ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಬುರಗಿ; ರೈತರು ಮಣ್ಣು, ನೀರು ಪರೀಕ್ಷೆ ಮಾಡಿಸಲು ಮನವಿ

|
Google Oneindia Kannada News

ಕಲಬುರಗಿ, ಏಪ್ರಿಲ್ 15; ರೈತರ ಅನುಕೂಲಕ್ಕಾಗಿ ಮಣ್ಣು ಮತ್ತು ನೀರು ಪರೀಕ್ಷೆ ಪ್ರಯೋಗಾಲಯವಿದೆ. ರೈತರು ಇದರ ಪ್ರಯೋಜನ ಪಡೆಯಬೇಕೆಂದು ಕಲಬುರಗಿ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಕರೆ ನೀಡಿದ್ದಾರೆ.

ಕಲಬುರಗಿ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ (ಮಣ್ಣು ವಿಜ್ಞಾನ) ವಿಜ್ಞಾನಿ ಡಾ. ಶ್ರೀನಿವಾಸ ಬಿ. ವಿ. ಹಾಗೂ ಕಲಬುರಗಿ ಐಸಿಎಆರ್-ಕೃಷಿ ವಿಜ್ಞಾನಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ರಾಜು ಜಿ. ತೆಗ್ಗಳ್ಳಿ ಈ ಕುರಿತು ಮನವಿ ಮಾಡಿದ್ದಾರೆ.

ದಕ್ಷಿಣ ಕನ್ನಡ: ಮಣ್ಣಿನ ದಂಧೆಗೆ ನಲುಗಿದ ಗ್ರಾಮಸ್ಥರು; ಆಂಧ್ರಪ್ರದೇಶಕ್ಕೆ ಅಕ್ರಮ ಮಣ್ಣು ಸಾಗಾಟದಕ್ಷಿಣ ಕನ್ನಡ: ಮಣ್ಣಿನ ದಂಧೆಗೆ ನಲುಗಿದ ಗ್ರಾಮಸ್ಥರು; ಆಂಧ್ರಪ್ರದೇಶಕ್ಕೆ ಅಕ್ರಮ ಮಣ್ಣು ಸಾಗಾಟ

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಕಲಬುರಗಿ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರ ಅನುಕೂಲಕ್ಕಾಗಿ ಮಣ್ಣು ಮತ್ತು ನೀರು ಪರೀಕ್ಷೆಗಾಗಿ ಪ್ರಯೋಗಾಲಯ ಸ್ಥಾಪನೆ ಮಾಡಲಾಗಿದೆ.

ಮಂಗಳ ಗ್ರಹದ ಮೇಲೂ ಕಲ್ಲು, ಮಣ್ಣು ಹುಡುಕುತ್ತಿರುವ ಅಮೆರಿಕ!ಮಂಗಳ ಗ್ರಹದ ಮೇಲೂ ಕಲ್ಲು, ಮಣ್ಣು ಹುಡುಕುತ್ತಿರುವ ಅಮೆರಿಕ!

Farmers Requested To Take Soil And Water Testing

ಮಣ್ಣಿನ ಫಲವತ್ತತೆ ಮತ್ತು ಗುಣಧರ್ಮಗಳನ್ನು ತಿಳಿಯಲು ಮಣ್ಣಿನ ಪರೀಕ್ಷೆಗೆ ಏಪ್ರಿಲ್ ಹಾಗೂ ಮೇ ತಿಂಗಳು ಸಕಾಲವಾಗಿದೆ. ಜಿಲ್ಲೆಯ ಮಣ್ಣಿನಲ್ಲಿ ಹಲವು ಪೋಷಕಾಂಶಗಳ ಕೊರತೆ ಕಂಡು ಬಂದಿದ್ದು, ಇದರಿಂದ ಬೆಳೆಗಳ ಇಳುವರಿಯ ಕುಂಠಿತವಾಗುತ್ತಿದೆ.

