ಅಪಘಾತ: ಅಪಾಯದಿಂದ ಬಡಗಲಪುರ ನಾಗೇಂದ್ರ ಪಾರು
ಮೈಸೂರು, ಮೇ 31: ಸರಳ ವಿವಾಹ ಸಮಾರಂಭ ಮುಗಿಸಿ ಬರುವಾಗ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಅಮೃತಭೂಮಿಯಲ್ಲಿ ಘಟನೆ ಸಂಭವಿಸಿದೆ. ಸರಳ ವಿವಾಹಕ್ಕೆ ಆಗಮಿಸಿದ್ದ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರರವರು ಕಾರ್ಯಕ್ರಮ ಮುಗಿಸಿ ರಾತ್ರಿ ಹಿಂತಿರುಗುತ್ತಿದ್ದರು. ನಿನ್ನೆ ರಾತ್ರಿ ಮಳೆ ಬಂದಿದ್ದ ಕಾರಣ ರಸ್ತೆಯಲ್ಲಿ ನಿಯಂತ್ರಣಕ್ಕೆ ಸಿಗದೆ ಕಾರು ಆಯತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದು ಪಲ್ಟಿಯಾಗಿದೆ.

ಘಟನೆಯಲ್ಲಿ ಬಡಗಲಪುರ ನಾಗೇಂದ್ರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ನಾಗೇಂದ್ರ ಅವರ ಜೊತೆ ಉಪಾಧ್ಯಕ್ಷ, ಕಾರು ಚಾಲಕ ಕೂಡ ಸುರಕ್ಷಿತವಾಗಿದ್ದಾರೆ.












Click it and Unblock the Notifications