ಚಿತ್ರಗಳಲ್ಲಿ ಮಂಗಾರು ಮಳೆಯ ಆಟ, ನೋಟ
ನವದೆಹಲಿ, ಜು.27 : ಭಾರತದ ಜನರ ಜೀವನಾಡಿ ಮುಂಗಾರು ಮಾರುತಗಳು. ಇದರಿಂದ ಬರುವ ಮಳೆಯ ಮೇಲೆ ದೇಶದ ಮೂರನೇ ಒಂದು ಭಾಗ ಅವಲಂಬಿತವಾಗಿದೆ. ಈ ಬಾರಿ ದೇಶದಲ್ಲಿ ಚೆನ್ನಾಗಿ ಮಳೆ ಸುರಿದಿದೆ.
ಉತ್ತರಾಖಂಡ ರಾಜ್ಯದಲ್ಲಿ ಮಳೆ ಸಾಕಷ್ಟು ಸಾವು ನೋವಿಗೆ ಕಾರಣವಾದರೂ, ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ಎಲ್ಲಾ ರಾಜ್ಯಗಳಲ್ಲೂ ಉತ್ತಮವಾಗಿ ಮೆಳೆ ಸುರಿದಿದೆ. ಮುಂಗಾರು ಮಳೆ ನೋಡಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಕರ್ನಾಟಕದಲ್ಲೂ ಮುಂಗಾರು ಜೂನ್ ನಲ್ಲಿ ಪ್ರಾರಂಭವಾದ ಮುಂಗಾರು ಮಳೆಯ ಅಬ್ಬರ ಇನ್ನೂ ಕಡಿಮೆ ಆಗಿಲ್ಲ. ರಾಜ್ಯದ ಜಲಾಶಯಗಳು ಬಹುಬೇಗ ಭರ್ತಿಯಾಗಿವೆ. ಕಳೆದ ಬಾರಿ ಬರಗಾಲ ಎದುರಿಸಿದ್ದ ರಾಜ್ಯ ಈ ಬಾರಿ ವರ್ಷಧಾರೆಯಲ್ಲಿ ಮುಳುಗಿ ಹೋಗಿದೆ.
ಭಾರತದ ಜನರು ಮಳೆಗೆ ಎಷ್ಟೇ ಶಾಪ ಹಾಕಿದರು ಅವರು ಅದನ್ನು ಸಾಕಷ್ಟು ಆನಂದದಿಂದ ಅನುಭವಿಸುತ್ತಾರೆ. ಈ ಬಾರಿಯ ಮುಂಗಾರು ಮಳೆಯಲ್ಲಿ ಜನರ ಪರದಾಟವನ್ನು ಚಿತ್ರಗಳಲ್ಲಿ ನೋಡೋಣ ಬನ್ನಿ.

ಇವನ ಸಾಹಸಕ್ಕೆ ಏನು ಹೇಳೋಣ
ಅಸ್ಸಾಂನಲ್ಲಿಯೂ ಭಾರೀ ಮಳೆ ಸುರಿದಿದೆ. ವ್ಯಕ್ತಿಯೊಬ್ಬ ಜಲಾವೃತ ಪ್ರದೇಶದಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು ಇಂತಹ ಸಾಹಸಕ್ಕೆ ಕೈ ಹಾಕಿದ್ದಾನೆ. ಸ್ವಲ್ಪ ಎಚ್ಚರ ತಪ್ಪಿದರೂ...

ಏ ಬಾರೋ ಹೋಗೋಣ
ಅಹಮದಾಬಾದ್ ನಲ್ಲಿ ಭಾರೀ ಮಳೆಯನ್ನು ಲೆಕ್ಕಿಸದೆ ದನಗಳು ಸವಾರಿ ಹೊರಟಿವೆ. ಬಾರೋ ನಮಗೇನು ಮಳೆ ಎಂದು ಅವುಗಳು ಹೇಳಿಕೊಂಡು ಸಾಗುತ್ತಿರುವಂತಿದೆ ಪೋಟೋ.

ಇಂಥ ಛಾನ್ಸ್ ಬಿಡೋಕಾಗುತ್ತಾ
ನೀರು ಎಂದರೆ ಮಕ್ಕಳಿಗೆ ಬಹಳ ಪ್ರೀತಿ ನವದೆಹಲಿಯ ಇಂಡಿಯಾ ಗೇಟ್ ಎದುರಿನ ಹುಲ್ಲು ಹಾಸಿನ ಮೇಲೆ ಮಕ್ಕಳು ಸ್ವಚ್ಛಂದವಾಗಿ ಮಳೆಯ ನೀರಿನಲ್ಲಿ ಖುಷಿಯಿಂದ ಆಟವಾಡುತ್ತಿದ್ದಾರೆ.

ತಳ್ಳುಗಾಡಿ ಐಸ್ಸಾ
ಗೌಹಾತಿಯಲ್ಲಿ ಸುರಿದ ಮಳೆಗೆ ರಸ್ತೆಯಲ್ಲಿ ನೀರು ತುಂಬಿಕೊಂಡಿದೆ. ಅದರಲ್ಲಿ ಸಿಕ್ಕಿಬಿದ್ದ ಬೈಕ್ ಅನ್ನು ಮಕ್ಕಳು ತಳ್ಳುಗಾಡಿ ಐಸ್ಸಾ ಎಂದು ಕಷ್ಟಪಟ್ಟು ತಳ್ಳುತ್ತಿದ್ದಾರೆ.

ನೋಡಿ ನಮ್ಮಗೋಳು
ಹವಾಮಾನದ ಬಗ್ಗೆ ಜನರಿಗೆ ಮಾಹಿತಿ ನೀಡುವುದೇ ಮಾಧ್ಯಮಗಳು ಆದರೆ, ದೆಹಲಿಯಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ಮಾಧ್ಯಮ ಪ್ರತಿನಿಧಿಗಳ ಹರಸಾಹನ ನೋಡಿ. ಆದರೂ ಕೆಲಸ ಮಾಡಲೇ ಬೇಕಾದ ಅನಿವಾರ್ಯತೆ ಇದೆ.

ಮಳೆಯಾಟದಲ್ಲಿ ನೀರಾಟ
ರಾಜಸ್ಥಾನದಲ್ಲಿ ಭಾರೀ ಮಳೆ ಸುರಿದು ರಸ್ತೆಗಳೆಲ್ಲ ಜಲಾವೃತವಾಗಿದೆ. ಆದರೆ ಜೈಪುರದಲ್ಲಿ ರಸ್ತೆಯ ನೀರಿನಲ್ಲಿ ಮಕ್ಕಳು ಚಿಂತೆ ಮರೆತು ಆಟವಾಟುತ್ತಿದ್ದಾರೆ.

ಸ್ವಲ್ಪ ಸಹಾಯ ಮಾಡೇ
ಅಹಮದಾಬಾದ್ ನಲ್ಲಿ ಸುರಿದ ಮಳೆಯಲ್ಲಿ ಇಬ್ಬರು ಸಿಕ್ಕಿಹಾಕಿಕೊಂಡಿದ್ದಾರೆ. ಬೈಕ್ ತಳ್ಳುವ ಕೆಲಸ ಹುಡುಗರದ್ದೆ ತಾನೇ, ಮಳೆಯಲ್ಲಿ ಈತ ನೀನಿ ತಳ್ಳು ಎಂದು ಹೇಳುತ್ತಿರಬಹುದೇ.

ಠಾಕ್ರೆಗೂ ತಟ್ಟಿದ ಮಳೆಯ ಬಿಸಿ
ಶಿವಸೇನೆ ಅಧ್ಯಕ್ಷ ಉದ್ಭವ ಠಾಕ್ರೆ ದೆಹಲಿಯಲ್ಲಿ ಪ್ರತಿಕಾಗೋಷ್ಠಿ ಹಮ್ಮಿಕೊಂಡಿದ್ದರು. ಆದರೆ, ಮಳೆಯಿಂದಾಗಿ ಆ ಜಾಗಕ್ಕೂ ನೀರು ನುಗ್ಗಿತ್ತು. ಕಾರ್ಮಿಕರು ನೀರನ್ನು ಹೊರ ಹಾಕಲು ಪ್ರಯತ್ನ ನಡೆಸುತ್ತಿರುವುದನ್ನು ಕಾಣಬಹುದು.

