ಫ್ಲಿಪ್‌ಕಾರ್ಟ್‌ನಿಂದ 10,000 ಕ್ಕೂ ಹೆಚ್ಚು ರೈತರಿಗೆ ತರಬೇತಿ
ಬೆಂಗಳೂರು, ಜೂನ್ 1: ಭಾರತದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಆಹಾರ ಸುರಕ್ಷತೆ ಮತ್ತು ಉತ್ಪನ್ನಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವ ಬಗ್ಗೆ ದೇಶದ 10,000 ಕ್ಕೂ ಅಧಿಕ ರೈತರಿಗೆ ತರಬೇತಿ ನೀಡಿದೆ. ರೈತರು ತಮ್ಮ ಬೆಳವಣಿಗೆಗೆ ಮತ್ತು ರಾಷ್ಟ್ರೀಯ ಮಾರುಕಟ್ಟೆ ಜಾಲವನ್ನು ಹೊಂದುವ ಬಗೆ ಹೇಗೆಂಬುದರ ಬಗ್ಗೆಯೂ ತರಬೇತಿ ನೀಡಿರುವ ಫ್ಲಿಪ್ ಕಾರ್ಟ್ ಈ ಮೂಲಕ ರೈತರಿಗೆ ಸಾಮರ್ಥ್ಯ ಬೆಳೆಸಿಕೊಳ್ಳುವ ರೀತಿಯನ್ನು ಹೇಳಿಕೊಟ್ಟಿದೆ. ರೈತರಿಗೆ ಡಿಜಿಟಲ್ ವ್ಯವಹಾರದ ಬಗ್ಗೆ ಹೇಳಿಕೊಡುವ ನಿಟ್ಟಿನಲ್ಲಿ ಹಲವಾರು ಕೃಷಿ ಉತ್ಪನ್ನ ಉತ್ಪಾದಕ ಸಂಸ್ಥೆ(ಎಫ್ ಪಿಒಗಳು)ಗಳೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ.
ಎಫ್ ಪಿಒಗಳು ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ಗುಣಮಟ್ಟದ ಮಾನದಂಡಗಳನ್ನು ಪಾಲಿಸಲು ನೆರವಾಗಲೆಂದು ಎಫ್ ಪಿಒಗಳು, ಸಣ್ಣ ಮತ್ತು ಅತಿ ಸಣ್ಣ ರೈತರ ಉತ್ಪಾದನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ತರಬೇತಿ ಮತ್ತು ಶಿಕ್ಷಣವು ಗುಣಮಟ್ಟದ ಉತ್ಪನ್ನದ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ಪ್ರಮುಖವಾಗಿ ಕಚ್ಚಾ ವಸ್ತುಗಳ ಪೂರೈಕೆ, ಮರು ಪ್ಯಾಕೇಜಿಂಗ್ ಕೇಂದ್ರಗಳು, ಗುಣಮಟ್ಟದ ಉತ್ಪನ್ನಗಳ ಪರಿಶೀಲನೆ, ಖರೀದಿ ತಂತ್ರ, ಖರೀದಿ ಆರ್ಡರ್, ಪಾವತಿ ನಿಯಮಗಳು ಮತ್ತು ಷರತ್ತುಗಳು ಹಾಗೂ ಲಾಜಿಸ್ಟಿಕ್ ಗಳು ಒಳಗೊಂಡಿವೆ. ಈ ಎಲ್ಲಾ ಅಂಶಗಳ ಬಗ್ಗೆ ರೈತರಿಗೆ ವರ್ಚುವಲ್ ಮತ್ತು ಆನ್ ಗ್ರೌಂಡ್ ತರಬೇತಿಯನ್ನು ನೀಡಲಾಗಿದೆ.
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಕೇರಳ, ಮಹಾರಾಷ್ಟ್ರ, ಗುಜರಾತ್ ಮತ್ತು ಉತ್ತರ ಪ್ರದೇಶಗಳ ಎಫ್ ಪಿಒಗಳು, ಸಣ್ಣ ಮತ್ತು ಅತಿ ಸಣ್ಣ ರೈತ ಸಮುದಾಯಗಳೊಂದಿಗೆ ಸಹಭಾಗಿತ್ವ ಮಾಡಿಕೊಳ್ಳುವ ಮೂಲಕ ಫ್ಲಿಪ್ ಕಾರ್ಟ್ ಈ ತರಬೇತಿಯನ್ನು ನೀಡುತ್ತಿದೆ. ಈ ಪಾಲುದಾರಿಕೆಗಳ ಮೂಲಕ ಫ್ಲಿಪ್ ಕಾರ್ಟ್ ಧಾನ್ಯಗಳು, ಮಿಲ್ಲೆಟ್ಸ್ ಮತ್ತು ಸಂಪೂರ್ಣ ಸಾಂಬಾರ ಪದಾರ್ಥಗಳನ್ನು ತನ್ನ ಪ್ಲಾಟ್ ಫಾರ್ಮ್ ಗೆ ತರುವ ಮೂಲಕ ರೈತ ಸಮುದಾಯದ ಸಾವಿರಾರು ಕುಟುಂಬಗಳ ಜೀವನೋಪಾಯ ಮಟ್ಟವನ್ನು ಸುಧಾರಣೆ ಮಾಡುತ್ತಿದೆ.

ಎಬಿಐ ಫಾರ್ಮರ್ಸ್, ಶ್ರೀ ಸತ್ಯಸಾಯಿ ಎಂಎಸಿ ಫೆಡ್, ಜನ ಜೀವನ, ನಿರಾಳ ಹರ್ಬಲ್, ಸಹ್ಯಾದ್ರಿ ಫಾರ್ಮ್ಸ್ ಸಪ್ಲೈ ಚೇನ್ ಮತ್ತು ಇತರೆ ಎಫ್ ಪಿಒಗಳೊಂದಿಗೆ ಫ್ಲಿಪ್ ಕಾರ್ಟ್ ಸಹಭಾಗಿತ್ವ ಮಾಡಿಕೊಂಡಿದ್ದು, ತನ್ನ ಪ್ಲಾಟ್ ಫಾರ್ಮ್ ಮೂಲಕ ದೇಶದೆಲ್ಲೆಡೆಯ 400 ಮಿಲಿಯನ್ ಗೂ ಅಧಿಕ ಗ್ರಾಹಕರನ್ನು ಹೊಂದಲು ಅವಕಾಶ ಕಲ್ಪಿಸಿದೆ.
ಈ ಬಗ್ಗೆ ಮಾತನಾಡಿದ ಫ್ಲಿಪ್ ಕಾರ್ಟ್ ಗ್ರೂಪ್ ನ ಚೀಫ್ ಕಾರ್ಪೊರೇಟ್ ಅಫೇರ್ಸ್ ಆಫೀಸರ್ ರಜನೀಶ್ ಕುಮಾರ್,''ನಮ್ಮ ಸುತ್ತಮುತ್ತ ಇರುವ ಸಮುದಾಯಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ನಾವು ನಿರಂತರವಾಗಿ ಹಲವಾರು ಮಾರ್ಗಗಳನ್ನು ಅನ್ವೇಷಣೆ ಮಾಡುತ್ತಲೇ ಬಂದಿದ್ದೇವೆ. ಸಣ್ಣ ರೈತರು ಮತ್ತು ಎಫ್ ಪಿಒಗಳೊಂದಿಗಿನ ನಮ್ಮ ಸಹಭಾಗಿತ್ವವು ಸ್ಥಳೀಯ ರೈತರ ಆದಾಯವನ್ನು ಹೆಚ್ಚಿಸುವ ಹೊಸ ಮಾರ್ಗವನ್ನು ಸೃಷ್ಟಿಸಲು ಮತ್ತು ದೇಶಾದ್ಯಂತ ಅವರ ಕೊಡುಗೆಗಳನ್ನು ಮಾಪನ ಮಾಡುವ ನಮ್ಮ ಬದ್ಧತೆಯನ್ನು ಹೆಚ್ಚಿಸುತ್ತದೆ. ತಂತ್ರಜ್ಞಾನ, ನಾವೀನ್ಯತೆ ಮತ್ತು ಇ-ಕಾಮರ್ಸ್ ನ ಶಕ್ತಿಯನ್ನು ಬಳಸಿಕೊಂಡು ನಾವು ಸಾಮಾಜಿಕ-ಆರ್ಥಿಕ ಬೆಳವಣಿಗೆಯ ವೇಗವನ್ನು ಹೆಚ್ಚಿಸಲಿದ್ದೇವೆ ಹಾಗೂ ಫ್ಲಿಪ್ ಕಾರ್ಟ್ ಮಾರುಕಟ್ಟೆಯ ಮೂಲಕ ವ್ಯಾಪಕವಾದ ಗ್ರಾಹಕರ ಜಾಲದೊಂದಿಗೆ ರೈತ ಉತ್ಪಾದಕ ಸಂಸ್ಥೆಗಳಿಗೆ ಒದಗಿಸುವ ಮೂಲಕ ಅವರ ಜೀವನೋಪಾಯದ ಮೇಲೆ ಸಕಾರಾತ್ಮಕವಾದ ಪರಿಣಾಮವನ್ನು ಬೀರಲು ಸಾಧ್ಯವಾಗುತ್ತಿದೆ'' ಎಂದರು.

ಫ್ಲಿಪ್ ಕಾರ್ಟ್ ಗ್ರಾಸರಿ ಪ್ರಸ್ತುತ ದೇಶದ 28 ರಾಜ್ಯಗಳ 1,800 ನಗರಗಳು ಮತ್ತು 10,000 ಕ್ಕೂ ಹೆಚ್ಚು ಪಿನ್ ಕೋಡ್ ಪ್ರದೇಶಗಳಲ್ಲಿ ಸೇವೆಯನ್ನು ನೀಡುತ್ತಿದೆ. ಇದು ತನ್ನ ಕಾರ್ಯಾಚರಣೆಗಳನ್ನು ವೃದ್ಧಿಸಿಕೊಳ್ಳುವತ್ತ ಗಮನಹರಿಸಿದ್ದು, ಕಳೆದ ಎರಡು ವರ್ಷಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ 28 ಫುಲ್ ಫಿಲ್ಮೆಂಟ್ ಸೆಂಟರ್‌ಗಳನ್ನು ಆರಂಭಿಸಿದ್ದು, ಇವುಗಳ ವಿಸ್ತೀರ್ಣ 27 ಲಕ್ಷ ಚದರಡಿಗೂ ಹೆಚ್ಚಿದೆ. ಈ ಮೂಲಕ ದೇಶಾದ್ಯಂತ ಹೆಚ್ಚುತ್ತಿರುವ ಆನ್ ಲೈನ್ ಗ್ರಾಸರಿ ಬೇಡಿಕೆಯನ್ನು ಪೂರೈಸುತ್ತಿದೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications