Chikkamagaluru Rains: ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ, ರೈತರ ಮೊಗದಲ್ಲಿ ಸಂತಸ

ಚಿಕ್ಕಮಗಳೂರು, ಏಪ್ರಿಲ್‌, 26: ಚಿಕ್ಕಮಗಳೂರು ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಿದ್ದು, ಮುಗಿಲಿನತ್ತ ಮುಖ ಮಾಡಿದ್ದ ಇಲ್ಲಿನ ರೈತರಲ್ಲಿ ಹರ್ಷ ಮನೆಮಾಡಿದೆ.

ಚಿಕ್ಕಮಗಳೂರು ಪಟ್ಟಣ ಸೇರಿದಂತೆ ತಾಲೂಕಿನ ಸಖರಾಯಪಟ್ಟಣ, ಹಿರೇಗೌಜ, ಲಕ್ಯಾ ಸುತ್ತಮುತ್ತ ಭಾರೀ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ನಿನ್ನೆ ರಾತ್ರಿ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದಿದ್ದು, ಇಷ್ಟು ದಿನ ಬೆಳೆ ಉಳಿಸಿಕೊಳ್ಳಲು ಮುಗಿಲಿನತ್ತ ಮುಖ ಮಾಡಿದ್ದ ರೈತರು ಇದೀಗ ಸಂತಸ ವ್ಯಕ್ತಪಡಿಸಿದ್ದಾರೆ.

Heavy rain in several places of Chikkamagaluru district

ಗುಡುಗು ಜೊತೆಗೆ ಭಾರಿ ಮಳೆ

ನೆರೆ ರಾಜ್ಯ ತಮಿಳುನಾಡಿನ ಕರಾವಳಿಯಲ್ಲಿ 'ಚಂಡಮಾರುತ' ಏಳುವ ಮುನ್ಸೂಚನೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಗುಡುಗು ಜೊತೆಗೆ ಭಾರಿ ಮಳೆ ಅಬ್ಬರಿಸಲಿದೆ. ಕೆಲವು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಮಿಳುನಾಡಿನ ದಕ್ಷಿಣ ಕರಾವಳಿ ಭಾಗದಲ್ಲಿ ಸೃಷ್ಟಿಯಾಗಿದ್ದ ಸಮುದ್ರದ ಮೇಲ್ಮೈ ಸುಳಿಗಾಗಿ ಸೈಕ್ಲೋನ್ ರೂಪ ಪಡೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಈ ಕಾರಣದಿಂದ ಮುಂದಿನ ಐದು ದಿನ ಅಂದರೆ ಏಪ್ರಿಲ್ 30ರವರೆಗೆ ಕರ್ನಾಟಕದಲ್ಲಿ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ.

ಕರ್ನಾಟಕದ ಕರಾವಳಿ ಭಾಗ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ, ಒಳನಾಡಿನ ಬೆಳಗಾವಿ, ಬೀದರ್, ಕಲಬುರಗಿ, ವಿಜಯಪುರ, ರಾಯಚೂರು ಯಾದಗಿರಿ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಪೈಕಿ 2 ದಿನ ಸಾಧಾರಣವಾಗಿ ಮಳೆ ಬಂದರೆ ನಂತರ ಮಳೆ ತೀವ್ರತೆ ಇಲ್ಲಿ ಹೆಚ್ಚಾಗಲಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು, ಚಾಮರಾಜನಗರ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಭಾರೀ ಮಳೆಯ ಕಾರಣಕ್ಕೆ ಏಪ್ರಿಲ್ 26 ಮತ್ತು 29ರಂದು ಎರಡು ದಿನ 'ಯೆಲ್ಲೋ ಅಲರ್ಟ್' ಪಡೆದಿವೆ. ಉಳಿದ ದಿನಗಳಲ್ಲಿ ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಾಧಾರಣದಿಂದ ಉತ್ತಮ ಮಳೆ ನಿರೀಕ್ಷಿಸಬಹುದಾಗಿದೆ.

ವಿಜಯನಗರ, ತುಮಕೂರು, ಶಿವಮೊಗ್ಗ, ಬಳ್ಳಾರಿ, ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು, ಹಾಸನ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಮತ್ತು ಹಾಸನ ಜಿಲ್ಲೆಗಳ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಏಪ್ರಿಲ್ 29 ಮತ್ತು 30 ರಂದು ಉತ್ತಮದಿಂದ ಭಾರೀ ಮಳೆ ಸುರಿಯುವ ಸಂಭವವಿದೆ. ಕೆಲವು ಪ್ರದೇಶಗಳಲ್ಲಿ ಆಲಿಕಲ್ಲು ಮಳೆ ಸಹ ಆಗಬಹುದು ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ನಾಳೆ ಬುಧವಾರದಿಂದ ಕರ್ನಾಟಕದಾದ್ಯಂತ ಮಳೆರಾಯ ಅಬ್ಬರಿಸಲಿದ್ದಾರೆ. ಸೈಕ್ಲೋನ್ ಪ್ರದೇಶದಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 30-40 ಕಿಲೋ ಮೀಟರ್ ವೇಗದಲ್ಲಿರಲಿದೆ. ಹೀಗಾಗಿ ದಿನವೀಡಿ ಮೋಡ ಕವಿದ ವಾತಾವರಣದ ಜೊತೆಗೆ ತಂಪನೆಯ ಗಾಳಿ ಬೀಸಲಿದೆ. ಈ ವೇಳೆ ತಾಪಮಾನ ತುಸು ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+