ಕಲಬುರಗಿ ರೈತರಿಗೆ ನೆಮ್ಮದಿ ತಂದ ಕೃಷಿಭಾಗ್ಯ!

ಕಲಬುರಗಿ, ಜುಲೈ 18 : ಮಳೆಯಾಶ್ರಿತ ಪ್ರದೇಶದ ರೈತರ ಜೀವನೋಪಾಯ ಉತ್ತಮಪಡಿಸಲು ಕರ್ನಾಟಕ ಸರ್ಕಾರ 'ಕೃಷಿ ಭಾಗ್ಯ' ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಲಾಭ ಪಡೆದು ಕಲಬುರಗಿಯ ಇಬ್ಬರು ರೈತರು ಉತ್ತಮವಾಗಿ ಬೆಳೆ ಬೆಳೆಯುತ್ತಿದ್ದಾರೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಾಚಾಪುರ ಗ್ರಾಮದ ರೈತರಾದ ಅಶೋಕರಾವ ಹಣಮಂತರಾಯ ಮತ್ತು ಬಸಣ್ಣ ದೊಡ್ಡಪ್ಪ ಅವರ ಸಮೃದ್ಧ ಮತ್ತು ನೆಮ್ಮದಿಯ ಬಾಳಿಗೆ ಕೃಷಿ ಭಾಗ್ಯ ಯೋಜನೆ ಆಸರೆಯಾಗಿದೆ. ಬೆಳೆ ಬೆಳೆಯಲು ಇಬ್ಬರೂ ರೈತರು ಈಗ ಮಳೆಗಾಗಿ ಕಾದು ಕೂರಬೇಕಾಗಿಲ್ಲ.[ರೈತರಿಗಾಗಿ ಸಿದ್ದರಾಮಯ್ಯ ಸರ್ಕಾರದ ಕೊಡುಗೆ ಕೃಷಿ ಭಾಗ್ಯ]

agriculture

ಕಬ್ಬಿನ ಬೆಳೆಗೆ ಆಧಾರವಾಗಿದೆ : ಆಶೋಕರಾವ ಅವರು 10 ರಿಂದ 20 ಎಕರೆ ಜಮೀನಿನಲ್ಲಿ ಪಕ್ಕದ ಹಳ್ಳದಿಂದ ನೀರು ಪಡೆದು 4 ಎಕರೆ ಕಬ್ಬು ಹಾಗೂ ಉಳಿದ ಪ್ರದೇಶದಲ್ಲಿ ಮಳೆಯಾಧಾರಿತ ಬೆಳೆ ಬೆಳೆಯುತ್ತಿದ್ದರು. ಕಳೆದ 2-3 ವರ್ಷಗಳಲ್ಲಿ ಉಂಟಾದ ಭೀಕರ ಬರದಿಂದ ಹಳ್ಳ ಬತ್ತಿ ಹೋಗಿದ್ದು, ನೀರಿಲ್ಲದೆ ಅವರು ಕಂಗಾಲಾಗಿದ್ದರು. ಮೂವರು ಮಕ್ಕಳ ಸಂಸಾರ ನಿರ್ವಹಣೆ ಮಾಡುವುದು ಕಷ್ಟವಾಗಿತ್ತು. [ಒಣಗುವ ಬೆಳೆಗಳಿಗೆ ಕಾಯಕಲ್ಪ ಕಲ್ಪಿಸಿದ ಕೃಷಿ ಭಾಗ್ಯ]

