• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೃಷಿ ಕಾಯ್ದೆ: ಪ್ರತಿಭಟನೆಗಾಗಿ ದೆಹಲಿಯತ್ತ ಹೊರಟ 40,000 ಮಹಿಳೆಯರು

|

ನವದೆಹಲಿ, ಮಾರ್ಚ್ 7: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೂ ಮುನ್ನ ಪಂಜಾಬ್‌ನ ವಿವಿಧ ಭಾಗಗಳಿಂದ ಸುಮಾರು 40,000 ಮಹಿಳಾ ಪ್ರತಿಭಟನಾಕಾರರು ದೆಹಲಿ ಮೋರ್ಚಾವನ್ನು ಸೇರಿಕೊಳ್ಳಲಿದ್ದಾರೆ ಎಂದು ರೈತ ಸಂಘಟನೆಗಳು ತಿಳಿಸಿವೆ.

ಪ್ರತಿಭಟನೆಯಲ್ಲಿ ಇಳಿಯುತ್ತಿರುವ ರೈತರ ಸಂಖ್ಯೆ; ಹೊಸ ಕಾರ್ಯತಂತ್ರ ರಚನೆ

ಹೆಚ್ಚಿನ ಮಹಿಳಾ ಪ್ರತಿಭಟನಾಕಾರರು ಭಾನುವಾರ ಬೆಳಿಗ್ಗೆಯಿಂದಲೇ ತಮ್ಮ ಪ್ರಯಾಣ ಆರಂಭಿಸಿದ್ದಾರೆ. ಪ್ರತಿಭಟನೆಯನ್ನು ಪುನಃ ತೀವ್ರಗೊಳಿಸುವ ಸಲುವಾಗಿ ಪಂಜಾಬ್‌ನ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಟ್ರ್ಯಾಕ್ಟರ್ ಮೆರವಣಿಗೆಗಳನ್ನು ಮತ್ತೆ ಆಯೋಜಿಸಲಾಗುತ್ತಿದೆ.

ಬರ್ನಾಲಾದಲ್ಲಿ ಶುಕ್ರವಾರ ಅನೇಕ ಮಹಿಳೆಯರು ಟ್ರ್ಯಾಕ್ಟರ್ ಚಲಾಯಿಸಿದರು. ಬತಿಂಡಾದಲ್ಲಿ ಪುರುಷರು ಮತ್ತು ಮಹಿಳೆಯರು ಟ್ರ್ಯಾಕ್ಟರ್ ಮೆರವಣಿಗೆ ನಡೆಸಿದರು. ಮಕ್ಕಳ ಪರೀಕ್ಷೆಗಳು ಇರುವುದರಿಂದ ಅವರ ಯೋಗಕ್ಷೇಮ ನೋಡಿಕೊಳ್ಳುವುದರಲ್ಲಿ ಹೆಚ್ಚಿನ ಮಹಿಳೆಯರು ಮಗ್ನರಾಗಿದ್ದಾರೆ. ಹೀಗಾಗಿ ಮಾರ್ಚ್ 8ರಂದು ನಡೆಯಲಿರುವ ದೆಹಲಿ ಮೋರ್ಚಾದಲ್ಲಿ ಭಾಗವಹಿಸಿದ ಬಳಿಕ ಬಹುತೇಕ ಮಹಿಳೆಯರು ಮಾರ್ಚ್ 9ರಂದು ತಮ್ಮ ಮನೆಗಳಿಗೆ ಮರಳಲಿದ್ದಾರೆ. ಇನ್ನು ಉಳಿದವರು ಅಲ್ಲಿಯೇ ಉಳಿದುಕೊಂಡು ಪ್ರತಿಭಟನೆ ಮುಂದುವರಿಸಲಿದ್ದಾರೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮಹಿಳಾ ಘಟಕದ ರಾಜ್ಯ ಸಮಿತಿ ಸದಸ್ಯೆ ಬಲ್ಬೀರ್ ಕೌರ್ ತಿಳಿಸಿದ್ದಾರೆ.

'ಇಲ್ಲಿಂದ ಮಹಿಳೆಯರು 500 ಬಸ್‌ಗಳು, 600 ಮಿನಿ ಬಸ್‌ಗಳು, 115 ಟ್ರಕ್‌ಗಳು/ಕ್ಯಾಂಟರ್ಸ್‌ಗಳು ಹಾಗೂ 200 ಸಣ್ಣ ವಾಹನಗಳಲ್ಲಿ ಭಾನುವಾರ ಬೆಳಿಗ್ಗೆ ಹೊರಡಲಿದ್ದಾರೆ. ಸಾವಿರಾರು ಮಂದಿ ಟಿಕ್ರಿ ಗಡಿಗೆ ಮಹಿಳಾ ದಿನಾಚರಣೆ ಭಾಗವಾಗಿ ಇದೇ ರಾತ್ರಿ ಸೇರಿಕೊಳ್ಳಲಿದ್ದಾರೆ' ಎಂದು ಬಿಕೆಯು ಪ್ರಧಾನ ಕಾರ್ಯದರ್ಶಿ ಸುಖದೇವ್ ಸಿಂಗ್ ಕೊಕ್ರಿಲಕಾಳನ್ ತಿಳಿಸಿದ್ದಾರೆ.

English summary
Farmer unions said nearly 40,000 Punjab women heading for Delhi protest ahead of International Women's Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X