ದೆಹಲಿಯ ಸಿಂಘು, ಟಿಕ್ರಿಯಲ್ಲಿ ರೈತರ ಜಮಾವಣೆ: ಉತ್ತರ ದೆಹಲಿಯತ್ತ ಹೋಗಲು ನಕಾರ

ನವದೆಹಲಿ, ನವೆಂಬರ್ 28: ದೆಹಲಿಯ ಸಿಂಘು, ಟಿಕ್ರಿ ಗಡಿ ಪ್ರದೇಶದಲ್ಲಿ ಸಾವಿರಾರು ರೈತರು ಜಮಾವಣೆಯಾಗಿದ್ದು, ಉತ್ತರ ದೆಹಲಿಯತ್ತ ತೆರಳಲು ನಿರಾಕರಿಸಿದ್ದಾರೆ.

ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ಮಂದಿ ರೈತರು ನೆರೆದಿದ್ದಾರೆ.

ಪೊಲೀಸರು ಉತ್ತರ ದೆಹಲಿಯ ಸ್ಥಳವೊಂದರಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಿದರೂ ಕೂಡ ಇಂದು ಬೆಳಗ್ಗೆ ಸೇರಿರುವ ಟಿಕ್ರಿ ಗಡಿಭಾಗದ ಮೈದಾನದಲ್ಲಿಯೇ ಮುಂದುವರಿಸಿದ್ದಾರೆ.ಅಲ್ಲಿಂದ ಪ್ರತಿಭಟನಾಕಾರರು ಮುಂದುವರಿಯುತ್ತಾರೆಯೇ, ಇಲ್ಲವೇ ಎಂಬುದು ಇನ್ನು ಕೆಲ ಹೊತ್ತುಗಳಲ್ಲಿ ನಿರ್ಧಾರವಾಗಲಿದೆ.

Farmers At Singhu, Tikri Border Points Refuse To Head To North Delhi Protest Site

ಇಂದು ಬೆಳಗ್ಗೆ ಸದ್ಯ ರೈತರು ಟಿಕ್ರಿ ಭಾಗದಲ್ಲಿ ಪ್ರತಿಭಟನೆ ನಡೆಸಲು ಸೇರಿದ್ದು ಅಲ್ಲಿನ ಬುರಾರಿ ಪ್ರದೇಶದ ನಿರಂಕಾರಿ ಸಮಾಗಮ ಮೈದಾನದಲ್ಲಿ ಪ್ರದರ್ಶನ ನಡೆಸಲು ರೈತರಿಗೆ ಅನುಮತಿ ನೀಡಲಾಗಿದೆ. ಅಲ್ಲಿ ತೀವ್ರ ಭದ್ರತೆ ಕಲ್ಪಿಸಲಾಗಿದೆ.

ಆದರೆ ಅಲ್ಲಿಗೆ ಹೋಗಲು ರೈತರು ನಿರಾಕರಿಸಿದ್ದಾರೆ. ನಾವು ಸಿಂಘು ಗಡಿಯಿಂದ ಕದಲುವುದಿಲ್ಲ, ನಮ್ಮ ಹೋರಾಟವನ್ನು ಇಲ್ಲಿಯೇ ಮುಂದುವರಿಸುತ್ತಿದ್ದು ಮನೆಗೂ ಹಿಂತಿರುಗಿ ಹೋಗುವುದಿಲ್ಲ. ಪಂಜಾಬ್ ಮತ್ತು ಹರ್ಯಾಣಗಳಿಂದ ಸಾವಿರಾರು ರೈತರು ಬಂದಿದ್ದಾರೆ ಎಂದರು.

ಪಂಜಾಬ್ ಭಾಗದ ರೈತರ ಪ್ರತಿಭಟನೆ ಮುಂದುವರಿದಿದ್ದು, ರೈತರು ದೇಶದ ರಾಜಧಾನಿ ದೆಹಲಿಗೆ ಸಮೀಪಿಸುತ್ತಿದ್ದಂತೆ ಪರಿಸ್ಥಿತಿ ಬಿಗಡಾಯಿಸಿದೆ. ವಾಹನ ಸವಾರರು ಸಂಚಾರ ದಟ್ಟಣೆ, ಬದಲಿ ಸಂಚಾರ ಮಾರ್ಗಗಳನ್ನು ಪೊಲೀಸರು ಕಲ್ಪಿಸಿದ್ದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಪಂಜಾಬ್ ನಗರಕ್ಕೆ ಹೋಗುವ ಮುಖ್ಯ ಗಡಿಯಾದ ಸಿಂಗು ಗಡಿಯಲ್ಲಿ ರೈತರೊಬ್ಬರು ಮಾತನಾಡಿ, ತಾವು ಮುಂದುವರಿಯದೆ ಇಲ್ಲಿಯೇ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+