ಸ್ಮಾರಕಗಳ ಬಳಿ ಅಕ್ರಮ ಮಣ್ಣು ಸಾಗಣೆ; ಹಂಪಿ ಸ್ಮಾರಕಗಳಿಗೆ ಹಾನಿ ಸ್ಮಾರಕಗಳ ಬಳಿ ಅಕ್ರಮ ಮಣ್ಣು ಸಾಗಣೆ; ಹಂಪಿ ಸ್ಮಾರಕಗಳಿಗೆ ಹಾನಿ

ಹೀಗಾಗಿ ವೈಜ್ಞಾನಿಕವಾಗಿ ಪೋಷಕಾಂಶಗಳ ಸಮಗ್ರ ನಿರ್ವಹಣೆ ಹಾಗೂ ಸೂಕ್ತ ನೀರಾವರಿ ಪದ್ದತಿಗಳ ಅಳವಡಿಕೆಗಾಗಿ ಮಣ್ಣು ಮತ್ತು ನೀರು ಪರೀಕ್ಷೆ ಮಾಡಿಸುವುದು ಅತ್ಯಗತ್ಯವಾಗಿದೆ. ಕಳೆದ ವರ್ಷ ಜಿಲ್ಲೆಯ ವಿವಿಧ ಭಾಗಗಳಿಂದ ಅಂದಾಜು 800 ಮಣ್ಣು ಮತ್ತು ಎರಡು ನೂರಕ್ಕಿಂತಲೂ ಹೆಚ್ಚಿಗೆ ನೀರಿನ ಮಾದರಿಗಳ ಪರೀಕ್ಷೆ ಮಾಡಲಾಗಿದೆ.

ಫಲಿತಾಂಶದ ಆಧಾರದ ಮೇಲೆ ಹೆಚ್ಚಿನ ಇಳುವರಿಗಾಗಿ ಕೈಗೊಳ್ಳಬೇಕಾದ ಸೂಕ್ತವಾದ ವೈಜ್ಞಾನಿಕ ಕ್ರಮಗಳನ್ನು ಮಣ್ಣು ಆರೋಗ್ಯ ಚೀಟಿ ನೀಡುವ ಮೂಲಕ ಫಲಿತಾಂಶ ನೀಡಲಾಗಿದೆ. ರೈತ ಬಾಂಧವರು ತಮ್ಮ ಕ್ಷೇತ್ರಗಳಲ್ಲಿ ವೈಜ್ಞಾನಿಕವಾಗಿ ಮಣ್ಣು ಮತ್ತು ನೀರಿನ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ತರಬಹುದಾಗಿದೆ.

ಮಣ್ಣು ಮತ್ತು ನೀರಿನ ಪರೀಕ್ಷೆಗಳನ್ನು ಮಾಡಿಸುವ ಮೂಲಕ ಪೋಷಕಾಂಶಗಳ ಕೊರತೆಯನ್ನು ನೀಗಿಸಿ ಕೃಷಿಯಲ್ಲಿ ಪ್ರಗತಿ ಸಾಧಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ.

ಮಣ್ಣು ಪರೀಕ್ಷೆ; ಭಾರತದಲ್ಲಿ ಮಣ್ಣಿನ ಪರೀಕ್ಷೆ ಸಂಸ್ಕೃತಿಯನ್ನು ವ್ಯಾಪಕವಾಗಿ ಬೆಳೆಸಬೇಕಾದ ಅಗತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಮಣ್ಣಿನ ಆರೋಗ್ಯ ಕಾರ್ಡ್‌ಗಳ ಮೇಲೆ ಸರ್ಕಾರದ ಗಮನವನ್ನು ವಿಶೇಷವಾಗಿ ಪ್ರಸ್ತಾಪಿಸಿದ ಅವರು, ನಿಯಮಿತ ಮಧ್ಯಂತರ ಅವಧಿಯಲ್ಲಿ ಮಣ್ಣಿನ ಪರೀಕ್ಷಾ ಅಭ್ಯಾಸಕ್ಕೆ ಅನುವುಮಾಡಿಕೊಡಲು ಸ್ಟಾರ್ಟಪ್‌ಗಳು ಮುಂದೆ ಬರಬೇಕು ಎಂದು ಕರೆ ನೀಡಿದ್ದಾರೆ.

ನೀರಾವರಿ ಕ್ಷೇತ್ರದಲ್ಲಿನ ಆವಿಷ್ಕಾರಗಳ ಬಗ್ಗೆ ಪ್ರಸ್ತಾಪಿಸಿದ ಅವರು ಪ್ರತಿ ಹನಿಗೆ, ಹೆಚ್ಚು ಬೆಳೆ ವಿಚಾರವಾಗಿ ಮಾತನಾಡಿದರು. ಕೃತಕ ಬುದ್ಧಿಮತ್ತೆಯು 21ನೇ ಶತಮಾನದಲ್ಲಿ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಪ್ರವೃತ್ತಿಯನ್ನು ಸಂಪೂರ್ಣವಾಗಿ ಬದಲಾಯಿಸಲಿದೆ ಎಂದರು.

ಕೃಷಿಯಲ್ಲಿ ಡ್ರೋನ್‌ಗಳ ಬಳಕೆಯನ್ನು ಹೆಚ್ಚಿಸುವುದು ಈ ಬದಲಾವಣೆಯ ಭಾಗವಾಗಿದೆ. ನಾವು ಕೃಷಿ-ಸ್ಟಾರ್ಟಪ್‌ಗಳನ್ನು ಉತ್ತೇಜಿಸಿದಾಗ ಮಾತ್ರ ಡ್ರೋನ್ ತಂತ್ರಜ್ಞಾನವು ದೊಡ್ಡ ಪ್ರಮಾಣದಲ್ಲಿ ಲಭ್ಯವಿರುತ್ತದೆ. ಕಳೆದ 3-4 ವರ್ಷಗಳಲ್ಲಿ ದೇಶದಲ್ಲಿ 700ಕ್ಕೂ ಹೆಚ್ಚು ಕೃಷಿ ನವೋದ್ಯಮಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಕೊಯ್ಲು ನಂತರದ ನಿರ್ವಹಣೆಯ ಕ್ಷೇತ್ರದಲ್ಲಿನ ಕೆಲಸಕ್ಕೆ ಸಂಬಂಧಿಸಿದಂತೆ, ಸಂಸ್ಕರಿಸಿದ ಆಹಾರದ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಅಂತರರಾಷ್ಟ್ರೀಯ ಗುಣಮಟ್ಟ ಮಾನದಂಡಗಳನ್ನು ಖಾತರಿಪಡಿಸಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ಹೇಳಿದರು.

ಈ ನಿಟ್ಟಿನಲ್ಲಿ ಕಿಸಾನ್ ಸಂಪದ ಯೋಜನೆ ಜೊತೆಗೆ ಪಿಎಲ್ಐ ಯೋಜನೆಯೂ ಮುಖ್ಯವಾಗಿದೆ. ಇದರಲ್ಲಿ ಮೌಲ್ಯ ಸರಪಳಿಯೂ ದೊಡ್ಡ ಪಾತ್ರ ವಹಿಸುತ್ತದೆ. ಆದ್ದರಿಂದ, ಒಂದು ಲಕ್ಷ ಕೋಟಿ ರೂ.ಗಳ ವಿಶೇಷ ಕೃಷಿ ಮೂಲಸೌಕರ್ಯ ನಿಧಿಯನ್ನು ರಚಿಸಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

English summary
Krishi Vigyan Kendra (KVK) Kalaburagi and Indian Council of Agricultural Research (ICAR) requested farmers to take up soil and water testing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X