ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಾದ್ಯಂತ ರೈತರ ಹೋರಾಟದ ಕಿಚ್ಚು; ತಿಪ್ಪೆ ಸಾರಿಸಬೇಡಿ ಕಾಯಿದೆಗಳನ್ನು ಹಿಂಪಡೆಯಿರಿ...

|
Google Oneindia Kannada News

ಕೃಷಿ ಕ್ಷೇತ್ರದಲ್ಲಿ ಹೊಸದಾಗಿ ತಂದ ಕಾಯಿದೆಗಳು ಮತ್ತು ವಿದ್ಯುತ್ ಕಾಯಿದೆ 2020 ಅನ್ನು ರದ್ದು ಮಾಡಬೇಕೆಂದು ದೇಶದ ಕೋಟ್ಯಂತರ ರೈತರು "ದಿಲ್ಲಿ ಚಲೋ" ಚಳವಳಿ ಹಮ್ಮಿಕೊಂಡಿರುವುದು ದೇಶದ ಬಹುದೊಡ್ಡ ಸುದ್ದಿ.

ಹರಿಯಾಣ, ಉತ್ತರ ಪ್ರದೇಶ, ಪಂಜಾಬ್, ಜಾರ್ಖಂಡ್ ಮತ್ತು ದಕ್ಷಿಣ ಭಾರತದ ರಾಜ್ಯಗಳಿಂದ ರೈತರು ದಿಲ್ಲಿ ಚಲೋ ಶಾಂತಿಯುತ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಮಾರ್ಗ ಮಧ್ಯೆ ಉತ್ತರ ಪ್ರದೇಶದಲ್ಲಿ ರಸ್ತೆ ಕಡಿದು, ದಾರಿಗೆ ಅಡ್ಡಲಾಗಿ ತಂತಿ ಬೇಲಿಗಳನ್ನು ಹಾಕಿ, ಬ್ಯಾರಿಕೇಡ್ ಗಳನ್ನು ಅಡ್ಡ ನಿಲ್ಲಿಸಿ, ಜಲ ಫಿರಂಗಿಯನ್ನು ರೈತರ ಮೇಲೆ ಪ್ರಯೋಗಿಸಿ, ಶೆಲ್ ಗಳನ್ನು ಸಿಡಿಸಿ ರೈತರನ್ನು ದಿಲ್ಲಿ ತಲುಪಲಾಗದಂತೆ ತಡೆಯಲು ಉತ್ತರ ಪ್ರದೇಶ ಹಾಗೂ ಹರಿಯಾಣ ಸರ್ಕಾರಗಳು ವ್ಯರ್ಥ ಪ್ರಯತ್ನ ನಡೆಸಿದವು. ಎದುರಾದ ಎಲ್ಲಾ ತೊಡಕುಗಳ ನಡುವೆ ರೈತರು ದಿಲ್ಲಿ ಹೊರವಲಯ ತಲುಪಿದ್ದಾರೆ. ಮುಂದೆ ಓದಿ...

 ಕೃಷಿ ಸಚಿವರನ್ನು ಭೇಟಿ ಮಾಡಿದ ರೈತ ಮುಖಂಡರು

ಕೃಷಿ ಸಚಿವರನ್ನು ಭೇಟಿ ಮಾಡಿದ ರೈತ ಮುಖಂಡರು

ಕೇಂದ್ರ ಸರ್ಕಾರ ರೈತರನ್ನು ದಿಲ್ಲಿಯೊಳಗೆ ಬಿಟ್ಟುಕೊಳ್ಳುತ್ತಿಲ್ಲ. ಬದಲಿಗೆ ಮಾತುಕತೆ, ಸಂಧಾನಕ್ಕೆ ಕರೆದಿದೆ. ಡಿಸೆಂಬರ್ ಮೂರರಂದು ಸುಮಾರು 35 ರೈತ ಸಂಘಟನೆಗಳ ಮುಖಂಡರು ಕೇಂದ್ರ ಕೃಷಿ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಸುಮಾರು ಏಳು ಗಂಟೆಗಳ ಕಾಲ ನಡೆದ ಸುದೀರ್ಘ ಚರ್ಚೆಯಲ್ಲಿ ರೈತರು ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಡಿಸೆಂಬರ್ 5ಕ್ಕೆ ರೈತರು ಹಾಗೂ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಮಾತುಕತೆಡಿಸೆಂಬರ್ 5ಕ್ಕೆ ರೈತರು ಹಾಗೂ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಮಾತುಕತೆ

