ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

22 ರಾಜ್ಯಗಳ ಕೃಷಿ ಮಂಡಿಗಳು ಇ-ರಾಷ್ಟ್ರೀಯ ಕೃಷಿ ಮಾರುಕಟ್ಟೆ ಜತೆ ಸಂಯೋಜನೆ: ಕೇಂದ್ರ ಕೃಷಿ ಸಚಿವ

|
Google Oneindia Kannada News

ಬೆಂಗಳೂರು, ಡಿಸೆಂಬರ್ 20: ದೇಶಾದ್ಯಂತ ಇದುವರೆಗೆ ಒಟ್ಟು 1,260 ಸಗಟು ಮಂಡಿಗಳನ್ನು ಇ-ರಾಷ್ಟ್ರೀಯ ಕೃಷಿ ಮಾರುಕಟ್ಟೆಗಳ ಜೊತೆ (ಇ-ಎನ್‌ಎಎಂ) ಕ್ರೂಢೀಕರಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದರು.

ಮಂಗಳವಾರ ಸಂಸತ್ತಿಗೆ ಕೇಂದ್ರ ಸಚಿವರು ಸಗಟು ಮಂಡಿಗಳ ಕುರಿತು ಮಾಹಿತಿ ನೀಡಿ ಮಾಡನಾಡಿದರು.

ಬೆಂಗಳೂರು: ಒತ್ತುವರಿ ತೆರವುಗೊಳಿಸಲು ಬಿಬಿಎಂಪಿ ಖಡಕ್ ಸೂಚನೆಬೆಂಗಳೂರು: ಒತ್ತುವರಿ ತೆರವುಗೊಳಿಸಲು ಬಿಬಿಎಂಪಿ ಖಡಕ್ ಸೂಚನೆ

ದೇಶದ 22 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ನೆಲೆಗೊಂಡಿರುವ 1,260 ಸಗಟು ಮಂಡಿಗಳನ್ನು ಇ-ರಾಷ್ಟ್ರೀಯ ಕೃಷಿ ಮಾರುಕಟ್ಟೆಗಳೊಂದಿಗೆ ಏಕೀಕರಣಗೊಳಿಸಲಾಗಿದೆ. ಇನ್ನು ಮುಂದೆ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ರಾಷ್ಟ್ರದಾದ್ಯಂತ ಹರಡಿರುವ 6,900- ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು) ಮಂಡಿಗಳಲ್ಲಿ ಹರಾಜು ಹಾಕುತ್ತಾರೆ. ಕೆಲವರು ಹರಾಜಿಗಾಗಿ ಇ-ಎನ್‌ಎಎಂ (ನ್ಯಾಮ್) ಪ್ಲಾಟ್‌ಫಾರ್ಮ್ ಬಳಕೆ ಮಾಡುತ್ತಿದ್ದಾರೆ ಎಂದು ನರೇಂದ್ರ ಸಿಂಗ್ ತೋಮರ್ ಲಿಖಿತ ದಾಖಲೆ ನೀಡಿದರು.

ಈ ರಾಜ್ಯಗಳಲ್ಲಿ ಆಂಧ್ರಪ್ರದೇಶ, ಬಿಹಾರ, ಛತ್ತೀಸ್‌ಗಢ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ನಾಗಾಲ್ಯಾಂಡ್, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ ಮತ್ತು ಪುದುಚೇರಿಗಳಲ್ಲಿ ಮಂಡಿಗಳನ್ನು ಇ-ನ್ಯಾಮ್ ಜೊತೆ ಸಂಯೋಜಿಸಲಾಗಿದೆ ಎಂದು ಅವರು ವಿವರಿಸಿದರು.

Indias 1,260 wholesale mandis has been integrated with National Agriculture Market (eNAM)

ಮಂಡಿಗಳ ಏಕೀಕರಣಕ್ಕೆ 649.87 ಕೋಟಿ ರೂ.ಬಿಡುಗಡೆ

ಆಯಾ ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಿಂದ ಪಡೆದ ಪ್ರಸ್ತಾವನೆಗಳ ಆಧಾರದಲ್ಲಿ ಸಿದ್ಧವಾದ ಸಮಗ್ರ ಯೋಜನಾ ವರದಿ (ಡಿಪಿಆರ್) ಆಧಾರದ ಮೇಲೆ ಕೇಂದ್ರ ಸರ್ಕಾರವು ಮಂಡಿಗಳನ್ನು ಆನ್‌ಲೈನ್ ವೇದಿಕೆ ಇ-ನ್ಯಾಮ್ ಸಂಯೋಜಿಸಿದೆ ಎಂದರು.

ರಾಜ್ಯ ಸರ್ಕಾರಗಳ ಬೆಂಬಲದೊಂದಿಗೆ ಏಪ್ರಿಲ್ 2016 ರಲ್ಲಿ ಪ್ರಾರಂಭವಾದ ಇ-ನ್ಯಾಮ್ ಅನ್ನು ಕೇಂದ್ರ ಸರ್ಕಾರದ ಸಂಸ್ಥೆಯಾದ ಸಣ್ಣ ರೈತರ ಕೃಷಿ ಉದ್ಯಮ ಒಕ್ಕೂಟ (ಎಸ್‌ಎಫ್‌ಎಸಿ) ಅನುಷ್ಠಾನಗೊಳಿಸಿದೆ. ಆರಂಭದಿಂದಲೂ, ಇ-ನ್ಯಾಮ್ ಮಂಡಿಗಳ ಏಕೀಕರಣಕ್ಕಾಗಿ ಸುಮಾರು 649.87 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

ಪ್ರಸ್ತುತದಲ್ಲಿ ಇ-ನ್ಯಾಮ್ ವೇದಿಕೆಯು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಭೌತಿಕ ಸಗಟು ಮಂಡಿಗಳು ಅಥವಾ ಮಾರುಕಟ್ಟೆಗಳನ್ನು ಸಂಯೋಜಿಸಲಾಗುತ್ತಿದೆ. ಪಾರದರ್ಶಕ ಬೆಲೆ ಅನ್ವೇಷಣೆ ವಿಧಾನದ ಮೂಲಕ ಕೃಷಿ ಉತ್ಪನ್ನಗಳ ಆನ್‌ಲೈನ್ ವ್ಯಾಪಾರವನ್ನು ಸುಲಭಗೊಳಿಸಲು ರೈತರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ಲಾಭದಾಯಕ ಬೆಲೆಗಳನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ತಿಳಿಸಿದರು.

ಭಾರತದಲ್ಲಿನ ಕೃಷಿ ಸರಕುಗಳಿಗಾಗಿ ಆನ್‌ಲೈನ್ ಮಾರುಕಟ್ಟೆ ವೇದಿಕೆ ಒದಗಿಸುವಲ್ಲಿ 'ಒಂದು ರಾಷ್ಟ್ರ, ಒಂದು ಮಾರುಕಟ್ಟೆ' ಎಂಬ ಘೋಷಣೆಯಲ್ಲಿ ಮಂಡಿಗಳನ್ನು ಏಕೀಕರಣಗೊಳಿಸಲಾಗಿದೆ ಎಂದರು.

English summary
India's 1,260 wholesale mandis has been integrated with National Agriculture Market (eNAM) so far, Union Agriculture Minister Narendra Singh Tomar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X