ಕರ್ನಾಟಕ ಬಂದ್ ಅಪ್ಡೇಟ್: ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ
ಬೆಂಗಳೂರು, ಸೆ. 05: ಕಬ್ಬು ಬೆಳೆಗಾರರ ಸಮಸ್ಯೆ ನಿವಾರಿಸುವಲ್ಲಿ ಸರ್ಕಾರದ ನಿರ್ಲಕ್ಷ್ಯ ತೋರುತ್ತಿದೆ. ಈ ಬಗ್ಗೆ ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ರಾಜ್ಯದ ಕೆಲ ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಬೆಂಗಳೂರಿನ ಅನೇಕ ಸಂಘಟನೆಗಳು ಸ್ಪಂದಿಸಿಲ್ಲದ ಕಾರಣ, ಬೆಂಗಳೂರಿನಲ್ಲಿ ಶಾಲೆಗಳು ತೆರೆದಿವೆ, ಶಿಕ್ಷಕರ ದಿನಾಚರಣೆ, ಶ್ರೀಕೃಷ್ಣ ಜನ್ಮಾಷ್ಟಮಿ ಸಮಾರಂಭ ಸಾಂಗವಾಗಿ ಸಾಗುತ್ತಿದೆ. ಸರ್ಕಾರಿ ಬಸ್ ಗಳು ಎಂದಿನಂತೆ ಸಂಚರಿಸುತ್ತಿವೆ. ಕ್ಯಾಬ್ ಮಾಲೀಕರ ಒಂದು ಸಂಘಟನೆ ಬೆಂಬಲ ನೀಡಿದ್ದರೂ ಆಟೋರಿಕ್ಷಾ ಹಾಗೂ ಕ್ಯಾಬ್ ಸಂಚಾರದಲ್ಲೂ ವ್ಯತ್ಯಾಸ ಕಂಡು ಬಂದಿಲ್ಲ.

* ಮೈಸೂರು, ದಾವಣಗೆರೆ ಸೇರಿದಂತೆ ಕಬ್ಬು ಬೆಳೆಯುವ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ.
* 35ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ. ಅದರೆ, ಬಂದ್ ನ ತೀವ್ರತೆ ಎಲ್ಲೂ ಕಂಡು ಬಂದಿಲ್ಲ. [ಸೆ.5ರ ಕರ್ನಾಟಕ ಬಂದ್, ರೈತರ ಬೇಡಿಕೆಗಳೇನು?]
* ಎಲ್ಲಾ ಹಳ್ಳಿಗಳ ರಸ್ತೆಗಳಲ್ಲೇ ಅಡುಗೆ ಮಾಡಿ ರೈತರು ಬಂದ್ ಆಚರಿಸಲಿದ್ದಾರೆ. ಬೆಂಗಳೂರು ಜನರು ಸ್ವಯಂ ಪ್ರೇರಿತರಾಗಿ ಬಂದ್ ಗೆ ಸಹಕರಿಸಬೇಕು. ವ್ಯಕ್ತಿ ಪ್ರತಿಷ್ಠೆ ಬೇಡ, ರೈತರ ಶಕ್ತಿಗಾಗಿ ಬಂದ್ ಮಾಡಿ ಎಂದು ಕುರುಬೂರು ಶಾಂತಕುಮಾರ್ ಮನವಿ ಮಾಡಿದ್ದಾರೆ.












Click it and Unblock the Notifications