ತಂಡ ತಂಡ ಕೂಲ್ ಕೂಲ್
ದೆಹಲಿಯಲ್ಲಿ ಅನಿರೀಕ್ಷಿತವಾಗಿ ಭಾರೀ ಮಳೆ ಸುರಿಯಿತು. ತಂಪು ಪಾನೀಯ ಮಾರಾಟಗಾರನೊಬ್ಬ ಗಾಡಿಯ ಮೇಲೆ ಹತ್ತಿಕೊಂಡು ಮಳೆಯಿಂದ ರಕ್ಷಣೆ ಪಡೆದಾಗ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.

ಮಳೆ ನಿಂತು ಹೋದ ಮೇಲೆ
ಮಹಾರಾಷ್ಟದ ವಿದರ್ಭದಲ್ಲಿ ಭಾರೀ ಮಳೆ ಸುರಿದ ಕಾರಣ ರೈಲ್ವೆ ಹಳಿ ಸಂಪೂರ್ಣ ಹಾಳಾಗಿತ್ತು. ಇದನ್ನು ನೋಡಿ ಎಷ್ಟು ಮಳೆ ಸುರಿದಿರಬಹುದು ಎಂದು ನೀವು ಯೋಚಿಸಬಹುದು.

ಈಗ ಏನು ಮಾಡೋದು
ಅನಿರೀಕ್ಷಿತ ಮಳೆ ಗುಜರಾತ್ ವ್ಯಾಪಾರಿಯನ್ನು ಕಂಗೆಡಿಸಿದೆ. ಮಳೆಯಿಂದ ರಕ್ಷಣೆ ಪಡೆಯಲು ಅವನು ತನ್ನ ಅಂಗಡಿಯವೊಳಗೆ ಸೇರಿಕೊಂಡು ಮನೆಯತ್ತ ಹೆಜ್ಜೆ ಹಾಕಿದ್ದಾನೆ.

ಎಲ್ಲಾ ಉಲ್ಟಾ ಪಲ್ಟಾ
ಹುಡುಗಿಯರು ಮಳೆ ಬರುತ್ತದೆ ಎಂದು ಛತ್ರಿ ಹಿಡಿದುಕೊಂಡು ಹೋಗುತ್ತಾರೆ. ಆದರೆ, ಇಲ್ಲಿ ಸ್ಪಲ್ಪ ಉಲ್ಟಾ ಪಲ್ಟಾವಾಗಿದೆ. ಹುಡುಗರು ಛತ್ರಿ ಹಿಡಿದು ನಡೆಯುತ್ತಿದ್ದರೆ. ಹುಡುಗಿಯರು ಮಳೆಯಲ್ಲಿ ನೆನೆಯುತ್ತಿದ್ದಾರೆ.

ಮುತ್ತಿನ ನಗರಿಗೆ ಮಳೆಯ ಸಿಂಚನ
ಮುತ್ತಿನ ನಗರಿ ಹೈದರಾಬಾದ್ ಮುಂಗಾರು ಮಳೆ ಸುರಿದಾಗ ಜನರು ಮನೆ ಕಡೆ ಹೊರಟಿದ್ದು ಹೀಗೆ.

ಛೇ ಛತ್ರಿ ತಂದಿಲ್ಲ
ವಾಣಿಜ್ಯ ನಗರಿ ಮುಂಬೈನಲ್ಲಿ ಜನರು ಮಳೆ ಬಂದಾಗ ಪ್ಲಾಸ್ಟಿಕ್ ಶೀಟ್ ಗಳ ಕೆಳಗೆ ಆಶ್ರಯ ಪಡೆದಿದರು. ಛತ್ರಿ ತರುವುದು ಮರೆತು ಬಂದರೆ ಹೀಗೆ ಆಗುವುದು, ಮುಂಗಾರು ಮಳೆ ಯಾವಾಗ ಬೀಳುತ್ತದೆ ಎಂದು ಹೇಳುವುದು ಕಷ್ಟ.

ಜಮ್ಮುವಿನ ಮಳೆಯಲ್ಲಿ ಚಿಣ್ಣರು
ಜಮ್ಮು ಕಾಶ್ಮೀರಲ್ಲಿಯೂ ಮುಂಗಾರು ಮಳೆ ಸುರಿದಿದೆ. ಭಾರೀ ಮಳೆ ಸುರಿದಾಗ ಚಿಣ್ಣರು ಮಳೆಯಿಂದ ರಕ್ಷಣೆ ಪಡೆದಿದ್ದು ಹೀಗೆ.

