• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಿಂಗಳ ಕೊನೆಗೆ ರೈತರ ಕೈಸೇರುತ್ತೆ ಸಾಲ ಋಣಮುಕ್ತ ಪತ್ರ: ಕಾಶೆಂಪುರ

|

ಬೆಂಗಳೂರು, ನವೆಂಬರ್ 09: ಸಹಕಾರಿ ಬ್ಯಾಂಕ್ ಸಾಲ ಮನ್ನಾ ಆಗಿರುವುದಕ್ಕೆ ಋಣಮುಕ್ತ ಪತ್ರವು ಈ ತಿಂಗಳ ಅಂತ್ಯಕ್ಕೆ ರೈತರಿಗೆ ದೊರಕುತ್ತದೆ ಎಂದು ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪುರ ಹೇಳಿದರು.

ಖಾಸಗಿ ಬ್ಯಾಂಕುಗಳ ಸಾಲದ ಬಗ್ಗೆ ಗೊಂದಲುಗಳು ನಿವಾರಣೆ ಆಗದೇ ಇದ್ದರೂ ಸಹಕಾರಿ ಬ್ಯಾಂಕುಗಳು ಋಣಪುತ್ರ ನೀಡಲು ಪ್ರಾರಂಭಿಸುತ್ತಿದೆ.

ಒನ್ ಟೈಮ್ ಸೆಟ್ಲ್ ಮೆಂಟ್ ಗೆ ಬ್ಯಾಂಕ್-ರೈತರು ಒಪ್ಪಿಗೆ: ಎಚ್ಡಿಕೆ

2.20 ಲಕ್ಷ ರೈತರು ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದು ಅಷ್ಟೂ ಜನರಿಗೆ ಈ ತಿಂಗಳ ಅಂತ್ಯಕ್ಕೆ ಅವರಿಗೆ ಋಣಪತ್ರ ವಿತರಿಸುವ ಕಾರ್ಯಕ್ಕೆ ಚಾಲನೆ ದೊರಕುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಒಟ್ಟು 9000 ಕೋಟಿ ರೂಪಾಯಿ ಮೊತ್ತದ ಸಹಕಾರಿ ಸಂಘದ ಬೆಳೆ ಸಾಲವನ್ನು ಮನ್ನಾ ಮಾಡಲಾಗಿದೆ. ಕಳೆದ ಸರ್ಕಾರದಲ್ಲಿ ಬಾಕಿ ಉಳಿಸಿದ್ದ ಸಾಲವನ್ನೂ ಸಹ ಈ ಸರ್ಕಾರದ ಅವಧಿಯಲ್ಲಿ ಮನ್ನಾ ಮಾಡಲಾಗಿದೆ ಎಂದು ಅವರು ಹೇಳಿದರು.

ಬೆಳಗಾವಿ: ಆಕ್ಸಿಸ್ ಬ್ಯಾಂಕ್ ಅಧಿಕಾರಿಗಳು, ರೈತರ ಮಧ್ಯೆ ಸಂಧಾನ ಸಭೆ

ಖಾಸಗಿ ಬ್ಯಾಂಕುಗಳ ಸಾಲಮನ್ನಾ ಇನ್ನೂ ಗೊಂದಮಯವಾಗಿಯೇ ಇದೆ. ಇತ್ತೀಚೆಗಷ್ಟೆ ಆಕ್ಸಿಸ್ ಬ್ಯಾಂಕ್ ಸಾಲಗಾರ ರೈತರಿಗೆ ನೊಟೀಸ್ ಕಳಿಸಿತ್ತು. ಆದರೆ ಸಿಎಂ ಮಧ್ಯ ಪ್ರವೇಶಿಸಿ, ಜಿಲ್ಲಾಧಿಕಾರಿ ಸಭೆ ನಡೆಸಿದ ಕಾರಣ ಬ್ಯಾಂಕ್ ಅಧಿಕಾರಿಗಳು ಸುಮ್ಮನಾಗಿದ್ದಾರೆ. ಆದರೆ ಖಾಸಗಿ ಬ್ಯಾಂಕುಗಳ ಸಾಲಮನ್ನಾ ಕಾರ್ಯ ಚಾಲು ಯಾವಾಗ ಆಗುತ್ತದೆ ಎಂಬ ಅನುಮಾನಗಳು ಹಾಗೆಯೇ ಇವೆ.

ಬೆಳಗಾವಿ ರೈತರ ವಿರುದ್ಧ ಬಂಧನ ವಾರೆಂಟ್, ಸಿಎಂ ಅಭಯ

ಸರ್ಕಾರವು ಐಎಎಸ್‌ ಅಧಿಕಾರಯೊಬ್ಬರನ್ನು ಸಾಲಮನ್ನಾ ಕಾರ್ಯಕ್ರಮಕ್ಕಾಗಿಯೇ ನೇಮಿಸಿದ್ದು ಅವರ ಮೇಲ್ವಿಚಾರಣೆಯಲ್ಲಿ ಸಾಲಮನ್ನಾ ಕಾರ್ಯ ಜರುಗುತ್ತದೆ. ಮತ್ತೊಂದು ಮಾಹಿತಿ ಪ್ರಕಾರ ಬ್ಯಾಂಕುಗಳು ಸರ್ಕಾರದ ನಿಯಮಗಳಿಗೆ ಒಪ್ಪಿ ಸಾಲಗಾರರ ಮಾಹಿತಿ ನೀಡಿಲ್ಲ ಎಂಬ ಸುದ್ದಿಯೂ ಇದೆ.

English summary
Farmers will get debt relief letter by this month end said co operation minister Bandeppa Kashempura. But private banks loan issue is yet not solved.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X