• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭೂ ಸುಧಾರಣೆ ಕಾಯ್ದೆ ವಿರುದ್ಧ ರೈತ ಸಂಘದ BOARD- ಅಧ್ಯಾಯ 2

|

ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ತಂದಿರುವ ಸುಗ್ರೀವಾಜ್ಞೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಧಿಕ್ಕಾರ ಹೇಳಿದೆ. "ಕೃಷಿ ಭೂಮಿ ಮಾರಾಟದ ಸರಕಲ್ಲ, ಬಂಡವಾಳಶಾಹಿಗಳಿಗೆ, ಭೂಗಳ್ಳರಿಗೆ ಗ್ರಾಮದೊಳಗೆ ಪ್ರವೇಶವಿಲ್ಲ" ಎಂಬ ಒಕ್ಕಣೆಯ ಫಲಕ/ಬೋರ್ಡ್ ಪ್ರತಿ ಗ್ರಾಮಗಳ ಪ್ರವೇಶ ದ್ವಾರದಲ್ಲಿ ಹಾಕಲು ಸಂಘ ಮುಂದಾಗಿದೆ.

   BBMP commissioner Anil Kumar transferred | Oneindia Kannada

   ರೈತರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಗ್ರಾಮಗಳ ಮುಂದೆ ಬೋರ್ಡ್ ಹಾಕುವುದು ಚಳವಳಿಯ ವಿನೂತನ ಕಾರ್ಯಕ್ರಮಗಳಲ್ಲೊಂದು. ಅದರ ರೂವಾರಿ ಪ್ರೊ.ಎಂ.ಡಿ.ಎನ್. ಇದೀಗ ಅವರ ತತ್ವ ಸಿದ್ಧಾಂತಗಳನ್ನು ಒಪ್ಪುವ ಎಲ್ಲ ರೈತ ಮುಖಂಡರೂ ಒಟ್ಟಾಗಿ ಗ್ರಾಮಗಳ ಮುಂದಿನ ಬೋರ್ಡುಗಳಿಗೆ ಭೂ ಸುಧಾರಣೆ ಕುರಿತಾದ ಹೊಸದೊಂದು ಅಧ್ಯಾಯವನ್ನು ಸೇರ್ಪಡೆ ಮಾಡುತ್ತಿದ್ದಾರೆ.

   HT ಹತ್ತಿ ವಿರುದ್ಧ ಹೋರಾಟಕ್ಕೆ ಕಾಲ ಪಕ್ವ; ಸರ್ಕಾರ, ಚಳವಳಿಗಳು ನಿಗಾವಹಿಸಬೇಕು

   ಈಗಲೂ ಬಹುತೇಕ ಹಳ್ಳಿಗಳಲ್ಲಿ ಬೋರ್ಡ್ ಕಾಣಬಹುದು

   ಈಗಲೂ ಬಹುತೇಕ ಹಳ್ಳಿಗಳಲ್ಲಿ ಬೋರ್ಡ್ ಕಾಣಬಹುದು

   ಹಿಂದೆ ಎಂಡಿಎನ್ ಹಾಕಿಸಿದ್ದ ಬೋರ್ಡುಗಳನ್ನು ಈಗಲೂ ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿ ಕಾಣಬಹುದು.

   ಅವರು ಹಾಕಿಸಿರುವ ಬೋರ್ಡ್ ಗಳಲ್ಲಿ ಹೀಗೆ ಬರೆಯಲಾಗಿದೆ- "ಭ್ರಷ್ಟ ಸಹಕಾರಿ, ಸರ್ಕಾರಿ, ಬ್ಯಾಂಕ್ ಮತ್ತು ರೆವಿನ್ಯೂ ಇಲಾಖೆ ಸಂಬಳದ ನೌಕರರಿಗೆ ಮತ್ತು ಭ್ರಷ್ಟ ರಾಜಕಾರಣಿಗೆ ಗ್ರಾಮದೊಳಗೆ ಪ್ರವೇಶವಿಲ್ಲ. ಪ್ರಾಮಾಣಿಕರಿಗೆ ಸ್ವಾಗತ. ರೈತರನ್ನು ಭೇಟಿ ಮಾಡುವ ಸಮಯ ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ. ಸೋಮವಾರ ರೈತರಿಗೆ ರಜಾ. ಈ ನಿಯಮ ಉಲ್ಲಂಘಿಸಿದವರು ಗ್ರಾಮ ತೀರ್ಮಾನಿಸಿದ ಶಿಕ್ಷೆಗೆ ಗುರಿಯಾಗುತ್ತಾರೆ"...