ವ್ಯಾಪಾರಿಗೂ ತಟ್ಟಿದ ಬಿಸಿ ಮಳೆಯ ಬಿಸಿ
ಗೌಹಾತಿಯಲ್ಲಿಯೂ ಮುಂಗಾರು ಮಳೆಯ ಆರ್ಭಟಕ್ಕೆ ರಸ್ತೆಗಳು ನದಿಗಳಾಗಿ ಬದಲಾಗಿದೆ. ಅದರಲ್ಲೂ ವ್ಯಾಪಾರಿಯೊಬ್ಬ ಹೊರಟಿದ್ದು ಹೀಗೆ.

ದೇವರಿಗೆ ಮುಂಗಾರು ಮಳೆಯ ಅಭಿಷೇಕ
ಮಧ್ಯ ಪ್ರದೇಶದಲ್ಲಿ ಮುಂಗಾರು ಮಳೆ ದೇವರಿಗೆ ಅಭಿಷೇಕ ಮಾಡಿಸಿದೆ. ಇತಿಹಾಸ ಪ್ರಸಿದ್ದ ನಾಗೇಶ್ವರ ದೇವಾಲಯ ಜಲಾವೃತವಾರುವುದು.

ರಸ್ತೆಯೋ ನದಿಯೋ
ಕೇರಳದಲ್ಲಿಯೂ ಮುಂಗಾರು ಮಳೆಯ ಆರ್ಭಟ ಕಡಿಮೆ ಏನಿಲ್ಲ. ಕೊಚ್ಚಿಕೋಡಿನಲ್ಲಿ ಸುರಿದ ಮಳೆಯಿಂದಾಗಿ ರಸ್ತೆಗಳು ನದಿಗಳಾಗಿ ಬದಲಾಗಿದ್ದವು. ಅದರಲ್ಲಿ ಒಬ್ಬ ದೋಣಿಯ ಮೂಲಕ ಯಾನ ಹೊರಟಿದ್ದಾನೆ.

ಕಡಲ ಮುತ್ತುಗಳು
ಮುಂಬೈನಲ್ಲಿ ಧಾರಕಾರ ಮಳೆ ಸುರಿದಿದೆ. ಮರೀನಾ ಬೀಚ್ ನಲ್ಲಿ ಸಮುದ್ರ ರಸ್ತೆಗೆ ಮುತ್ತಿಟ್ಟು ಹೋಗುತ್ತಿದೆ. ಕಾಲೇಜು ವಿದ್ಯಾರ್ಥಿಗಳು ಸಮುದ್ರವನ್ನು ನೋಡಲು ಹೋದಾಗ ಅದು ತನ್ನ ಶಕ್ತಿ ತೋರಿಸಿದ ಪರಿ ಇದು.

ಹುಡುಗರ ಮಸ್ತಿ
ಮುಂಬೈನ ಮರೀನಾ ಬೀಚ್ ತೀರದಲ್ಲಿ ಕಾಲೇಜ್ ಹುಡುಗರು ಮುಂಗಾರು ಮಳೆಯನ್ನು ಎಂಜಾಯ್ ಮಾಡುತ್ತಿರುವುದು ಹೀಗೆ. ಮಳೆಯಲ್ಲಿ ಇವರು ಮಾರ್ಚ್ ಫಾಸ್ಟ್ ಹೊರಟಿದ್ದಾರೆ.

ಚಿತ್ರಗಳಲ್ಲಿ ಕಟ್ಟಿಕೊಡಲು ಅಸಾಧ್ಯ
ಉತ್ತರಾಖಂಡದಲ್ಲಿ ಸುರಿದ ಮಳೆಯಿಂದಾಗಿ ಆದ ಅನಾಹುತವನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ. ಮಳೆಯ ನಂತರ ಮನೆಗಳ ಪರಿಸ್ಥಿತಿ ಇದು. ಇದು ಮಳೆಯ ರುದ್ರ ನರ್ತನದ ವಿವರವನ್ನು ಹೇಳುತ್ತದೆ.












Click it and Unblock the Notifications