ಕೃಷಿ ಇಲಾಖೆ ಅಧಿಕಾರಿಗಳು ಅವರಿಗೆ ಕೃಷಿ ಭಾಗ್ಯ ಯೋಜನೆಯ ಬಗ್ಗೆ ತಿಳುವಳಿಕೆ ನೀಡಿದರು. 18X18X3 ಮೀ. ಗಾತ್ರದ ಕೃಷಿಹೊಂಡ ನಿರ್ಮಾಣದ ಹಂತದಲ್ಲಿಯೇ ಭೂ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಳವಾಯಿತು. ಕೃಷಿ ಹೊಂಡದಲ್ಲಿ ಅವ್ಯಾಹತ ನೀರಿನ ಲಭ್ಯತೆ ಪ್ರಯುಕ್ತ 4 ಎಕರೆ ಕಬ್ಬಿನ ಬೆಳೆಗೆ ಬೇಸಿಗೆಯಲ್ಲಿ ಸಹ ನೀರು ಒದಗಿಸಲು ಸಾಧ್ಯವಾಯಿತು. ಉಳಿದ ಪ್ರದೇಶದಲ್ಲಿ ಸುರಕ್ಷಿತ ಪದ್ಧತಿ ಅಳವಡಿಸಿಕೊಂಡು ವಿವಿಧ ಆಹಾರ ಬೆಳೆಗಳನ್ನು ಬೆಳೆದು ಅಧಿಕ ಇಳುವರಿ ಪಡೆಯುತ್ತಿದ್ದಾರೆ. [ಕೊಪ್ಪಳ ರೈತರ ಬಾಯಲ್ಲಿ ಪಪ್ಪಾಯಿ ಜಪ!]

ಆಸರೆಯಾದ ಕೃಷಿಭಾಗ್ಯ : ರೈತ ಬಸಣ್ಣ ದೊಡ್ಡಪ್ಪ ಅವರಿಗೆ 4.05 ಎಕರೆ ಜಮೀನು ಜೀವನಾಧಾರವಾಗಿತ್ತು. ಮಳೆಯಾಧಾರಿತ ಕೃಷಿ ಮಾಡಿಕೊಂಡು ಬಂದ ಬಸಣ್ಣ ಬರಗಾಲದಿಂದಾಗಿ ಬಸವಳಿದಿದ್ದರು ಹಾಗೂ ನಿರುತ್ಸಾಹಿಯಾಗಿದ್ದರು. ಇದರಿಂದ 2 ಮಕ್ಕಳ ಸಂಸಾರ ನಡೆಸುವುದು ಕಷ್ಟಕರವಾಗಿತ್ತು.

ಈಗಾಗಲೇ ಗ್ರಾಮದ ಕೆಲವು ರೈತರು ಕೃಷಿ ಭಾಗ್ಯ ಯೋಜನೆಯನ್ನು ಅಳವಡಿಸಿಕೊಂಡಿದ್ದರು. ಕೃಷಿ ಇಲಾಖೆ ಅಧಿಕಾರಿಗಳ ತಾಂತ್ರಿಕ ಸಹಾಯ ಮತ್ತು ಮಾರ್ಗದರ್ಶನದಿಂದ ಪಡೆದ ಅವರು, 12X13X3 ಮೀ. ಗಾತ್ರದ ಕೃಷಿ ಹೊಂಡ ನಿರ್ಮಿಸಿಕೊಂಡರು.

farmer

ಕೃಷಿ ಹೊಂಡದ ಅಂತರ್ಜಲ ಮೇಲಿರುವುದರಿಂದ ಪ್ರತಿದಿನ 3-4 ಗಂಟೆಯಷ್ಟು ನೀರು ಸಿಗುವಂತಾಯಿತು. ಡಿಸೇಲ್ ಚಾಲಿತ ಪಂಪ್‍ಸೆಟ್, ತುಂತುರು ನೀರಾವರಿ ಘಟಕ ಅಳವಡಿಸಿಕೊಂಡು ಸಂಪೂರ್ಣ 4.05 ಎಕರೆ ಪ್ರದೇಶಕ್ಕೆ ನೀರು ಒದಗಿಸಲು ಆರಂಭಿಸಿದರು.

ಇದರಿಂದ ಆರ್ಥಿಕ ಲಾಭ ಮೊದಲಿಗಿಂತ 5-6 ಪಟ್ಟು ಹೆಚ್ಚಳವಾಯಿತು. ಮಿಶ್ರ ಬೇಸಾಯ ಪದ್ಧತಿಯೊಂದಿಗೆ ಕೃಷಿಗೆ ಪೂರಕ ಹೈನುಗಾರಿಕೆ ಮತ್ತು ತೋಟಗಾರಿಕೆಯನ್ನು ಕೈಗೊಂಡು ಅಧಿಕ ಆರ್ಥಿಕ ಅಭಿವೃದ್ಧಿಯನ್ನು ಅವರು ಸಾಧಿಸುತ್ತಿದ್ದಾರೆ. [ಮಾಹಿತಿ : ಗುಲಬರ್ಗಾ ವಾರ್ತೆ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+