ದೇಶಕ್ಕೆ ಅನ್ನ ನೀಡುವುದು ಅದಾನಿ, ಅಂಬಾನಿ ಅಲ್ಲ, ರೈತ: ಬಿ. ಸಿ. ಪಾಟೀಲ್
ನೀವು ಬಿತ್ತನೆ ಮಾಡುವುದನ್ನು ನಿಲ್ಲಿಸಿ ಪ್ರತಿಭನಟನೆ, ಧರಣಿ ಮಾಡಿದರೆ ನಮಗೆ ತುತ್ತು ಅನ್ನ ಸಿಗುವುದಿಲ್ಲ ಎಂದು ಬಿ.ಸಿ. ಪಾಟೀಲ್ ದಾವಣಗೆರೆಯಲ್ಲಿ ರೈತರ ಬಳಿ ಮನವಿ ಮಾಡಿಕೊಂಡರು.
ದಾವಣಗೆರೆ, ಫೆಬ್ರವರಿ, 09: ದೇಶಕ್ಕೆ ಅನ್ನ ಕೊಡುವುದು ಬೆವರು ಸುರಿಸಿ ದುಡಿಯುವ ರೈತ ಹೊರತು, ಅದಾನಿ, ಅಂಬಾನಿ ಅಲ್ಲ. ರೈತ ಸಮೂಹ ಸ್ವಾವಲಂಬಿ, ಸ್ವಾಭಿಮಾನದಿಂದ ಜೀವನ ಸಾಗಿಸುವಂತಾಗಬೇಕು ಎಂಬ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ರೈತರ ಸಾಲ ಮನ್ನಾ ಮಾಡಿದಾಕ್ಷಣ ಬದುಕು ಹಸನಾಗದು. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಕ್ಕು ಲಾಭ ದೊರೆತಾಗ ಮಾತ್ರ ರೈತಾಪಿ ವರ್ಗದವರ ಬದುಕು ಬಂಗಾರವಾಗುತ್ತದೆ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ದಾವಣಗೆರೆಯಲ್ಲಿ ಹೇಳಿದರು.
ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಏರ್ಪಡಿಸಿದ್ದ ಎರಡು ದಿನಗಳ ವಾಲ್ಮೀಕಿ ಜಾತ್ರೆಯ ಮೊದಲ ದಿನದ ರೈತ ಗೋಷ್ಠಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೃಷಿ ಅಧಿಕಾರಿಗಳ ಮೊಬೈಲ್‌ನಲ್ಲಿ ಜೈ ಕಿಸಾನ್ ಎಂದು ಕೇಳಿಸಬೇಕೆಂಬ ನಿಟ್ಟಿನಲ್ಲಿ ರಿಂಗ್ ಟೋನ್ ಹಾಕಿಸಿಕೊಳ್ಳುವಂತೆ ಕೃಷಿ ಸಚಿವ ಆದ ತಕ್ಷಣ ಸೂಚಿಸಿದ್ದೆ. ದೇಶಕ್ಕೆ ಅನ್ನ ಕೊಡುವ ರೈತನಿಗೆ ನೂರೊಂದು ನಮನ ಸಲ್ಲಿಸಲೇಬೇಕು. ರೈತರಿಗೆ ವಿಶೇಷವಾದ ಗೌರವ ಸಲ್ಲಿಸುವಂತೆ ಕೃಷಿ ಅಧಿಕಾರಿಗಳಗೆ ಸೂಚನೆ ನೀಡಲಾಯಿತು. ಕೃಷಿಗೆ ತುಂಬಾನೇ ಮಹತ್ವ ಇದೆ. ರೈತರು ಧರಣಿ, ಸತ್ಯಾಗ್ರಹ ಮಾಡಿ ನಾವು ಈ ವರ್ಷ ಬೆಳೆ ಬೆಳೆಯಲ್ಲ ಎಂದರೆ ನಾವು ತಿನ್ನಲೂ ಏನೂ ಇರದು ಎಂದು ಹೇಳಿದರು.
