• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೃಷಿ ಮೇಳ 2018: ಹಲವು ಹೊಸ ಕೃಷಿ ತಳಿಗಳ ಲೋಕಾರ್ಪಣೆ

|

ಬೆಂಗಳೂರು, ನವೆಂಬರ್ 15: ಇಂದು ಕೃಷಿ ವಿವಿಯಲ್ಲಿ (ಜಿಕೆವಿಕೆ) ರಾಜ್ಯಪಾಲ ವಜುಭಾಯಿ ವಾಲಾ ಅವರಿಂದ ಉದ್ಘಾಟನೆಯಾದ ಕೃಷಿ ಮೇಳ-2018 ರಾಜ್ಯ ಮಟ್ಟದ ರೈತ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಸಂಶೋಧನೆಗಳ ಕುರಿತು ರೈತರಿಗೆ ಅರಿವು ಮೂಡಿಸಬೇಕಿದೆ: ವಜುಭಾಯಿ ವಾಲಾ

ಡಾ. ಎಂ.ಎಚ್. ಮರೀಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಕನ್ನೂರು ಗ್ರಾಮದ ಶ್ರೀ ಪ್ರಸಾದ ರಾಮ ಹೆಗಡೆ ಅವರಿಗೆ ನೀಡಲಾಯಿತು.

ಮತ್ತೆ ಬಂದಿದೆ ರೈತರ ಮಾಹಿತಿ ಕಣಜ 'ಕೃಷಿ ಮೇಳ': ಏನೇನು ವಿಶೇಷತೆ

ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಪ್ರಶಸ್ತಿ ಕೋಲಾರ ಜಿಲ್ಲೆ ಹಾಗೂ ತಾಲ್ಲೂಕಿನ ಮದನಹಳ್ಳಿ ಗ್ರಾಮದ ಎಂ.ಎನ್. ರವಿಶಂಕರ್, ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಮಹಿಳಾ ಪ್ರಶಸ್ತಿ ಹಾಸನ ಜಿಲ್ಲೆಯ ಗೌರೀಪುರಂನ ಶ್ರೀಮತಿ ಕೆ. ಹೇಮಾ ಅನಂತ್ ಅವರುಗಳು ಭಾಜನರಾಗಿದ್ದಾರೆ. ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಉತ್ತಮ ರೈತರನ್ನು ಗುರುತಿಸಿ ವಿವಿಧ ಕ್ಷೇತ್ರಗಳ ಅಡಿಯಲ್ಲಿ ಒಟ್ಟು 145 ಕೃಷಿಕರಿಗೆ ಪ್ರಶಸ್ತಿ ನೀಡಲಾಯಿತು.

ಇದೇ ಸಂದರ್ಭದಲ್ಲಿ ರಾಜ್ಯಪಾಲರು ಕೃಷಿ ವಿಶ್ವ ವಿದ್ಯಾನಿಲಯ ಬೆಂಗಳೂರು ಇವರು ಅಭಿವೃದ್ಧಿಪಡಿಸಿರುವ ವಿವಿಧ ತಳಿಗಳನ್ನು ಲೋಕಾರ್ಪಣೆ ಮಾಡಿದರು.

ಕೃಷಿ ಮೇಳದಲ್ಲಿ ವಸ್ತು ಪ್ರದರ್ಶನವೇ ಹೈಲೆಟ್

ರಾಗಿ ಕೆ.ಎಂ.ಆರ್-630, ಅಕ್ಕಿ ಅವರೆ : ಕೆ.ಬಿ.ಆರ್-1, ಸೋಯಾ ಅವರೆ ಕೆ.ಬಿ.ಎಸ್-23 ಹಾಗೂ ಸೂರ್ಯಕಾಂತಿ : ಕೆ.ಬಿ.ಎಸ್.ಹೆಚ್ -78 ನಾಲ್ಕು ಈ ಹೊಸ ತಳಿಗೆಗಳನ್ನು ಲೋಕಾರ್ಪಣೆ ಮಾಡಿದರು.

ವಿ.ವಿ. ರೈತರಿಗಾಗಿ ಸಿದ್ದಪಡಿಸಿರುವ ವಿಶೇಷ 2019 ರ ನೂತನ ಕ್ಯಾಲೆಂಡರ್ ಅನ್ನು ಸಹ ಬಿಡುಗಡೆ ಮಾಡಲಾಯಿತು. ಈ ಕೃಷಿ ಮೇಳವು ಇಂದಿನಿಂದ ನವೆಂಬರ್ 18 ರವರೆಗೆ ಒಟ್ಟು ನಾಲ್ಕು ದಿನಗಳ ಕಾಲ ನಡೆಯಲಿದ್ದು ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿರುತ್ತದೆ.

English summary
Governer Vajubhai Vala inagurated some new agriculture breeds today in Krishi Mela 2018. GKVK and government issued many awards to farmers. Marigowda award goes to Uttar Kannada district farmer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X