"ಡಿ.5ಕ್ಕೆ ಈ ಹೋರಾಟ ಅಂತ್ಯವಾಗಲಿದೆ"

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತರು ಹೇಳಿರುವ ಏಳು ಪ್ರಮುಖ ಅಂಶಗಳನ್ನು ದಾಖಲಿಸಿಕೊಂಡಿರುವುದಾಗಿ ಪತ್ರಿಕೆಗಳಿಗೆ ತಿಳಿಸಿದ್ದಾರೆ. ಇವುಗಳ ಬಗ್ಗೆ ಶನಿವಾರ, ಡಿಸೆಂಬರ್ 5 ರಂದು ನಡೆಯುವ ಮತ್ತೊಂದು ಸುತ್ತಿನ ಮಾತುಕತೆಯಲ್ಲಿ ಚರ್ಚಿಸುವುದಾಗಿ ತಿಳಿಸಿದ್ದಾರೆ. "ಚರ್ಚೆಗೆ ಅಗತ್ಯವಿರುವ ಅಂಶಗಳನ್ನು ತಯಾರಿ ಮಾಡಿಕೊಂಡಿದ್ದೇವೆ, ಅವುಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಅಂದೇ (ಡಿಸೆಂಬರ್ 5) ಈ ಹೋರಾಟ ಅಂತ್ಯವಾಗಲಿದೆ" ಎಂದು ಕೈಗಾರಿಕಾ ಸಚಿವ ಸೋಮ್ ಪ್ರಕಾಶ್ ತಿಳಿಸಿದ್ದಾರೆ.

 ರೈತರ ಬಹು ಮುಖ್ಯ ಬೇಡಿಕೆ/ಆತಂಕಗಳೇನು?

ರೈತರ ಬಹು ಮುಖ್ಯ ಬೇಡಿಕೆ/ಆತಂಕಗಳೇನು?

ಎ.ಪಿ.ಎಂ.ಸಿ ಗಳನ್ನು ಇಲ್ಲವಾಗಿಸುವ ಹುನ್ನಾರ
ಎ.ಪಿ.ಎಂ.ಸಿ ಗಳ ಹೊರಗೆ ಸುಂಕರಹಿತವಾದ ವಹಿವಾಟು ನಡೆಸುವುದು
ವ್ಯಾಪಾರ ನೋಂದಣಿ
ಗುತ್ತಿಗೆ ಕೃಷಿಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಮೊರೆ ಹೋಗುವ ಬಗ್ಗೆ
ಕನಿಷ್ಠ ಬೆಂಬಲ ಬೆಲೆ
ಪೈರಿನ ಕೂಳೆ ಸುಡುವ ಸುಗ್ರೀವಾಜ್ಞೆ
ಪ್ರಸ್ತಾವಿತ ವಿದ್ಯುತ್‍ಚ್ಛಕ್ತಿ ಕಾಯಿದೆ

"ಸರ್ಕಾರಕ್ಕೆ ಯಾವುದೇ ಅಹಂ ಇಲ್ಲ"

ಸರ್ಕಾರಕ್ಕೆ ಯಾವುದೇ ಅಹಂ ಇಲ್ಲ. ಹೊಸ ಕಾಯಿದೆಯಿಂದಾಗಿ ಎ.ಪಿ.ಎಂ.ಸಿಗಳು ಇಲ್ಲವಾಗುತ್ತವೆ ಎಂದು ರೈತರು ಭಾವಿಸಿದ್ದಾರೆ. ಆದರೆ ಸರ್ಕಾರ ಇವುಗಳನ್ನು ಹೇಗೆ ಬಲಪಡಿಸಬಹುದೆಂಬ ಚಿಂತನೆಯಲ್ಲಿದೆ ಎಂದು ಕೃಷಿ ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಎ.ಪಿ.ಎಂ.ಸಿಗಳ ಹೊರಗೆ ಖಾಸಗಿಯವರು ಕೃಷಿ ಉತ್ಪನ್ನಗಳನ್ನು ಕೊಳ್ಳಬಹುದಾದ ಅವಕಾಶ ಕಲ್ಪಿಸಲಾಗಿದೆ. ಸುಂಕದ ವಿಚಾರ ಬಂದಾಗ ಎರಡು ಕಡೆ ಒಂದೇ ಬಗೆಯ ಟ್ಯಾಕ್ಸ್ ವಿಧಿಸುವುದಾಗಿಯೂ ತಿಳಿಸಿದ್ದಾರೆ. ಇನ್ನು ವ್ಯಾಪಾರಸ್ಥರು ನೋಂದಣಿ ಮಾಡಿಕೊಳ್ಳುವುದನ್ನೂ ಕಡ್ಡಾಯ ಮಾಡುವುದಾಗಿ ಹೇಳಿದ್ದಾರೆ.

"ತಿದ್ದುಪಡಿ ಬೇಡ, ತೆಗೆದು ಹಾಕಿ"

ಎಂ.ಎಸ್.ಪಿ ಉಳಿಸಿಕೊಳ್ಳುವುದಾಗಿ ಹೇಳಿರುವ ಸಚಿವರು ಇದಕ್ಕೆ ಕಾನೂನಾತ್ಮಕ ರಕ್ಷಣೆ ಒದಗಿಸುವ ಬಗ್ಗೆ ಯಾವುದೇ ವಿಶ್ವಾಸ ನೀಡಿಲ್ಲ. ಆದರೆ ರೈತ ಹೋರಾಟಗಾರರು ಈಗಾಗಿರುವ ಕಾಯಿದೆಗಳಿಗೆ ಯಾವುದೇ ತಿದ್ದುಪಡಿ ಬೇಡ, ಬದಲಿಗೆ ಸಂಪೂರ್ಣ ತೆಗೆದು ಹಾಕಬೇಕೆಂದು ಹೇಳಿದ್ದಾರೆ.

ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರೈತ ಸಂಘಟನೆಗಳ ಒಕ್ಕೂಟದ ಮುಖಂಡ ರಾಖೇಶ್ ಟಿಕಾಯತ್ "ನಮ್ಮ ಒತ್ತಾಯ ಇರುವುದು ಇಡೀ ಕಾಯಿದೆಗಳನ್ನು ರದ್ದುಪಡಿಸಬೇಕೆಂದು. ಇಲ್ಲಿ ಅನೇಕ ವಿಷಯಗಳನ್ನು ಚರ್ಚಿಸಿದ್ದೇವೆ. ಆದರೆ ಸರ್ಕಾರ ಎಂ.ಎಸ್.ಪಿ ಹಾಗೂ ಈಗಿರುವ ಕಾಯಿದೆಗಳಿಗೆ ತಿದ್ದುಪಡಿ ತರುವ ಮಾತುಗಳನ್ನಾಡುತ್ತಿದೆ" ಎಂದಿದ್ದಾರೆ.

ಈ ಸಭೆಗೆ ತೆರಳಿದ್ದ ರೈತ ಮುಖಂಡರು ಸರ್ಕಾರ ನೀಡಬಯಸಿದ್ದ ಮಧ್ಯಾಹ್ನದ ಊಟವನ್ನು ತಿರಸ್ಕರಿಸಿದ್ದಾರೆ. ದಿಲ್ಲಿಯ ಹೊರವಲಯದಲ್ಲಿ ಕಳೆದ ವಾರದಿಂದ ಲಕ್ಷಾಂತರ ರೈತರಿಗಾಗಿ ಮಾಡಿದ್ದ ಅಡುಗೆಯನ್ನೇ ತರಿಸಿ ಊಟ ಮಾಡಿದ್ದಾರೆ ಸ್ವಾಭಿಮಾನಿ ರೈತರು.

English summary
Farmer protest in delhi continues and farmers have demanded no amendment to the existing laws, but rather to remove
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X