ಕೇವಲ ರೈತ ಮಕ್ಕಳಿಗೆ ವಿದ್ಯಾನಿಧಿ ನೀಡಿದರೆ, ಹೊಲದಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರ ಮಕ್ಕಳ ಗತಿ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರೈತ ವಿದ್ಯಾನಿಧಿಯನ್ನು ಕಾರ್ಮಿಕರ ಮಕ್ಕಳಿಗೂ ನೀಡಲು ಉದ್ದೇಶಿಸಲಾಗಿದೆ. 14 ಸಾವಿರ ಮಕ್ಕಳು ಇದರ ಪ್ರಯೋಜನವನ್ನು ಪಡೆಯಲಿದ್ದಾರೆ. ರೈತಪರ ಕಾಳಜಿ ಹೊಂದಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು, ರೈತರ ಮಕ್ಕಳ ಹಿತಕ್ಕಾಗಿ ಈ ಯೋಜನೆಯನ್ನು ಜಾರಿ ಮಾಡಿದ್ದಾರೆ ಎಂದರು.

ಸಮುದ್ರಕ್ಕೆ ಹೋಗುವ ಬೋಟ್‌ಗಳಿಗೆ ಸಬ್ಸಿಡಿ
ಮೀನು ಹಿಡಿಯಲು ಸಮುದ್ರಕ್ಕೆ ಹೋಗುವ ಬೋಟ್‌ಗಳಿಗೆ ಸರ್ಕಾರ ಡೀಸೆಲ್ ಸಬ್ಸಿಡಿ ನೀಡುತ್ತಿದೆ. ರೈತರಿಗೆ ಡೀಸೆಲ್ ಸಬ್ಸಿಡಿ ನೀಡಬೇಕು ಎಂಬ ಯೋಚನೆ ಮೊದಲಿನಿಂದಲೂ ಇದೆ. ಕಳೆದ ಫೆಬ್ರವರಿ 6ಕ್ಕೆ ಕೃಷಿ ಮಂತ್ರಿಯಾಗಿ ನಾನು ಮೂರು ವರ್ಷವಾಯ್ತು. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಕೊರೊನಾ ಸಂಕಷ್ಟ ಮುಗಿಯಲಿ. ಆಮೇಲೆ ಕೊಡೋಣ ಎಂದಿದ್ದರು. ಒಂದು ಹೆಕ್ಟೇರ್‌ಗೆ 20 ಲೀಟರ್ ಡೀಸೆಲ್ ಬೇಕಾಗುತ್ತದೆ. 20 ಲೀಟರ್ ಸಬ್ಸಿಡಿ ನೀಡಬೇಕು ಎಂಬ ಆಸೆ ಇತ್ತು. ಒಂದರಿಂದ ಐದು ಹೆಕ್ಟೇರ್‌ವರೆಗೆ 1,250 ರೂಪಾಯಿ ರೈತರ ಅಕೌಂಟ್‌ಗೆ ನೇರವಾಗಿ ನೀಡಬೇಕು ಎಂಬ ನಿರ್ಧಾರ ಮಾಡಲಾಗಿದೆ. ಇದು ದೇಶದಲ್ಲಿಯೇ ಪ್ರಥಮವಾಗಿದೆ ಎಂದು ಹೇಳಿದರು.

