ರಸಗೊಬ್ಬರ ಮೇಲಿನ ಸಬ್ಸಿಡಿ ಶೇ.140ರಷ್ಟು ಹೆಚ್ಚಳ ಮಾಡಿದ ಕೇಂದ್ರ ಸರ್ಕಾರ
ನವದೆಹಲಿ, ಮೇ 19: ರಸಗೊಬ್ಬರ ಮೇಲಿನ ಸಬ್ಸಿಡಿಯಲ್ಲಿ ಕೇಂದ್ರ ಸರ್ಕಾರ ಶೇ.140ರಷ್ಟು ಹೆಚ್ಚಳ ಮಾಡಿದೆ. ಈ ಸಬ್ಸಿಡಿಗಾಗಿ ಸರ್ಕಾರ ಸುಮಾರು 14,775 ಕೋಟಿ ರೂ. ವೆಚ್ಚ ಮಾಡಲಿದೆ.
ಬೆಲೆ ಏರಿಕೆಯ ಎಲ್ಲಾ ಹೊರೆಗಳನ್ನು ಹೊರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರತಿ ಚೀಲಕ್ಕೆ ಸಬ್ಸಿಡಿ ಪ್ರಮಾಣವನ್ನು ಒಂದೇ ಬಾರಿಗೆ ಹೆಚ್ಚಿಸಿಲ್ಲ ಎಂದು ಅದು ಹೇಳಿದೆ. ರಾಸಾಯನಿಕ ಗೊಬ್ಬರಗಳಿಗೆ ಸಬ್ಸಿಡಿ ನೀಡಲು ಸರ್ಕಾರ ಪ್ರತಿವರ್ಷ ಸುಮಾರು 80,000 ಕೋಟಿ ರೂ. ವೆಚ್ಚ ಮಾಡಲಿದೆ.
ಈ ನಿರ್ಧಾರ ರೈತರಿಗೆ ಅನುಕೂಲವಾಗಿದ್ದು ಡಿಎಪಿ ಗೊಬ್ಬರದ ಸಬ್ಸಿಡಿ ಪ್ರತಿ ಚೀಲಕ್ಕೆ 500 ರೂ.ನಿಂದ 1200 ರೂ. ಗೆ ಹೆಚ್ಚಳವಾಗಿದೆ. ಅದರಿಂದಾಗಿ ಒಂದು ಚೀಲ ಡಿಎಪಿ 2400 ರೂ. ಗೆ ಬದಲು 1200 ರೂ,ಗೆ ಸಿಕ್ಕಲಿದೆ.

ಡಿಎಪಿಯ ನಿಜವಾದ ಬೆಲೆ ಈಗ ಪ್ರತಿ ಚೀಲಕ್ಕೆ 2,400 ರೂ., ರಸಗೊಬ್ಬರ ಕಂಪೆನಿಗಳು 500 ರೂ.ಗಳ ಸಬ್ಸಿಡಿಯನ್ನು ಪರಿಗಣಿಸಿ 1,900 ರೂ.ಗೆ ಮಾರಾಟ ಮಾಡುತ್ತಿದ್ದವು.
ರೈತರ ಜೀವನವನ್ನು ಸುಧಾರಿಸಲು ಸರ್ಕಾರ ಬದ್ಧವಾಗಿದೆ. ಆದ್ದರಿಂದ, ಜಾಗತಿಕ ಬೆಲೆಗಳ ಹೆಚ್ಚಳದ ಹೊರತಾಗಿಯೂ, ಗೊಬ್ಬರವನ್ನು ಹಳೆಯ ದರದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳುತ್ತೇವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಡಿಎಪಿಯ ಅಂತರರಾಷ್ಟ್ರೀಯ ಮಾರುಕಟ್ಟೆ ಬೆಲೆಗಳ ಏರಿಕೆಯ ಹೊರತಾಗಿಯೂ, ಹಳೆಯ ಚೀಲಕ್ಕೆ 1,200 ರೂ.ಗೆ ಮಾರಾಟ ಮಾಡುವುದನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.












Click it and Unblock the Notifications