ಭಾರತದಲ್ಲೇ ಸಾಕಷ್ಟು ಗೋಧಿ ದಾಸ್ತಾನಿದೆ, ಆಮದು ಅಗತ್ಯವಿಲ್ಲ

ನವದೆಹಲಿ ಆಗಸ್ಟ್ 21: ಭಾರತಕ್ಕೆ ವಿದೇಶಗಳಿಂದ ಗೋಧಿ ಆಮದು ಮಾಡಿಕೊಳ್ಳುವ ಯಾವುದೇ ಯೋಜನೆಗಳು ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಸರ್ಕಾರದ ಅಧಿಕೃತ ಮೂಲಗಳು ಸ್ಪಷ್ಟಪಡಿಸಿವೆ.

ಕೇಂದ್ರ ಸರ್ಕಾರದ ಅಧಿಕಾರಿಗಳು ವಿವಿಧ ಕಾರಣ ಒಡ್ಡಿ ಗೋಧಿಯನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವ ಬಗ್ಗೆ ಚಿಂತಿಸಿದ್ದಾರೆ ಎಂದು ವರದಿಯಾಗಿತ್ತು. ಈ ಬಗ್ಗೆ ಭಾನುವಾರ ಸ್ಪಷ್ಟಪಡಿಸಿರುವ ಕೇಂದ್ರ ಸರ್ಕಾರ, ಭಾರತದಲ್ಲಿ ಅಗತ್ಯದಷ್ಟು ಗೋಧಿ ಪೂರೈಸುವ ಸಾಮಾರ್ಥ್ಯ ಹೊಂದಿದ್ದೇವೆ. ಈ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಸದ್ಯಕ್ಕೆ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿಲ್ಲ. ಭಾರತೀಯ ಆಹಾರ ನಿಗಮವು ಸಾರ್ವಜನಿಕ ವಿತರಣೆಗಾಗಿ ಸಾಕಷ್ಟು ದಾಸ್ತಾನುಗಳನ್ನು ಹೊಂದಿದೆ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಸ್ಪಷ್ಟನೆ ನೀಡಿದೆ.

ಉಕ್ರೇನ್ ಮೇಲೆ ರಷ್ಯಾ ಯುದ್ಧ ನಡೆಸಿದ ನಂತರ ಭಾರತವು ವಿಶ್ವಕ್ಕೆ ಆಹಾರ ನೀಡಲು ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಅದಾಗಿ ನಾಲ್ಕು ತಿಂಗಳ ನಂತರ ಕೇಂದ್ರ ಸರ್ಕಾರವು ಗೋಧಿ ಆಮದು ಮಾಡಿಕೊಳ್ಳಲು ನಿರ್ಧರಿಸಿ. ಇದಕ್ಕೆ ಮಳೆ ಕೊರತೆ ಸೇರಿದಂತೆ ಇನ್ನಿತರ ಕಾರಣದಿಂದ ಗೋಧಿ ಉತ್ಪಾದನೆ ಕಡಿಮೆ ಆಗಿದೆ. ಹೀಗಾಗಿ ಆಮದ ಮಾಡಿಕೊಳ್ಳುವ ಚಿಂತನೆ ನಡೆದಿದೆ ಎಂದು ವರದಿಯಾಗಿತ್ತು.

