ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಡಿಕೆ ಬಜೆಟ್ : ರೈತಸ್ನೇಹಿ, ಅಭಿವೃದ್ಧಿ ಪೂರಕ ಆಯವ್ಯಯ ನಿರೀಕ್ಷೆ

By Mahesh
|
Google Oneindia Kannada News

Recommended Video

Karnataka Budget 2018 : ರೈತಸ್ನೇಹಿ, ಅಭಿವೃದ್ಧಿ ಪೂರಕ ಬಜೆಟ್ ನಿರೀಕ್ಷೆ | Oneindia Kannada

ಬೆಂಗಳೂರು, ಜುಲೈ 03: ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೊಟ್ಟ ಮೊದಲ ಬಜೆಟ್ ಮಂಡನೆ ಮಾಡಲು ಮುಖ್ಯಮಂತ್ರಿ ಕಮ್ ವಿತ್ತ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಸಿದ್ಧರಾಗಿದ್ದಾರೆ. 2018-19ನೇ ಸಾಲಿನಲ್ಲಿ ಇದು ಕರ್ನಾಟಕ ಕಾಣಲಿರುವ ಎರಡನೇ ಬಜೆಟ್ ಇದಾಗಲಿದೆ.

ವಿಧಾನ ಸಭೆ ಚುನಾವಣೆಗೂ ಮುನ್ನ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 6ನೇ ಬಾರಿ, ಹಣಕಾಸು ಸಚಿವರಾಗಿ 13ನೇ ಬಾರಿ ಬಜೆಟ್ ಮಂಡಿಸಿದ್ದರು. ಈಗ ಗುರುವಾರಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿರುವ ಅಧಿವೇಶನದಲ್ಲಿ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ.

ಬಜೆಟ್‌ನಲ್ಲಿ ಬೆಂಗಳೂರಿಗೆ ಭರ್ಜರಿ ಕೊಡುಗೆ ಕೊಡುತ್ತಾರಾ ಕುಮಾರಸ್ವಾಮಿ?ಬಜೆಟ್‌ನಲ್ಲಿ ಬೆಂಗಳೂರಿಗೆ ಭರ್ಜರಿ ಕೊಡುಗೆ ಕೊಡುತ್ತಾರಾ ಕುಮಾರಸ್ವಾಮಿ?

ಹಲವು ಮಹತ್ವಪೂರ್ಣ ಕಾರ್ಯಕ್ರಮಗಳನ್ನು ಪ್ರಕಟಿಸುವ ಹಾಗೂ ಹಾಲಿ ಜನಪ್ರಿಯ ಯೋಜನೆಗಳನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆಗಳಿವೆ.

ಜನಸಾಮಾನ್ಯರ ಮೇಲೆ ಹೆಚ್ಚಿನ ತೆರಿಗೆ ಹೊರೆ ಹೇರದೆ ಪರ್ಯಾಯ ಮೂಲಗಳಿಂದ ಹೆಚ್ಚಿನ ಆದಾಯ ಸಂಗ್ರಹಿಸಲು ಒತ್ತು ನೀಡಲಿದ್ದಾರೆ. ಮದ್ಯ, ಸಿಗರೇಟು ಸೇರಿದಂತೆ ವ್ಯಸನಗಳಿಗೆ ಅಂಟಿಕೊಂಡವರಿಗೆ ಬಜೆಟ್ ಭಾರವಾಗಲಿದೆ.

ರೈತರ ಸಾಲ ಮನ್ನಾ

ರೈತರ ಸಾಲ ಮನ್ನಾ

ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲದ ಕಾರಣ, ಬೆಳೆ ಸಾಲ ಮನ್ನಾ ಮಾಡಲು ಸರ್ಕಾರ ಮುಂದಾಗಿದೆ. ರಾಷ್ಟ್ರೀಕೃತ ಹಾಗೂ ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ ಪಡೆದ ಸಾಲ ಕೂಡಾ ಮನ್ನಾ ಆಗಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 53,000 ಕೋಟಿ ರು ಹೊರೆ ಬೀಳಲಿದೆ. ಇದರ ಜತೆಗೆ ಸ್ವಸಹಾಯ ಸಂಘಗಳಲ್ಲಿ ಮಹಿಳೆಯರು ಮಾಡಿರುವ ಸಾಲವನ್ನು ಮನ್ನಾ ಮಾಡಲು ಕುಮಾರಸ್ವಾಮಿ ಮುಂದಾಗಿದ್ದಾರೆ.

