PM Modi In Karnataka: ಬಿಜೆಪಿ ಸರ್ಕಾರ ಇಲ್ಲದಿದ್ದರೆ ರೈತರಿಗೆ PM ಕಿಸಾನ್ ಸಮ್ಮಾನ್‌ ಯೋಜನೆಯ ಹಣ ಸಿಗುತ್ತಿರಲಿಲ್ಲ: ಮೋದಿ

ದಾವಣಗೆರೆ, ಮಾರ್ಚ್‌, 25: ಬಿಜೆಪಿ ಸರ್ಕಾರ ಇಲ್ಲದಿದ್ದರೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಹಣ ರೈತರಿಗೆ ಸರಿಯಾಗಿ ಸಿಗುತ್ತಿರಲಿಲ್ಲ. ಕಾಂಗ್ರೆಸ್, ಜೆಡಿಎಸ್ ಸರ್ಕಾರಳಿದ್ದಾಗ ಕಳುಹಿಸಿದ್ದ ಪಟ್ಟಿಯಲ್ಲಿ ರೈತರ ಸಂಖ್ಯೆ ಕಡಿಮೆಯಿತ್ತು. ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಬಂದ ಬಳಿಕ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಮಾಡಿದ್ದ ತಪ್ಪನ್ನು ಸರಿಪಡಿಸಿದ್ದೇವೆ ಎಂದು ದಾವಣಗೆರೆಯಲ್ಲಿ ನರೇಂದ್ರ ಮೋದಿ ಹೇಳಿದರು.

ನಮ್ಮ ಸರ್ಕಾರ ಅಧಿಕಾಕ್ಕೆ ಬಂದಿದ್ದರಿಂದ 40 ಲಕ್ಷ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್‌ನ ಲಾಭ ಆಗುತ್ತಿದೆ. ದಾವಣಗೆರೆ ರೈತರಿಗೂ ಇದರ ಲಾಭ ಸಿಕ್ಕಿದೆ. ನೀವು ಕೊಟ್ಟಿರುವ ಪ್ರತಿಯೊಂದು ಮತದಿಂದಲೇ ದೇಶ ದೇಶಗಳಲ್ಲಿಯೂ ಮೋದಿ ನಗಾರಿ ಬಾರಿಸುತ್ತಿದೆ. ಕರ್ನಾಟಕದಲ್ಲಿಯೂ ಇದಾಗಬೇಕಾದರೆ ನೀವೆಲ್ಲರೂ ಆಶೀರ್ವದಿಸಬೇಕು. ವಿಶ್ವಮಟ್ಟದಲ್ಲಿ ಭಾರತ ಖ್ಯಾತಿಯಾಗಲು ಕಾರಣ ನಾನಲ್ಲ, ನೀವು ಎಂದು ಹೇಳುವ ಮೂಲಕ ಮತದಾರರ ಮನ ಗೆಲ್ಲುವ ಪ್ರಯತ್ನ ಮಾಡಿದರು.

Farmers are getting money under PM Kisan Samman Nidhi from BJP government: Narendra modi

ನಿಮ್ಮಿಂದ ನಮಗೆ ಆಶೀರ್ವಾದ ಹೆಚ್ಚುತ್ತಿದೆ

ಹಲವು ಬಾರಿ ನಾನು ದಾವಣಗೆರೆಗೆ ಬರುವ ಅವಕಾಶ ಸಿಕ್ಕಿದೆ. ಇಲ್ಲಿಗೆ ಬಂದಾಗಲೆಲ್ಲಾ ನಿಮ್ಮ ಅಶೀರ್ವಾದ ಹೆಚ್ಚಾಗುತ್ತಲೇ ಇದೆ. ಕರ್ನಾಟಕ ಬಿಜೆಪಿಗೆ ಧನ್ಯವಾದ ಹೇಳುತ್ತೇನೆ. ಕಾರ್ಯಕ್ರಮದಲ್ಲಿ ನಿಮ್ಮ ದರ್ಶನ ಮಾಡಿದ್ದು ನನ್ನ ಪುಣ್ಯ. ಹರಿಹರೇಶ್ವರ, ತಾಯಿ ಭುವನೇಶ್ವರಿ, ಪವಿತ್ರಾ ಮಠಗಳಿಗೆ ನಮಿಸುತ್ತೇನೆ. ತುಂಗಾಭದ್ರೆಯ ಪವಿತ್ರಾ ತಾಣದಲ್ಲಿ ಹರಿ-ಹರ ಸಮನ್ವಯವಾಗಿದೆ. ಬಿಜೆಪಿ ನಾಲ್ಕು ವಿಜಯ ಸಂಕಲ್ಪ ಯಾತ್ರೆಯ ಮಹಾಸಂಗಮ ಇಲ್ಲಿ ಆಗಿದೆ ಎಂದರು.

ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದ ಮೋದಿ

ದಾವಣಗೆರೆಯ ನನ್ನ ಸಹೋದರ, ಸಹೋದರಿಯರಿಗೆ ನಮಸ್ಕಾರಗಳು. ಕರ್ನಾಟಕದ ನನ್ನ ಭಾಜಪ ಕಾರ್ಯಕರ್ತ ಬಾಂಧವರಿಗೆ ನಮಸ್ಕಾರಗಳು ಎಂದು ಹೇಳುತ್ತಿದ್ದಂತೆ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಇದೇ ವೇಳೆ ಪಕ್ಷದ ಕಾರ್ಯಕರ್ತರಿಗೆ ಪ್ರತಿ ಬೂತ್‌ಗೆ ಹೋಗಿ. ಬೂತ್‌ನಲ್ಲಿ ಉತ್ಸಾಹ, ಹೊಸ ಶಕ್ತಿ ಹುಟ್ಟುಹಾಕಿ. ಬೂತ್ ಮಟ್ಟದಿಂದಲೇ ವಿಜಯ ಸಂಕಲ್ಪ ಆಗಬೇಕು ಎಂದು ಸೂಚನೆ ನೀಡಿದರು.

Farmers are getting money under PM Kisan Samman Nidhi from BJP government: Narendra modi

ಕಾಂಗ್ರೆಸ್‌ನವರು ಮೋದಿಯನ್ನು ಮುಗಿಸುವ ಮಾತನಾಡುತ್ತಾರೆ. ದೇಶದ ಹಾಗೂ ನಿಮ್ಮೆಲ್ಲರ ಆಶೀರ್ವಾದ ಇರುವವರೆಗೆ ಅದು ಸಾಧ್ಯವಾಗದು ಎಂದರು. ಹುಲಿ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಕ್ಕಾಗಿ ಏಪ್ರಿಲ್ ಮೊದಲ ವಾರದಲ್ಲಿ ಮತ್ತೆ ಕರ್ನಾಟಕಕ್ಕೆ ಆಗಮಿಸುತ್ತೇನೆ. ಹಾಗೆಯೇ ಕರ್ನಾಟಕದ ಜನರ ಸೇವೆಗೆ ಸದಾ ಸಿದ್ಧನಿದ್ದೇನೆ ಎಂದು ಹೇಳಿದರು.

ನಾನು ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರು ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದನ್ನು ಮೊಬೈಲ್ ಹಾಗೂ ಮಾಧ್ಯಮವೊಂದರಲ್ಲಿ ನೋಡಿದ್ದೆ. ಅದನ್ನು ನೆನೆಸಿಕೊಂಡರೆ ತುಂಬಾ ದುಃಖವಾಗುತ್ತದೆ. ಕಾರ್ಯಕರ್ತನ ಜೊತೆ ಈ ರೀತಿ ನಡೆದುಕೊಂಡರೆ ಸಾಮಾನ್ಯ ಜನರ ಜೊತೆ ಯಾವ ರೀತಿ ನಡೆದುಕೊಳ್ಳಬಹುದು? ಆದರೆ ಬಿಜೆಪಿಯಲ್ಲಿ ಎಲ್ಲಾ ಕಾರ್ಯಕರ್ತರಿಗೂ ಸಮಾನ ಗೌರವ ನೀಡಲಾಗುತ್ತದೆ. ಬಿಜೆಪಿಯಲ್ಲಿ ಯಾರು ಎಲ್ಲರೂ ಸಮಾನರು ಎಂದು ಭಾವಿಸಲಾಗುತ್ತದೆ ಅಂತಾ ಹೇಳುವ ಮೂಲಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ಅವಕಾಶವಾದಿ, ಸ್ವಾರ್ಥಪರದ ಸರ್ಕಾರವು ತುಂಬಾ ಸಮಯ ಕರ್ನಾಟಕದಲ್ಲಿ ಅಧಿಕಾರ ನಡೆಸಿದ್ದನ್ನು ನೋಡಿದ್ದೀರಾ. ಇದರಿಂದ ಕರ್ನಾಟಕಕ್ಕೆ ನಷ್ಟ ಆಗಿದೆ. ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ಇದ್ದಾಗ ರಾಜ್ಯದ ಖಜಾನೆ ಖಾಲಿಯಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮತ್ತು ಈಗಲೂ ಈ ರಾಜ್ಯವನ್ನು ಎಟಿಎಂ ರೂಪದಲ್ಲಿ ನೋಡುತ್ತಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬೆಂಬಲಿಸಬೇಡಿ. ಸುಳ್ಳಿಗೆ ಮಾರುಹೋಗಬೇಡಿ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+