• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾರುಕಟ್ಟೆಗೆ ಬಂದ ಹಾವೇರಿ ಆಲ್ಫಾನ್ಸೋ ಮಾವು; ರುಚಿ ನೋಡಿದ್ರಾ?

|

ಹಾವೇರಿ, ಮೇ 05 : ಹಾವೇರಿಯ ಆಲ್ಫಾನ್ಸೋ ಮಾವಿನ ಹಣ್ಣು ಮಾರುಕಟ್ಟೆಗೆ ಬಂದಿದೆ. ಜಿಲ್ಲೆಯ ರೈತರು ಬೆಳೆದ ಮಾವಿನ ಹಣ್ಣುಗಳಿಗೆ ತೋಟಗಾರಿಕೆ ಇಲಾಖೆ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾರುಕಟ್ಟೆ ಸೌಲಭ್ಯ ಒದಗಿಸಲಾಗಿದೆ.

ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು 'ಹಾವೇರಿ ಆಲ್ಫಾನ್ಸೋ' ಮಾವಿನ ಹಣ್ಣನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಪ್ರತಿ 1 ಕೆ.ಜಿ ಮಾವಿನ ಹಣ್ಣಿಗೆ 100 ರೂ. ಮತ್ತು ಒಂದು ಬಾಕ್ಸ್‌ಗೆ 300 ರೂ. ದರವನ್ನು ನಿಗದಿ ಮಾಡಲಾಗಿದೆ.

ಕೊರೊನಾ ಲಾಕ್ ಡೌನ್; ಸಂಕಷ್ಟಕ್ಕೆ ಸಿಲುಕಿದ ಮಾವು ಬೆಳೆದ ರೈತ

ಜಿಲ್ಲೆಯ ರೈತರು ಬೆಳೆದ ಮಾವಿನ ಹಣ್ಣುಗಳಿಗೆ ತೋಟಗಾರಿಕೆ ಇಲಾಖೆ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾರುಕಟ್ಟೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಹಾವೇರಿಯಲ್ಲಿಯೇ ರೈತರು ಬೆಳೆದ ಮಾವಿನ ಹಣ್ಣಿಗೆ 'ಹಾವೇರಿ ಆಲ್ಫಾನ್ಸೋ' ಎಂದು ಹೆಸರಿಟ್ಟು ಮಾರುಕಟ್ಟೆಗೆ ಬಿಡಲಾಗಿದೆ.

ಅಕಾಲಿಕ ಮಳೆ; ಮಾವು ಬೆಳೆಗಾರರಿಗೆ ಉಪಯುಕ್ತ ಸಲಹೆಗಳು

ಮಾವಿನ ಹಣ್ಣು ಖರೀದಿಗೆ ಪ್ರಕಾಶ ಪಾಟೀಲ 9164684889, ಪ್ರವೀಣ 7349885498, ಮಂಜುನಾಥ 636150721 ಹಾಗೂ ಶಂಕ್ರಪ್ಪ 9741976989 ಅವರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಹೇಳಿದ್ದಾರೆ.

ಬೆಂಗಳೂರಲ್ಲಿ ಅಂಚೆ ಕಚೇರಿಯಲ್ಲಿ ಸಿಗಲಿದೆ ಮಾವಿನ ಹಣ್ಣು!

11278.25 ಮೆಟ್ರಿಕ್ ಟನ್ ಹಣ್ಣು-ತರಕಾರಿ : ಕೊರೊನಾ ಹರಡದಂತೆ ತಡೆಯಲು ಲಾಕ್‍ ಡೌನ್ ಘೋಷಣೆ ಮಾಡಲಾಗಿದೆ. ಈ ಸಮಯದಲ್ಲಿ ತೋಟಗಾರಿಕೆ ಇಲಾಖೆಯು ಜಿಲ್ಲೆಯ ರೈತರು ಬೆಳದ 11278.25 ಮೆಟ್ರಿಕ್ ಟನ್ ತೋಟಗಾರಿಕೆ ಉತ್ಪನ್ನಗಳನ್ನು ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ವಿವಿಧ ಮಾರುಕಟ್ಟೆಗೆ ಕಳುಹಿಸಿದೆ.

ತೋಟಗಾರಿಕೆ ಉತ್ಪನ್ನಗಳಾದ ಮಾವು 1950 ಮೆಟ್ರಿಕ್ ಟನ್, ಕಲ್ಲಂಗಡಿ 105 ಮೆಟ್ರಿಕ್ ಟನ್, ಬಾಳೆಹಣ್ಣು 3124 ಮೆಟ್ರಿಕ್ ಟನ್, ಟೊಮೋಟೊ 1567 ಮೆಟ್ರಿಕ್ ಟನ್, ಹಸಿಮೇಣಸಿನಕಾಯಿ 3718 ಮೆಟ್ರಿಕ್ ಟನ್, ಕ್ಯಾಪ್ಸಿಕಂ 14.25 ಮೆಟ್ರಿಕ್ ಟನ್, ಪಪ್ಪಾಯಿ 65 ಮೆಟ್ರಿಕ್ ಟನ್, ಶುಂಠಿ 375 ಮೆಟ್ರಿಕ್ ಟನ್ ಮುಂತಾದ ಹಣ್ಣು, ತರಕಾರಿಗಳನ್ನು ಕಳಿಸಲಾಗಿದೆ.

English summary
Special Haveri Alphonso mango now entered the market. 100 per kg and 300 Rs for box price fixed. Farmers of the Karnataka's Haveri district cultivated mangoes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X