ನೀರಾವರಿ

ನೀರಾವರಿ

ನೀರಾವರಿ ಕಾರಣಕ್ಕಾಗಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಪಡೆಯಲು ರೈತರು ಸಲ್ಲಿಸಿರುವ ಎಲ್ಲ ಅರ್ಜಿಗಳನ್ನು ಅಕ್ಟೋಬರ್ 2018ರ ಹೊತ್ತಿಗೆ ಸರ್ಕಾರ ಇತ್ಯರ್ಥಗೊಳಿಸುತ್ತದೆ. ಮತ್ತು ವಿದ್ಯುತ್ ಸಂಪರ್ಕ ನೀಡಲಿದೆ.

ಹನಿ ನೀರಾವರಿ ಪದ್ಧತಿಯನ್ನು ರೈತರು ಹೆಚ್ಚು ಬಳಸಲು ಆರಂಭಿಸಿದ್ದಾರೆ. ಆದರೆ, ವಿದ್ಯುತ್ ಸಮಸ್ಯೆಯಿಂದಾಗಿ ಈ ಪದ್ಧತಿ ನಿರೀಕ್ಷಿತ ಫಲ ಕಾಣುತ್ತಿಲ್ಲ. ಈ ವ್ಯವಸ್ಥೆಗೆ ಬೇಕಾದ ಯಂತ್ರಗಳಿಗೆ ಸೋಲಾರ್ ಶಕ್ತಿ ವಿನಿಯೋಗಿಸಿದರೆ ವಿದ್ಯುತ್ ಮೇಲಿನ ಅವಲಂಬನೆ ತಪ್ಪಲಿದೆ. ಇದಕ್ಕಾಗಿ ನಮ್ಮ ಸರ್ಕಾರ ಸಂಶೋಧನಾ ಸಂಸ್ಥೆಗಳೊಂದಿಗೆ ಚರ್ಚಿಸಿ ರೈತರಿಗೆ ಸೌರಶಕ್ತಿ ಆಧಾರಿತ ಯಂತ್ರಗಳನ್ನು ಪೂರೈಸಲಿದೆ.

ಬಜೆಟ್‌ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?, ವಿಡಿಯೋ ವೈರಲ್ಬಜೆಟ್‌ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?, ವಿಡಿಯೋ ವೈರಲ್

ಆರೋಗ್ಯ ಸೇವೆ

ಆರೋಗ್ಯ ಸೇವೆ

ಎಲ್ಲ ನಾಗರಿಕರಿಗೂ ಸಮರ್ಪಕ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವ ನೂತನ ಆರೋಗ್ಯ ಸೇವಾ ವ್ಯವಸ್ಥೆಯ ಅಡಿಯಲ್ಲಿ ಎಲ್ಲ ವಲಯದ, ಅಂದರೆ ಸಾರ್ವಜನಿಕ ಹಾಗೂ ಖಾಸಗಿವಲಯಗಳೆರಡರ ನೋಂದಾಯಿತ ವೈದ್ಯರ ನೆಟ್‍ವರ್ಕ್-ಜಾಲ ಸ್ಥಾಪನೆ ನಿರೀಕ್ಷೆ.

ಗರ್ಭಿಣಿಯರಿಗೆ ಹೆರಿಗೆ ಪೂರ್ವ, ಹೆರಿಗೆ ನಂತರ ಮೂರು ತಿಂಗಳುಗಳ ಕಾಲ ಮಾಸಿಕ 6000 ರೂಪಾಯಿಗಳ ಸಹಾಯಧನ ನೀಡಲಾಗುತ್ತದೆ.