ರೈತರಿಗೆ ಭರವಸೆ ನೀಡಿದ ಬಿ.ಸಿ. ಪಾಟೀಲ್
ರೈತರಿಗೆ ಬೆಂಬಲ ಬೆಲೆ ನೀಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. 14 ಬೆಳೆಗಳಿಗೆ ಬೆಂಬಲ ಬೆಲೆಯನ್ನು ನೀಡುತ್ತಿದ್ದೇವೆ. ದಾವಣಗೆರೆಯಲ್ಲಿ ಭತ್ತದ ನಾಟಿ ಹಚ್ಚುವ ಸಮಯ ಬೇರೆ. ರಾಯಚೂರಿನಲ್ಲಿಯೇ ಬೇರೆ ಅವಧಿ ಇದೆ. ಹಾಗಾಗಿ, ಮೂರ್ನಾಲ್ಕು ತಿಂಗಳು ವ್ಯತ್ಯಾಸ ಆಗುತ್ತದೆ. ಕೃಷಿ ಇಲಾಖೆ, ಸರ್ಕಾರ ಕೇವಲ ರೈತನನ್ನು ಬೆಳೆಯಲು ಉಪಯೋಗಿಸುತ್ತಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರು, 1 ಲಕ್ಷ ಕೋಟಿ ರೂಪಾಯಿ ಕೃಷಿ ಅನುದಾನಕ್ಕೆ ಮೀಸಲಿಟ್ಟಿದ್ದಾರೆ. ಆಹಾರ ಸಂಸ್ಕರಣಾ ಘಟಕ, ಆತ್ಮನಿರ್ಭರ ಯೋಜನೆ, ಪ್ರಧಾನ ಮಂತ್ರಿ ಕಿರು ಯೋಜನೆ, 15 ಲಕ್ಷ ರೂಪಾಯಿವರೆಗೆ ಸಬ್ಸಿಡಿಯು ಸಿಗುತ್ತದೆ. ರೈತರು ತಾವು ಬೆಳೆದ ಬೆಳೆಗಳಿಗೆ ತಾವೇ ಸಂಸ್ಕಾರ ಮಾಡಿ ಕಾರ್ಖಾನೆಗಳಲ್ಲಿ ಪ್ಯಾಕಿಂಗ್ ಮಾಡಿ ಮಾರಾಟ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ ಎಂದು ತಿಳಿಸಿದರು.

ಸಾಲ ಮನ್ನಾ ಮಾಡಿದ್ರೆ ಉದ್ಧಾರ ಆಗಲ್ಲ
ರೈತರಿಗೆ ನೇರವಾಗಿ ಲಾಭ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ರೈತರ ಸಾಲ ಮನ್ನಾ ಮಾಡಿದರೆ ಉದ್ಧಾರ ಆಗಲ್ಲ. ಕೃಷಿ ಮಾಡಿ ಯಾವ ರೀತಿಯಲ್ಲಿ ಆದಾಯ ಜಾಸ್ತಿಯಾಗುತ್ತದೆ ಎಂಬ ಕುರಿತಂತೆ ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು. ಈ ನಿಟ್ಟಿನಲ್ಲಿ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. 500 ರೈತರಿಗೆ ನೈಸರ್ಗಿಕ ಕೃಷಿ ಕುರಿತಂತೆ ಮೈಸೂರಿನಲ್ಲಿ ತರಬೇತಿ ನೀಡಿದೆವು. ಈಗ ಅವರು ಉದ್ಯಮ ನಡೆಸುತ್ತಿದ್ದಾರೆ. ಹೊರ ದೇಶಗಳಿಗೆ ಉತ್ಪನ್ನಗಳನ್ನು ಕಳುಹಿಸುತ್ತಿದ್ದಾರೆ. ನೀರಾವರಿ, ಗೊಬ್ಬರ, ಕೃಷಿ ಪರಿಕರಗಳಿಗೆ ಸಬ್ಸಿಡಿ ನೀಡುತ್ತಿದ್ದೇವೆ ಎಂದು ಹೇಳಿದರು.

