'ನೀರು ಮೊದಲು, ಧರ್ಮ ಆಮೇಲೆ': ಕಳಸಾ-ಬಂಡೂರಿ ಹೋರಾಟಗಾರರ ಒತ್ತಾಯ

ನರಗುಂದ, ಏಪ್ರಿಲ್ 12: ಮೊದಲು ನೀರು ಕೊಡಿ, ಆಮೇಲೆ ಧರ್ಮದ ಬಗ್ಗೆ ಮಾತನಾಡಿ ಎನ್ನುತ್ತಿರುವ ಕಳಸಾ-ಬಂಡೂರಿ ಹೋರಾಟಗಾರರು ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ವಿರುದ್ಧ ತಿರುಗಿಬಿದ್ದಿದ್ದಾರೆ.

ನಿನ್ನೆಗೆ (ಏಪ್ರಿಲ್ 11) ಕ್ಕೆ ಕಳಸಾ-ಬಂಡೂರಿ ಹಾಗೂ ಮಹದಾಯಿ ಹೋರಾಟಕ್ಕೆ ಬರೋಬ್ಬರಿ 1000 ದಿನ ತುಂಬಿದ್ದು, ನಿನ್ನೆಯೂ ಕೂಡ ಸಾವಿರಾರು ರೈತರು ನರಗುಂದದ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ನೀರಿಗಾಗಿ ಒತ್ತಾಯಿಸಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ನಿನ್ನೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ನರಗುಂದದಲ್ಲಿಯೇ ಇದ್ದು, ಅಲ್ಲಿ ರೋಡ್‌ ಶೋ ಸಹ ಮಾಡಿದರು. ಕುಮಾರಸ್ವಾಮಿ ಅವರು ರೈತ ನಾಯಕರನ್ನು ಭೇಟಿ ಆಗಲು ಇಂಗಿತ ವ್ಯಕ್ತಪಡಿಸಿದರು ಆದರೆ ಅದಕ್ಕೆ ಹೋರಾಟಗಾರರು ಅವಕಾಶ ನೀಡಲಿಲ್ಲ.

Kalasa-Banduri protest completes 1000 days

ರಾಜಕೀಯ ನಾಯಕನ ಆಹ್ವಾನ ತಿರಸ್ಕರಿಸುವ ಮೂಲಕ ರೈತ ನಾಯಕರು ಎಲ್ಲಾ ರಾಜಕೀಯ ಪಕ್ಷಗಳಿಗೆ ಸ್ಪಷ್ಟವಾದ ಸಂದೇಶವನ್ನು ರವಾನಿಸಿದ್ದು, ತಮ್ಮ ಹೋರಾಟ ಪಕ್ಷೇತರವಾದುದು, ನೀರಿನ ವಿಷಯದಲ್ಲಿ ರಾಜಕೀಯ ಸಲ್ಲ ಎಂಬುದನ್ನು ಸೂಚ್ಯಗೊಳಿಸಿದ್ದಾರೆ.

Kalasa-Banduri protest completes 1000 days

ಹೋರಾಟಕ್ಕೆ 1000 ದಿನವಾದರೂ ರಾಜಕೀಯ ಪಕ್ಷಗಳು ರೈತರ ಸಮಸ್ಯೆ ಇಥ್ಯರ್ಥ ಪಡಿಸಲು ಮುಂಬರದೇ ಇರುವುದನ್ನು ವಿರೋಧಿಸಿ ಸ್ವಾಮೀಜಿಯೊಬ್ಬರು ಮೈಮೇಲೆ ಸಗಣಿ ಸುರಿದುಕೊಂಡು ಪ್ರತಿಭಟನೆ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+