ಕ್ಯಾನ್ಸರ್, ಕಿಡ್ನಿ, ಹೃದಯರೋಗಿಗಳಿಗೆ ಅಗತ್ಯವಿರುವ ತುರ್ತು ಸೇವೆಗಳನ್ನು ಒದಗಿಸುವ ಉದ್ದೇಶದಿಂದ ರಾಜ್ಯದ ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಗುಲ್ಬರ್ಗ ನಗರಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪನೆ.

ಮನೆ ಬಾಗಿಲಿಗೇ ಜನರಿಕ್ ಔಷಧ : ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಪಸ್ಮಾರದ ರೀತಿಯ ದೀರ್ಘ ಕಾಲಿಕ ಕಾಯಿಲೆಗಳನ್ನು ಹೊಂದಿರುವ ಎಲ್ಲ ನೋಂದಾಯಿತ ವ್ಯಕ್ತಿಗಳಿಗೆ, ಮಾಸಿಕ ಆಧಾರದಲ್ಲಿ ಅವರ ಮನೆ ಬಾಗಿಲಿಗೆ ಉಚಿತ "ಜೆನರಿಕ್ ಔಷಧ" ನೀಡಲಾಗುತ್ತದೆ.

ಜಲ ಸಂಪನ್ಮೂಲ

ಜಲ ಸಂಪನ್ಮೂಲ

ಕರ್ನಾಟಕದಲ್ಲಿ ನೀರಾವರಿ ಸೌಲಭ್ಯದ ಅಭಿವೃದ್ಧಿಗೆ ಪ್ರಮುಖ ಆದ್ಯತೆಯನ್ನು ನಾವು ನೀಡಲಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ ನೀರಾವರಿ ಸೌಲಭ್ಯಗಳ ಅಭಿವೃದ್ಧಿಗೆ 1,50,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವ ಉದ್ದೇಶವನ್ನು ಜೆಡಿಎಸ್ ಹೊಂದಿದೆ.
* ಕಾವೇರಿಯಿಂದ ಹೆಚ್ಚುವರಿ 15 ಟಿಎಂಸಿ ಅಡಿ ಪ್ರಮಾಣದ ನೀರು ಬಳಕೆ.
* ಕೋಲಾರ -ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 60 ಟಿಎಂಸಿ ನೀರು ಹರಿಸಲು ಪಶ್ಚಿಮ ಘಟ್ಟದ ನದಿಗಳ ನೆರವು. ಇದು ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರವಾಗಲಿದೆ.

ಕೈಗಾರಿಕೆ

ಕೈಗಾರಿಕೆ

2000 ಕೋಟಿ ರೂಪಾಯಿಗಳ ಹೂಡಿಕೆ ಮತ್ತು ಖಾಸಗಿ ಹೂಡಿಕೆದಾರ ಮೂಲಕ 3000 ಕೋಟಿ ರೂಪಾಯಿಗಳ ಹೂಡಿಕೆ ಮಾಡುವ ಜತೆಗೆ, ಮುಂದಿನ ಐದು ವರ್ಷಗಳಲ್ಲಿ 2 ಲಕ್ಷ ಕುಟುಂಬಗಳಿಗೆ ಉದ್ಯೋಗ ಒದಗಿಸುವ ಉದ್ದೇಶವನ್ನು ಜೆಡಿಎಸ್ ಹೊಂದಿದೆ.
ಕಲಬುರಗಿಯನ್ನು ಸೋಲಾರ್ ಜಿಲ್ಲೆಯನ್ನಾಗಿ ಪರಿವರ್ತಿಸಲಾಗುವುದು. ಒಟ್ಟಾರೆ, 5 ವರ್ಷಗಳಲ್ಲಿ 1 ಕೋಟಿಗೂ ಅಧಿಕ ಉದ್ಯೋಗ ಸೃಷ್ಟಿ.

English summary
Karnataka Budget 2018-19 : All eyes are again on Chief Minister and Finance Minister HD Kumaraswamy with many more expectations. Kumaraswamy will preset first budget on Thursday, July 05, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X