ಬೆಂಗಳೂರು: ರಸ್ತೆ ದಾಟುತ್ತಿದ್ದ ಗದಗ ಮೂಲದ ರೈತ ಸಾವು
ಬೆಂಗಳೂರು, ಮಾ, 11: ಗದಗದಿಂದ ಬೆಂಗಳೂರಿಗೆ ಬಂದಿದ್ದ ರೈತ ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಬಿಟಿಎಂ ಲೇಔಟ್ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಚಾರಿ ಗದಗ ಜಿಲ್ಲೆ ಹೊಂಬಳದ ಚೆನ್ನಬಸಪ್ಪ ಹಾವೇರಿ(60) ಮೃತಪಟ್ಟಿದ್ದಾರೆ.
ಬುಧವಾರ ಬೆಳಗಿನ ಜಾವ 3.30 ರ ಸುಮಾರಿಗೆ ಚೆನ್ನಬಸಪ್ಪ ಬಿಟಿಎಂ ಲೇಔಟ್ ನ ಗಂಗೋತ್ರಿ ಆಸ್ಪತ್ರೆ ಎದುರಿನ 100 ಅಡಿ ರಿಂಗ್ ರಸ್ತೆಯನ್ನು ದಾಟುತ್ತಿದ್ದಾಗ ವೇಗವಾಗಿ ಬಂದ ಅಪಚಿತ ವಾಹನವೊಂದು ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ಚೆನ್ನಬಸಪ್ಪ ಸ್ಥಳದಲ್ಲೇ ಬಿದ್ದಿದ್ದಾರೆ.[ಬೆಂಗಳೂರು : ಮೆಜೆಸ್ಟಿಕ್ ಸುತ್ತ-ಮುತ್ತ ಸಂಚಾರ ದಟ್ಟಣೆ]

ಸಾರ್ವಜನಿಕರು ಚೆನ್ನಬಸಪ್ಪ ಅವರನ್ನು ಗಂಗೋತ್ರಿ ಆಸ್ಪತ್ರೆಗೆ ಕರೆದುಕೊಂಡು ಹೋದರು ಪ್ರಯೋಜನವಾಗಲಿಲ್ಲ, ಅವರ ತಲೆಗೆ ಗಂಭೀರ ಪೆಟ್ಟು ಬಿದ್ದ ಪರಿಣಾಮ ಸಾವಿಗೀಡಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.[ಹೆಬ್ಬಾಳ ಅಪಘಾತದಲ್ಲಿ ಮಡಿದವರಿಗೆ ಅಶ್ರುತರ್ಪಣ]
ಅತಿ ವೇಗ ಮತ್ತು ಅಜಾಗರೂಕ ಚಾಲನೆಗೆ ಪಾದಚಾರಿ ಸಾವಿಗೆ ಕಾರಣ ಎಂದು ಹೇಳಲಾಗಿದೆ. ಅಪರಿಚಿತ ವಾಹನ ಸವಾರ ನಾಪತ್ತೆಯಾಗಿದ್ದು ಆರೋಪಿ ಪತ್ತಗೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಮೈಕೋ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications