ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಷ್ಯನ್ ಪೇಂಟ್ಸ್ ಸಂಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದ ಅನ್ನದಾತರು

|
Google Oneindia Kannada News

ಮೈಸೂರು, ಮೇ 15: ಏಷ್ಯನ್ ಪೇಂಟ್ಸ್ ನಲ್ಲಿ ಖಾಯಂ ಉದ್ಯೋಗ ನೀಡಬೇಕೆಂದು ಮೇ.14ರ ರಾತ್ರಿಯಿಂದಲೂ ರೈತರು ಮೈಸೂರಿನ ಇಮ್ಮಾವಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆ ಪ್ರತಿಭಟನಾ ನಿರತರ ಮೇಲೆ ಲಾರಿಯನ್ನು ಹತ್ತಿಸಲು ಅಧಿಕಾರಿಗಳು ಮುಂದಾದರೂ ಎಂಬ ಆರೋಪ ಸಹ ಕೇಳಿ ಬಂದಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ನಂಜನಗೂಡು ಸಮೀಪದ ಇಮ್ಮಾವು ಗ್ರಾಮದ ರೈತರಿಗೆ ಕಾಯಂ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಏಷ್ಯನ್ ಪೇಂಟ್ಸ್ ಅತಿ ಕಡಿಮೆ ದರದಲ್ಲಿ ರೈತರಿಂದ ಭೂಮಿ ಪಡೆದುಕೊಂಡಿತ್ತು. ಆದರೆ, ಈಗ ರೈತರಿಗೆ ಉದ್ಯೋಗವನ್ನು ನೀಡದೆ ವಂಚಿಸುತ್ತಿದೆ. ರೈತರು ಶಿಕ್ಷಣ ಪಡೆದಿಲ್ಲ ಎಂದು ಕೆಳ ದರ್ಜೆಯ ಕೆಲಸಗಳನ್ನು ನೀಡುತ್ತಿದೆ. ರೈತರಿಗೆ ಕಾಯಂ ಉದ್ಯೋಗ ನೀಡಲಿಲ್ಲ. ಹಾಗಾಗಿ ತಕ್ಷಣವೇ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ನಂಜನಗೂಡಲ್ಲಿ ಏಷ್ಯನ್ ಪೇಂಟ್ಸ್ ಘಟಕಕ್ಕೆ ವಿರೋಧನಂಜನಗೂಡಲ್ಲಿ ಏಷ್ಯನ್ ಪೇಂಟ್ಸ್ ಘಟಕಕ್ಕೆ ವಿರೋಧ

Farmers protest against Asian paints in Immavu, Mysuru district

ನಮ್ಮ ಬೇಡಿಕೆಗಳಿಗೆ ಕಿವಿಗೊಡದ ಏಷ್ಯನ್ ಪೇಂಟ್ಸ್ ಸಿಬ್ಬಂದಿ, ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ರೈತ ಸಂಘ ಗಂಭೀರ ಆರೋಪ ಮಾಡಿದೆ. ಹಾಗಾಗಿ ಇಂದಿನಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸಲು ಕಂಪೆನಿ ಎದುರೇ ಮುಂದಾಗಿದ್ದೇವೆ ಎಂದು ಮುಖಂಡರು ತಿಳಿಸಿದ್ದಾರೆ.

English summary
Farmers protest against Asian paints in Immavu , Nanjangudu talluk at Mysuru district.At the same time farmers made allegation, company officials forcing them to stop the protest in different ways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X