ಸಿರಿಧಾನ್ಯ ಮೇಳದಲ್ಲಿ ಭಾಗಿಯಾಗಿದ್ದ ರೈತರು
ವಿದ್ಯಾಲಯಗಳು ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿವೆ. ಅಜ್ಜಿ ಹಾಕಿದ ಆಲದ ಮರ ಎಂಬಂತೆ ಹಳೆ ಪದ್ಧತಿ ಬಿಡಬೇಕು. ಭೂಮಿ ತಾಯಿಯನ್ನು ಬಂಜರು ಮಾಡುತ್ತಿದ್ದೇವೆ. ರಾಸಾನಿಯಕ ಗೊಬ್ಬರ ಹಾಕುವುದು ಬೇಡ. ಸಗಣಿ ಗೊಬ್ಬರು ಸೇರಿದಂತೆ ಸಾವಯವ ಗೊಬ್ಬರ ಬಳಕೆ ಮಾಡಿ. ಹೆಚ್ಚಾಗಿ ಉತ್ಪಾದನೆ ಮಾಡಿ. ನೈಸರ್ಗಿಕ ಕೃಷಿಯತ್ತ ರೈತರು ಹೆಚ್ಚು ಆಸಕ್ತಿ ತೊಡಗಿಸಿಕೊಳ್ಳಬೇಕು. ಸಾವಯವ ಕೃಷಿಗೆ ಪ್ರತಿ ಹೆಕ್ಟೇರ್‌ಗೆ ಏಳು ಸಾವಿರ ರೂಪಾಯಿ ಬೆಂಬಲ ಬೆಲೆ ನೀಡುತ್ತಿದ್ದೇವೆ. 2023 ಸಿರಿಧಾನ್ಯಗಳ ವರ್ಷವಾಗಿದ್ದು, ಮೂರು ಲಕ್ಷ ರೈತರು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಸಿರಿಧಾನ್ಯ ಮೇಳದಲ್ಲಿ ಭಾಗವಹಿಸಿದ್ದರು. ವಿದೇಶದೊಂದಿಗೆ ವ್ಯವಹರಿಸಲು ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಈ ಕೆಲಸವನ್ನು ಸರ್ಕಾರಗಳು ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾವು ಶ್ರಮ ವಹಿಸುತ್ತಿದ್ದೇವೆ. ಈ ಕೆಲಸ ಮಾಡಿದಾಗ ರೈತರು ಮುಂದೆ ಬರಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಬೆಳಗ್ಗೆ 8 ಗಂಟೆಗೆ ಜಾತ್ರಾ ಮಹೋತ್ಸವದ ಅಂಗವಾಗಿ ಕಾರ್ಯಕ್ರಮಗಳು ಆರಂಭಗೊಂಡವು. ಶ್ರೀಮಹರ್ಷಿ ವಾಲ್ಮೀಕಿ ಧ್ವಜಾರೋಹಣ ನೆರವೇರಿತು. ಮಹಿಳಾ ಗೋಷ್ಠಿ ಉದ್ಯೋಗ ಮೇಳ, ರೈತ ಗೋಷ್ಠಿ, ಬುಡಕಟ್ಟು ಸಾಂಸ್ಕೃತಿಕ ವೈಭವದ ಕಾರ್ಯಕ್ರಮಗಳು ನಡೆದವು. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಶ್ರೀಗಳು ಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ರೈತ ಮುಖಂಡ ಹುಚ್ಚುವನಹಳ್ಳಿ ಮಂಜುನಾಥ್, ರಾಯಚೂರು ಸಂಸದ ರಾಜ ಅಂಬರೀಷ್ ನಾಯಕ್, ಬಳ್ಳಾರಿ ಸಂಸದ ದೇವೇಂದ್ರಪ್ಪ, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ಗದ್ದಲ್, ಮಸ್ಕಿ ಶಾಸಕ ಬಸನಗೌಡ ತುರವೇಹಾಳ್, ಹನುಮಂತಪ್ಪ, ರವೀಂದ್ರ ಗೌಡ ಪಾಟೀಲ್, ಸಾಂಬಾರ್ ಮಂಡಳಿ ನೂತನ ಅಧ್ಯಕ್ಷರು, ವೆಂಕಟಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications