ಕೃಷಿಗೆ ಚಟುವಟಿಕೆಗೆ ವಿನಾಯಿತಿ: ಗೊಬ್ಬರ ಮಾರಾಟ ಶೇ.45 ರಷ್ಟು ಹೆಚ್ಚಳ
ನವದೆಹಲಿ, ಮೇ 4: ದೇಶದಲ್ಲಿ ಒಂದೆಡೆ ಕೊರೊನಾ ಬೀತಿ, ಇನ್ನೊಂದೆಡೆ ಲಾಕ್‌ಡೌನ್‌ನಿಂದಾಗಿ ಕಾರು, ದ್ವಿಚಕ್ರ ವಾಹನಗಳ ಮಾರಾಟ ಎಲ್ಲವೂ ಸಂಪೂರ್ಣವಾಗಿ ನಿಂತಿದೆ. ಇದರ ಮಧ್ಯೆ ಕೃಷಿ ಚಟುವಟಿಕೆಗಳಿಗೆ ಸರ್ಕಾರ ವಿನಾಯಿತಿ ನೀಡಿದ ಹಿನ್ನೆಲೆಯಲ್ಲಿ ರಸ ಗೊಬ್ಬರ ಮಾರಾಟ ಶೇ.45.1ರಷ್ಟು ಹೆಚ್ಚಳವಾಗಿದೆ.
Recommended Video
ಏಪ್ರಿಲ್ 2020ಕ್ಕೆ ಗೊಬ್ಬರ 20.56 ಟನ್ ಅಷ್ಟು ಮಾರಾಟವಾಗಿದೆ ಎಂದು ರಸಗೊಬ್ಬರ ಇಲಾಖೆ ಮಾಹಿತಿ ನೀಡಿದೆ.ಲಾಕ್‌ಡೌನ್ ಆರಂಭವಾಗುತ್ತಿದ್ದತೆ ಕೃಷಿ ಚಟುವಟಿಕೆಗಳಿಗೆ ಹೊಡೆತ ಬಿದ್ದಿತ್ತು, ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರಲಾರದೆ ನೀರಿನಲ್ಲಿ ಚೆಲ್ಲಿ ಬೇಸರ,ಆಕ್ರೋಶ ವ್ಯಕ್ತಪಡಿಸಿದ್ದರು. ಕೇವಲ ಗೊಬ್ಬರವಷ್ಟೇ ಅಲ್ಲದೆ ಬೀಜಗಳಿಗೂ ಬೇಡಿಕೆ ಬಂದಿದೆ.
ಪಂಜಾಬ್ , ಹರ್ಯಾಣಾ, ರಾಜಸ್ಥಾನದಲ್ಲಿ ಹೈಬ್ರಿಡ್ ಹತ್ತಿ, ಗೋಧಿಗೆ ಭಾರಿ ಬೇಡಿಕೆ ಬಂದಿದೆ.ಆದರೆ ಕೃಷಿ ಚಟುವಟಿಕೆಗಳಿಗೆ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆ ಮೊದಲ ಸ್ಥಿತಿಯತ್ತ ಮರಳುತ್ತಿದೆ.

2018-19ರ ಮಾರಾಟಕ್ಕೂ 2020ರ ಮಾರಾಟಕ್ಕೂಇರುವ ವ್ಯತ್ಯಾಸ
2018ರಲ್ಲಿ 12.96 ಲಕ್ಷ ಟನ್ ಗೊಬ್ಬರ ಮಾರಾಟವಾಗಿತ್ತು, 2019ರ ಏಪ್ರಿಲ್‌ನಲ್ಲಿ 14.7 ಲಕ್ಷ ಟನ್, ಇದೀಗ 2020ರ ಏಪ್ರಿಲ್‌ನಲ್ಲಿ ಬರೋಬ್ಬರಿ 20.56 ಲಕ್ಷ ಟನ್ ಅಷ್ಟು ಮಾರಾಟವಾಗಿದೆ.

ಯೂರಿಯಾ ಮಾರಾಟ ಪ್ರಮಾಣವೆಷ್ಟು?
ವಾರ್ಷಿಕ ಮಾರಾಟ ಬೆಳವಣಿಗೆ ಏಪ್ರಿಲ್‌ನಲ್ಲಿ ಶೇ.36.2ರಷ್ಟಿದೆ. ಯೂರಿಯಾ 2019ರಲ್ಲಿ 8.04 ಲಕ್ಷ ಟನ್, 2019ರಲ್ಲಿ 10.95 ಲಕ್ಷ ಟನ್. ಡಿ ಅಮೋನಿಯಮ್ ಫಾಸ್ಪೇಟ್ 2.97 ಲಕ್ಷ ಟನ್, ನೈಟ್ರೋಜನ್ ಫಾಸ್ಪರಸ್ ಸಲ್ಫರ್ ಕಾಂಪ್ಲೆಕ್ಸ್ ಗೊಬ್ಬರ3.9 ಲಕ್ಷ ಟನ್, ಮ್ಯೂರಿಯೇಟ್ ಆಫ್ ಪೊಟ್ಯಾಷ್ 1.33 ಲಕ್ಷ ಟನ್, ಸಿಂಗಲ್ ಸೂಪರ್ ಫಾಸ್ಪೇಟ್ 5.6 ಲಕ್ಷ ಟನ್ ಅಷ್ಟು ಮಾರಾಟವಾಗಿದೆ.

ಇದು ಲಾಕ್‌ಡೌನ್ ಪರಿಣಾಮವಲ್ಲ
ರಸಗೊಬ್ಬರ ಇಲಾಖೆಯ ಚಾರ್ಟ್ ನೀಡುವ ಮಾಹಿತಿ ಪ್ರಕಾರ ಗೊಬ್ಬರ ಇನ್ನಿತರೆ ಕೃಷಿಗೆ ಬೇಕಾಗಿರುವ ವಸ್ತುಗಳ ಬೇಡಿಕೆ ಕೇವಲ ಏಪ್ರಿಲ್‌ನಿಂದ ಆರಂಭವಾಗಿದ್ದಲ್ಲ. ನವೆಂಬರ್‌ನಿಂದ ಬೇಡಿಕೆ ದುಪ್ಪಟ್ಟಾಗಿತ್ತು ಎಂದು ತಿಳಿಸಿದ್ದಾರೆ.

ಮಳೆ ಆರಂಭವಾದರೆ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ
ಇನ್ನೇನು ಮಳೆಗಾಲ ಆರಂಭವಾಗಲಿದೆ, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮುಂಗಾರಿನಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಿರುತ್ತದೆ. ರೈತರು ಸಾಕಷ್ಟು ಪ್ರದೇಶಗಳಲ್ಲಿ ಕೃಷಿ ಮಾಡುತ್ತಾರೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications