ಸಾಲಮನ್ನಾ ಬಗ್ಗೆ ಕುಮಾರಸ್ವಾಮಿ ಹೇಳಿಕೆ ಕೇಳಿ ರೈತ ಆತ್ಮಹತ್ಯೆ

Recommended Video

      ಎಚ್ ಡಿ ಕುಮಾರಸ್ವಾಮಿ ಮಾತು ಕೇಳಿ ಬೇಸರಗೊಂಡ ರೈತ ಆತ್ಮಹತ್ಯೆ |Oneindia Kannada

      ಬೆಳಗಾವಿ, ಮೇ 26: ಸಾಲಮನ್ನಾ ಮಾಡಲು ಕಾಲಾವಕಾಶ ಬೇಕಾಗುತ್ತದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಕೇಳಿ ಗೋಕಾಕ ತಾಲ್ಲೂಕಿನಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

      ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ಈ ದುರಾದೃಷ್ಟಕರ ಘಟನೆ ನಡೆದಿದೆ. ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ತಡವಾಗುತ್ತದೆ ಎಂದ ಕಾರಣ, ತಾನು ಮಾಡಿದ್ದ ಸಾಲ ಮನ್ನಾ ಆಗಲು ತಡವಾಗುತ್ತದೆ ಎಂದು ಬೇಸಗೊಂಡ ರೈತ ಯಲ್ಲಪ್ಪ ವಂಟಗೂಡಿ ( 48) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

      ಮೃತ ರೈತ ಯಲ್ಲಪ್ಪ ಸುಮಾರು ಹದಿನೈದು ಲಕ್ಷ ಸಾಲ ಮಾಡಿದ್ದಾನೆಂದು ಸ್ಥಳಿಯರು ಹೇಳಿದ್ದಾರೆ. ಗೋಕಾಕ ಗ್ರಾಮೀಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ.

      Farmer commit suicide after hearing his loan not going waive off soon

      ಚುನಾವಣೆ ಪೂರ್ವ ಅಧಿಕಾರಕ್ಕೇರಿದ 24 ಗಂಟೆಯಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತೇನೆಂದು ಹೇಳಿದ್ದ ಕುಮಾರಸ್ವಾಮಿ ಅವರು ಅಧಿಕಾರಕ್ಕೇರಿದ ನಂತರ ಸಾಲಮನ್ನಾಕ್ಕೆ ಇನ್ನೂ ಸ್ವಲ್ಪ ಕಾಲಾವಕಾಶ ಬೇಕು ಎಂದು ಹೇಳಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+