಪಿಯ ಈ ರಾಜ್ಯ ಸರಕಾರ ಈ ಕಲಂಗಳನ್ನೇ ತೆಗೆದು ಹಾಕಲು ಮುಂದಾಗುತ್ತಿದೆ ಈ ನಿರ್ಧಾರವು, ಅದಾಗಲೇ ಕಾನೂನು ಬಾಹಿರವಾಗಿ, ಕಪ್ಪು ಹಣ ಹೊಂದಿದ ಖದೀಮರು, ದೌರ್ಜನ್ಯಗಳ ಮೂಲಕ ರೈತರಿಂದ ಬಲವಂತವಾಗಿ, ವಶಪಡಿಸಿಟ್ಟುಕೊಂಡ ಸಾವಿರಾರು ಎಕರೆ ಜಮೀನುಗಳನ್ನು, ರೈತ ವಿರೋಧಿಯಾಗಿ ಕಾನೂನು ಬದ್ಧಗೊಳಿಸಲಿದೆ.

ಮುಂಗಾರು ಆರಂಭ; ರೈತರ ನೆರವಿಗೆ ಬಂದ ಕೇಂದ್ರ ಸರ್ಕಾರಮುಂಗಾರು ಆರಂಭ; ರೈತರ ನೆರವಿಗೆ ಬಂದ ಕೇಂದ್ರ ಸರ್ಕಾರ

ಕರ್ನಾಟಕ ಪ್ರಾಂತ ರೈತ ಸಂಘ ಇಂತಹ ದೇಶದ್ರೋಹಿ ನಿರ್ಧಾರವನ್ನು ಬಲವಾಗಿ ಪ್ರತಿರೋಧಿಸುತ್ತದೆ. ಕೂಡಲೇ ಅಂತಹ ದುಷ್ಠ ನಿರ್ಧಾರವನ್ನು ಕೈ ಬಿಡುವಂತೆ ಒತ್ತಾಯಿಸುತ್ತದೆ. ಅದೇ ರೀತಿ, ಇಂತಹ ದುಷ್ಟ ಯೋಜನೆಗಳನ್ನು ಗ್ರಾಮೀಣ ಹಾಗೂ ನಗರದ ಜನತೆ ಒಟ್ಟಾಗಿ ಪ್ರತಿರೋಧಿಸಿ, ಹಿಮ್ಮೆಟ್ಟಿಸುವಂತೆ ಕರೆ ನೀಡುತ್ತದೆ.

English summary
Karnataka Land Reforms Act is amended to help corporates with which non farmers can own farmlands in state now allges Karnataka Prantha Raitha Sangha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X