ಸಕ್ಕರೆ ರಫ್ತು ಮೇಲೆ 2023 ಅಕ್ಟೋಬರ್‌ವರೆಗೆ ನಿರ್ಬಂಧ ವಿಧಿಸಿದ ಕೇಂದ್ರ ಸರ್ಕಾರ
ಬೆಂಗಳೂರು, ಅಕ್ಟೋಬರ್ 30: ವಿಶ್ವದಲ್ಲೇ ಭಾರತ ಅತ್ಯಧಿಕ ಸಕ್ಕರೆ ಉತ್ಪಾದನೆ ಮತ್ತು ಎರಡನೇ ಅತಿ ದೊಡ್ಡ ರಫ್ತುದಾರ ದೇಶವಾಗಿದೆ. ಹೀಗಾಗಿ ದೇಶಿ ಮಾರುಕಟ್ಟೆಯಲ್ಲಿ ಸಕ್ಕರೆ ಲಭ್ಯತೆ ಹೆಚ್ಚಿಸಲು ಹಾಗೂ ಬೆಳೆಗಳ ಮೇಲೆ ನಿಯಂತ್ರಣ ಸಾಧಿಸುವ ಸಂಬಂಧ ಸಕ್ಕರೆ ರಫ್ತಿನ ಮೇಲಿನ ನಿರ್ಬಂಧವನ್ನು 2023ರ ಅಕ್ಟೋಬರ್ 31ರವರೆಗೆ ವಿಸ್ತರಿಸಿದೆ.
ಕೇಂದ್ರ ಸರ್ಕಾರ ಸಕ್ಕರೆ ರಫ್ತು ಮೇಲಿನ ನಿರ್ಬಂಧ ವಿಸ್ತರಿಸಿದ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ. ಅದರ ಪ್ರಕಾರ, ಇದೇ ವರ್ಷ ಅಕ್ಟೋಬರ್ 31ರ ನಾಳೆ ವರೆಗೆ ಸಕ್ಕರೆ ಮೇಲೆ ರಫ್ತು ನಿರ್ಬಂಧ ವಿಧಿಸಲಾಗಿತ್ತು. ಹೆಚ್ಚುತ್ತಿರುವ ಹಣದುಬ್ಬರದ ಮಧ್ಯೆ ದೇಶದಲ್ಲಿನ ಸರಕುಗಳ ಬೆಲೆ ಕಡಿಮೆ ಮಾಡಲು ಮುಂದಿನ (2023) ವರ್ಷದವರೆಗೆ ಆ ನಿರ್ಬಂಧವನ್ನು ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.
ಅದರಂತೆ ದೇಶದಲ್ಲಿ ಉತ್ಪಾದನೆಯಾಗುವ ಸಕ್ಕರೆಯ ಕಚ್ಚಾ, ಸಂಸ್ಕರಿಸಿದ ಮತ್ತು ಬಿಳಿ ಸಕ್ಕರೆಯ ರಫ್ತುಗೆ ಈ ನೀತಿ ಅನ್ವಯವಾಗಲಿದೆ. ನಿರ್ಬಂಧದ ಷರತ್ತುಗಳು ಹಾಗೇಯೇ ಮುಂದುವರಿಯಲಿದೆ. ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್‌ಟಿ) ಅಧಿಸೂಚನೆಯಲ್ಲಿ ತಿಳಿಸಿದೆ.

ಆದರೆ, ಈ ಅಧಿಸೂಚನೆಯು ಸಿಎಕ್ಸಎಲ್ ಮತ್ತು ಟಿಆರ್‌ಕ್ಯೂ ಸುಂಕ ರಿಯಾಯಿತಿ ಕೋಟಾಗಳ ಅಡಿ ರಫ್ತಾಗುವ ಸಕ್ಕರೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಉಲ್ಲೇಖಿಸಲಾಗಿದೆ. ಈ ಎರಡು ಕೋಟಗಳಡಿ ನಿನಿರ್ದಿಷ್ಟ ಪ್ರಮಾಣದಲ್ಲಿ ಸಕ್ಕರೆ ರಫ್ತು ಆಗುತ್ತಿದೆ.
ಲಭ್ಯತೆ-ಬೆಲೆ ಸ್ಥಿರತೆ ಕಾಪಾಡಲು ನಿರ್ಬಂಧ
ದೇಶೀಯ ಲಭ್ಯತೆ ಮತ್ತು ಬೆಲೆ ಸ್ಥಿರತೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಇದೇ ವರ್ಷ ಮೇ ತಿಂಗಳಲ್ಲೇ ಸಕ್ಕರೆ ರಫ್ತಿನ ಮೇಲೆ ನಿರ್ಬಂಧ ವಿಧಿಸುವುದಾಗಿ ಹೇಳಿತ್ತು. ಅದು ಜೂನ್ 1ರಿಂದ ಅನ್ವಯವಾಗಲಿದೆ ಎಂದು ತಿಳಿಸಿತ್ತು. ದೇಶದಿಂದ ಇತರೆಡೆಗೆ ದಾಖಲೆ ಪ್ರಮಾಣದಲ್ಲಿ ಸಕ್ಕರೆ ರಫ್ತು ಆಗುತ್ತಿದ್ದ ಹಿನ್ನೆಲೆ ಈ ನಿರ್ಧಾರಕ್ಕೆ ಬರಲಾಗಿದೆ.
ಸಕ್ಕರೆ ನಿಷೇಧಕ್ಕೂ ಮುನ್ನ ಈ ಹಿಂದೆ ಕೇಂದ್ರ ಸರ್ಕಾರವು ಗೋಧಿ ರಫ್ತಿಗೆ ಕಡಿವಾಣ ಹಾಕಿ ಆದೇಶಿಸಿತ್ತು. ರಷ್ಯಾ ಮತ್ತು ಉಕ್ರೇನ್ ಮಧ್ಯದ ಯುದ್ಧದಿಂದಾಗಿ ಜಾಗತಿಕ ಪೂರೈಕೆ ಮೇಲೆ ದುಷ್ಪರಿಣಾಮ ಉಂಟಾಗಿತ್ತು. ಇದರಿಂದ ಭಾರತದಲ್ಲಿ ಗೋಧಿಯ ಬೆಲೆ ಏರಿಕೆ ಆಗಿದ್ದರಿಂದ ನಿರ್ಬಂಧ ವಿಧಿಸಲಾಗಿತ್ತು.

ಎರಡು ತಿಂಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ)ಯಲ್ಲಿ ಗೋಧಿ ಅಥವಾ ಮೆಸ್ಲಿನ್ ಹಿಟ್ಟಿಗೆ ವಿನಾಯಿತಿ ನೀತಿಗೆ ತಿದ್ದುಪಡಿ ಮಾಡುವ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಯಿತು. ಸರ್ಕಾರದ ಈ ನಿರ್ಧಾರವು ಗೋಧಿ ಹಿಟ್ಟಿನ ರಫ್ತಿನ ಮೇಲೆ ನಿರ್ಬಂಧಗಳನ್ನು ಹಾಕಲು ಸಹಕಾರಿ ಆಯಿತು ಎಂದು ಡಿಜಿಎಫ್‌ಟಿ ತಿಳಿಸಿದೆ.












Click it and Unblock the Notifications