   ರೈತ ಚಳವಳಿಯ ಮೈಲುಗಲ್ಲು

   ರೈತ ಚಳವಳಿಯ ಮೈಲುಗಲ್ಲು

   ರೈತರಿಂದ ಸಾಲ ವಸೂಲಿ ನೆಪದಲ್ಲಿ ಮನೆಗಳನ್ನು ಜಪ್ತಿ ಮಾಡುತ್ತಿದ್ದ ಬ್ಯಾಂಕರ್ ಗಳು ಮತ್ತವರ ಬೆಂಗಾವಲಿಗೆ ನಿಲ್ಲುವ ಸರ್ಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲೆಂದು ರಾಜ್ಯ ರೈತ ಸಂಘ ನೆಟ್ಟಿರುವ ಈ ಬೋರ್ಡ್ ಗಳು ರೈತರ ಸ್ವಾಭಿಮಾನದ ಸಂಕೇತಗಳಂತಿವೆ. ರೈತ ಚಳವಳಿಯ ಮೈಲುಗಲ್ಲಿನಂತಿವೆ. ರೈತರು ತಮ್ಮ ಹಕ್ಕು ಪ್ರತಿಪಾದಿಸುವ ಸಂವಿಧಾನದಂತಿವೆ.

   ಎಂಡಿಎನ್ ಕಂಡುಕೊಟ್ಟ ಇದೊಂದು ಚಳವಳಿಯ ಮಾದರಿ ಮತ್ತು ಮಾರ್ಗ ಇದೀಗ ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ ಮತ್ತು ಸಾಮೂಹಿಕ ನಾಯಕತ್ವದ ಎಲ್ಲ ನಾಯಕರು ಸೇರಿ ಮುಂದುವರೆಸುತ್ತಿದ್ದಾರೆ.

   ಕೃಷಿ ಇಲಾಖೆಯಿಂದ ರೈತರಿಗೆ ಉಪಯುಕ್ತ ಮಾಹಿತಿ

   ರೈತ ಸಂಘದ ಗ್ರಾಮ ಘಟಕಗಳು ಮಾಡಬೇಕಾದ್ದೇನು?

   ರೈತ ಸಂಘದ ಗ್ರಾಮ ಘಟಕಗಳು ಮಾಡಬೇಕಾದ್ದೇನು?

   "ವಿಶ್ವದಾದ್ಯಂತ ಸಾಮಾಜಿಕ ಬದಲಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದ ಇಂಥ ಮಾರ್ಗಗಳನ್ನು ಗುರುತಿಸಿ ಸಂರಕ್ಷಿಸುವ ಲಂಡನ್ ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂ ಈಗ್ಗೆ ಏಳೆಂಟು ವರ್ಷಗಳ ಹಿಂದೆ ಈ ಬೋರ್ಡನ್ನು ಸಂರಕ್ಷಿಸಿದೆ. ಇದರಿಂದಾಗಿ ವಿಕ್ಟೋರಿಯಾ ಗ್ಯಾಲರಿಯಲ್ಲಿ ರೈತಸಂಘದ ಚಳವಳಿಯ ಮಾರ್ಗ (ಫಲಕ) ಶಾಶ್ವತವಾಗಿ ಉಳಿದಂತಾಗಿದೆ.

   ಇದೀಗ ರೈತ ಸಂಘದ ಗ್ರಾಮ ಘಟಕಗಳು ಏನು ಮಾಡಬೇಕು? ಇಲ್ಲಿದೆ ಮಾಹಿತಿ; ನಿಮ್ಮ ಗ್ರಾಮದಲ್ಲಿ ಈಗಾಗಲೇ ಇರುವ ಬೋರ್ಡ್ ಯಾವ ಸ್ಥಿತಿಯಲ್ಲಿದೆ ಗಮನಿಸಿ. ಅಕ್ಷರಗಳು ಅಳಿಸಿಹೋಗಿದ್ದರೆ ಮತ್ತೆ ಬರೆಸಿ. ಅದರ ಜೊತೆಗೆ ಹೊಸ ಚಳವಳಿಯ ಅಂಶವನ್ನು ಅದಕ್ಕೆ ಸೇರಿಸಿ. ಮೊದಲಿನ ಬೋರ್ಡಿನ ಜೊತೆಗೆ ಹೊಸದೊಂದು ಫಲಕ ಮಾಡಿಸಿದರೂ ಆದೀತು...

   ಹೊಸದಾಗಿ ಬರೆಸಬೇಕಾದ/ಹೊಸ ಫಲಕ ಮಾಡಬೇಕಾದ ಅಂಶ ಇದು. ""ಕೃಷಿ ಭೂಮಿ ಮಾರಾಟದ ಸರಕಲ್ಲ, ಬಂಡವಾಳಶಾಹಿಗಳಿಗೆ, ಭೂಗಳ್ಳರಿಗೆ ಗ್ರಾಮದೊಳಗೆ ಪ್ರವೇಶವಿಲ್ಲ".

   ರೈತರು ಒಪ್ಪುವುದಾದರೆ !?

   ರೈತರು ಒಪ್ಪುವುದಾದರೆ !?

   ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಚಳವಳಿಯ ಮಾದರಿಯ "ಬೋರ್ಡ್" ಗೆ ಒಂದು standard size, model ಇದ್ದರೆ ಚೆನ್ನ. ಗಾತ್ರ, ಅಳತೆ, ಅದರಲ್ಲಿ ಬಳಸುವ ಅಕ್ಷರಗಳು (ಫಾಂಟ್), ಬಣ್ಣ, ಮುಖಂಡರ ಚಿತ್ರಗಳು, ಮತ್ತದರ ಅಳತೆ uniform ಮಾಡಬಹುದಾ ಯೋಚಿಸಿ.

   ಒಂದು ಕಡೆ ಫ್ಲೆಕ್ಸ್, ಇನ್ನೊಂದೂರಿನಲ್ಲಿ ಕಬ್ಬಿಣದ ಫಲಕ ಮತ್ತೊಂದು ಕಡೆ ಸಿಮೆಂಟ್ ಬೋರ್ಡ್ ಗಳಿವೆ. ಎಲ್ಲಾ ಕಡೆ ಏಕರೂಪದ ಮಾದರಿ ಅನುಸರಿಸಬಹುದಾ ಎಂಬುದನ್ನೂ ಚರ್ಚಿಸಿ ತೀರ್ಮಾನ ಕೈಗೊಳ್ಳಿ. ಏಕರೂಪವಾಗಿ ಮಾಡುವ idea ಮೊದಲಿಗೆ ಎಲ್ಲರಿಗೂ ಒಪ್ಪುವ ವಿಷಯವಾ? Is it practical? ಹೌದಾದರೆ ಆ ದಿಕ್ಕಿನಲ್ಲಿ ಯೋಚಿಸಿ. ಇಲ್ಲವೇ ಈ ವಿಷಯ ಇಲ್ಲಿಗೆ ಮೊಟಕು ಮಾಡಿ. ಚಳವಳಿಯತ್ತ ಗಮನಹರಿಸಿ.

   ರೈತ ಚಳವಳಿಗೆ ಜಯವಾಗಲಿ...

   English summary
   The Karnataka State Farmers' Union and Hasiru sene opposed the amendment of the Land Reform Act. The union has decided to put a board infront of villages as a movement
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more