• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುಮಾರಸ್ವಾಮಿ ರಾಜೀನಾಮೆ ಕೊಟ್ಟಿದ್ದಕ್ಕೆ ಒಂದು ಎಕರೆ ಸಿಲ್ವರ್ ಮರ ಕಡಿದು ಹಾಕಿದ ರೈತ

|

ಬೆಂಗಳೂರು, ಜುಲೈ 24: ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಮನನೊಂದು ರೈತನೊಬ್ಬ ಒಂದು ಎಕರೆ ಸಿಲ್ವರ್ ಮರವನ್ನೇ ಕಡಿದು ಹಾಕಿರುವ ಘಟನೆ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದ್ದು, ರೈತನೊಬ್ಬ ಕಡಿದು ಹಾಕಿರುವ ಸಿಲ್ವರ್ ಮರಗಳ ಮಧ್ಯೆ ನಿಂತು ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಕ್ಕೆ ಬೇಸರದಿಂದ ಒಂದು ಎಕರೆಗೆ ಹಾಕಿದ್ದ ಸಿಲ್ವರ್‌ ಮರಗಳನ್ನು ಕಡಿದು ಹಾಕಿದ್ದೀನಿ ಎಂದು ಹೇಳುತ್ತಿದ್ದಾನೆ.

ನಿರ್ಗಮನಕ್ಕೂ ಮುನ್ನಾ ಬಡವರಿಗೆ ಭರ್ಜರಿ ಉಡುಗೊರೆ ನೀಡಿದ ಕುಮಾರಸ್ವಾಮಿನಿರ್ಗಮನಕ್ಕೂ ಮುನ್ನಾ ಬಡವರಿಗೆ ಭರ್ಜರಿ ಉಡುಗೊರೆ ನೀಡಿದ ಕುಮಾರಸ್ವಾಮಿ

ಘಟನೆ ನಡೆದಿರುವುದು ಎಲ್ಲಿ ಎಂಬುದು ತಿಳಿದು ಬಂದಿಲ್ಲ, ರೈತನು ಮಂಡ್ಯ ಅಥವಾ ಮೈಸೂರು ಅಥವಾ ಹಾಸನದವನಾಗಿರಬೇಕು ಎಂದು ಆತನ ಭಾಷೆಯಿಂದ ಅಂದಾಜು ಮಾಡಬಹುದಾಗಿದೆ.

ವಿಡಿಯೋದಲ್ಲಿ ಮಾತನಾಡಿರುವ ರೈತ, 'ಕುಮಾರಸ್ವಾಮಿ ಅವರು ರಾಜೀನಾಮೆ ಕೊಟ್ರೆ ಸಿಲ್ವರ್ ಮರ ಹಾಕಿದ್ದ ತೋಟ ಕಡಿದು ಹಾಕುತ್ತೇನೆಂದು ಹೇಳಿದ್ದೆ, ಅಂತೆಯೇ ಮಾಡಿದ್ದೇನೆ, ಅಂತಾ ಮುಖ್ಯಮಂತ್ರಿಯನ್ನೇ ಅಧಿಕಾರದಿಂದ ಇಳಿಸಿದಾಗ ದೇಶದಲ್ಲಿ ಇನ್ನಾರು ಆಡಳಿತ ಮಾಡುತ್ತಾರೆ' ಎಂದು ರೈತ ಹೇಳಿದ್ದಾನೆ.

ಮಚ್ಚು ಹಿಡಿದು ನಿಂತಿರುವ ರೈತ ಹಿನ್ನೆಲೆಯಲ್ಲಿ ಹತ್ತು-ಹನ್ನೆರಡು ಅಡಿ ಉದ್ದ ಬೆಳೆದಿದ್ದ ಸಿಲ್ವರ್ ಮರಗಳು ಕಡಿದು ಉರುಳಿರುವುದು ಕಾಣುತ್ತದೆ.

ಸಿಲ್ವರ್ ಮರದ ಬೆಳೆ ದುಬಾರಿ ಬೆಳೆ, ಅದರ ಸಸಿಗಳು ಕಡಿಮೆ ಬೆಲೆಗೆ ದೊರೆಯುವುದಿಲ್ಲ, ಅದರ ಆರೈಕೆಯೂ ಸುಲಭ ಸಾಧ್ಯದ್ದಲ್ಲ,

English summary
A Farmer cut off one Acer silver oak plants in sorrow that HD Kumaraswamy stepped down as chief minister. Video viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X