ಗೋಧಿ ಆಮದಿಗೆ ಮೊದಲು ಚಿಂತನೆ ನಡೆದಿತ್ತು

ಗೋಧಿ ಆಮದಿಗೆ ಮೊದಲು ಚಿಂತನೆ ನಡೆದಿತ್ತು

ಕಳೆದ ಮಾರ್ಚ್‌ನಲ್ಲಿ ಅತ್ಯಧಿಕ ಉಷ್ಣಾಂಶ ದಾಖಲಾಗಿತ್ತು. ಇದರಿಂದ ಮಳೆ ಕೊರತೆ ಉಂಟಾಗಿ ಈ ಭಾರಿ ಭಾರತರದಲ್ಲಿ ಗೋಧಿ ಉತ್ಪಾದನೆ ಇಳಿಕೆ ಆಗಿ ವಿದೇಶ ಅವಲಂಬಿಸಬಹುದು ಎಂದು ಅಂದಾಜಿಸಲಾಗಿತ್ತು. ಈ ಮಧ್ಯ ಸರ್ಕಾರ ಸ್ಥಳೀಯ ಆಹಾರ ಧ್ಯಾನಗಳ ಬೆಲೆಗಳನ್ನು ಹೆಚ್ಚಿಸಿದ್ದು ಸಹ ಆಮದು ಚಿಂತನೆಗೆ ಪ್ರಮುಖ ಎನ್ನಲಾಯಿತು. ಅಲ್ಲದೇ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಪ್ರಕಾರ ರಾಜ್ಯಗಳಲ್ಲಿ ಆಗಸ್ಟ್‌ ತಿಂಗಳಿನಲ್ಲಿ ಧಾನ್ಯಗಳ ಉತ್ಪಾದನೆ ಕೊರತೆ ಆಗಲಿದೆ ಎಂದು ಹೇಳಿತ್ತು.

ಕೊರತೆ ಮತ್ತು ಏರುತ್ತಿರುವ ಬೆಲೆಗಳ ಕಾರಣದಿಂದ ಕೇಂದ್ರದ ಅಧಿಕಾರಿಗಳು ವಿದೇಶದಿಂದ ಗೋಧಿ ಖರೀದಿಸಲು ಯೋಜನೆ ರೂಪಿಸಿಕೊಂಡಿದ್ದರು. ಹಿಟ್ಟಿನ ಗಿರಣಿಗಾರರಿಗೆ ಧಾನ್ಯವನ್ನು ಆಮದು ಮಾಡಿಕೊಳ್ಳಲು ಗೋಧಿಯ ಮೇಲಿನ 40% ಆಮದು ತೆರಿಗೆಯನ್ನು ಕಡಿತಗೊಳಿಸಬೇಕೆ ಅಥವಾ ರದ್ದುಗೊಳಿಸಬೇಕೆ ಎಂದು ಸರ್ಕಾರಿ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ ಎಂದು ಹೇಳಿದ್ದು ಸಾಕಷ್ಟು ಸದ್ದು ಮಾಡಿತ್ತು. ಆದರೆ ಅಧಿಕಾರಿಗಳು ದೇಶದ ಆಹಾರ ಕುರಿತ ದೂರಾಲೋಚನೆ ಮಾಡಿದ್ದು, ಪ್ರಸ್ತುತದಲ್ಲಿ ಅಂತಹ ಯಾವುದೇ ಸಮಸ್ಯೆಗೆ ಭಾರತ ತುತ್ತಾಗುವುದಿಲ್ಲ. ಗೋಧಿ, ಆಹಾರ ಧಾನ್ಯಗಳ ಉತ್ಪಾದನೆ ಸದ್ಯದ ಮಟ್ಟಿಗೆ ಭಾರತದಲ್ಲಿ ಉತ್ತಮವಾಗಿದೆ ಎಂದು ಕೇಂದ್ರ ತಿಳಿಸಿದೆ.

ಆಹಾರ ಧಾನ್ಯ ಉತ್ಪಾದನೆ ಮೇಲೆ ಯುದ್ಧದ ಪ್ರಭಾವ

ಆಹಾರ ಧಾನ್ಯ ಉತ್ಪಾದನೆ ಮೇಲೆ ಯುದ್ಧದ ಪ್ರಭಾವ

ರಷ್ಯಾ -ಉಕ್ರೇನ್ ಯುದ್ಧದ ಭೀತಿಯಿಂದ ಜಾಗತಿಕವಾಗಿ ಗೋಧಿಗೆ ಅಧಿಕ ಬೇಡಿಕೆ ಸೃಷ್ಟಿಯಾಗಿ ಬೆಲೆಯು ಹೆಚ್ಚಾಗಬಹುದು. ಇದು ಭಾರತದ ಮೇಲೆಯೂ ಪರಿಣಾಮ ಬೀರಬಹುದು ಎಂಬ ಆತಂಕವಿತ್ತು. ಹೀಗಾಗಿಯೇ ಭಾರತವು ದೇಶೀಯ ಗೋಧಿ ಪೂರೈಕೆಗಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳಬಹುದು ಎಂದು ಅರ್ಥಶಾಸ್ತ್ರಜ್ಞ ಸೋನಾಲ್ ವರ್ಮಾ ಎಂಬುವವರು ಹೇಳಿದರು.

107 ಮಿಲಿಯನ್ ಟನ್‌ ಧಾನ್ಯ ನಿರೀಕ್ಷೆ

107 ಮಿಲಿಯನ್ ಟನ್‌ ಧಾನ್ಯ ನಿರೀಕ್ಷೆ

ಭಾರತ ವಿಶ್ವದ ಎರಡನೇ ಬೃಹತ್ ಗೋಧಿ ಬೆಳೆಗಾರ ಆಗಿದ್ದರು ಪ್ರಮುಖ ರಫ್ತುದಾರನಾಗಿಲ್ಲ. ವಾರ್ಷಿಕವಾಗಿ ಉತ್ಪಾದನೆಯ ಸುಮಾರು ಶೇ.0.02ರಷ್ಟು ಅಧಿಕ ಗೋಧಿ ಬೇಡಿಕೆ ಇದ್ದರು ಭಾರತ ಮಾತ್ರ ಈ ವಿಚಾರದಲ್ಲಿ ಸ್ವಾವಲಂಬಿಯಾಗಿದೆ. 2021-22ರಲ್ಲಿ ಗೋಧಿ ಕೊಯ್ಲು ಸುಮಾರು 107 ಮಿಲಿಯನ್ ಟನ್‌ ಬರಬಹುದು ಎಂದು ಅಧಿಕಾರಿಗಳು ನಿರೀಕ್ಷಿಸಿದ್ದಾರೆ.

ಹಣದುಬ್ಬರ ಇಳಿಕೆಗೆ ಪ್ರಯತ್ನ

ಹಣದುಬ್ಬರ ಇಳಿಕೆಗೆ ಪ್ರಯತ್ನ

ಗೋಧಿ ಖರೀದಿಯಲ್ಲಿ ಉಂಟಾಗಿರುವ ಗ್ರಾಹಕ ಗೋಧಿ ಹಣದುಬ್ಬರ ವರ್ಷದಿಂದ ವರ್ಷಕ್ಕೆ ಶೇ.9ರಷ್ಟು ಹೆಚ್ಚಾಗುತ್ತಿದೆ. ನಂತರದ ಎರಡೇ ತಿಂಗಳಲ್ಲಿ ಜುಲೈನಲ್ಲಿ 11.7% ಕ್ಕೆ ಪುನಃ ಏರಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ಹಣದುಬ್ಬರವನ್ನು ಪ್ರಮಾಣವನ್ನು ಶೇ.7ರಷ್ಟಕ್ಕೆ ಇಳಿಸಲು ಪ್ರಯತ್ನಿಸಲಾಗುತ್ತಿದ್ದು, ಸರ್ಕಾರ ಹಾಗೂ ಬ್ಯಾಂಕುಗಳ ಈ ಪ್ರಮಾಣವನ್ನು ಶೇ. 6ಕ್ಕೆ ಇಳಿಸುವ ಗುರಿ ಹೊಂದಿವೆ

ಗೋಧಿ ದೇಶದ ಅತಿದೊಡ್ಡ ಚಳಿಗಾಲ ಬೆಳೆ ಆಗಿದೆ. ಅಕ್ಟೋಬರ್-ನವೆಂಬರ್‌ ಮಧ್ಯದಲ್ಲಿ ಬಿತ್ತನೆ ಆರಂಭವಾದರೆ ಮುಂದಿನ ವರ್ಷದ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಕೊಯ್ಲಿಗೆ ಬರುತ್ತದೆ. ಇದಕ್ಕೂ ಮುನ್ನ ಮುಂಗಾರು ಹಂಗಾಮಿನ ಬೆಳೆಯಾಗಿರುವ ಅಕ್ಕಿ ಉತ್ಪಾದನೆ ಕುಂಠಿತಗೊಂಡಿರುವ ಬಗ್ಗೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+