ಉತ್ತರ ಕನ್ನಡದಲ್ಲಿ ವಿಸ್ತರಣೆಗೊಳ್ಳುತ್ತಿರುವ ಕಾಂಡ್ಲಾ ಪ್ರದೇಶ!

ಕಾರವಾರ, ಜೂ 13: ಹಸಿರೀಕರಣಕ್ಕೊಸ್ಕರ ಎಲ್ಲೆಡೆ ಗಿಡ ಮರಗಳನ್ನು ಬೆಳೆಸಲಾಗುತ್ತಿದೆ. ಇದೇ ರೀತಿ ನದಿ ಹಾಗೂ ಸಮುದ್ರ ತೀರಗಳಲ್ಲಿ ಕಾಂಡ್ಲಾಗಿಡಗಳನ್ನೂ ಅಭಿವೃದ್ಧಿಪಡಿಸಲಾಗುತ್ತಿದ್ದು, ಪರಿಣಾಮ ಉತ್ತರಕನ್ನಡ ಜಿಲ್ಲೆಯಲ್ಲಿ ಕಾಂಡ್ಲಾ ಪ್ರದೇಶಗಳ ವಿಸ್ತರಣೆ ಹೆಚ್ಚಳವಾಗಿದೆ.

ಏನಿದು ಕಾಂಡ್ಲ ವನ?: ಸಮುದ್ರ ಹಾಗೂ ನದಿಯ ಮಧ್ಯದ ಮುಖಜ ಭೂಮಿಯ ಉಪ್ಪು ಹಾಗೂ ಸಿಹಿ ನೀರಿನ ಸಂಗಮದ ಕೆಸರಿನ ನಡುವೆ ಬೇರು ಬಿಟ್ಟು, ಅಲ್ಲಿ ಹಸಿರ ಸೀರೆಯುಡಿಸುವ ಈ ಸಸ್ಯರಾಶಿಯ ಸಮೂಹವೇ ಕಾಂಡ್ಲಾ ವನ.

ಕರಾವಳಿಯಲ್ಲಿ ಕಡಲತೀರ ಹಾಗೂ ನದಿ ತೀರಗಳ ಅಂಚಿನಲ್ಲಿ ನೀರಿನಲ್ಲಿ ಗಾಢವಾಗಿ ಬೇರೂರಿ ದಪ್ಪ ಎಲೆಗಳ ಮೂಲಕ ಹಚ್ಚ ಹಸಿರಿನಿಂದ ಕಂಗೋಳಿಸುವ ಕಾಂಡ್ಲಾಗಿಡಗಳು ಕೇವಲ ನೋಡುವುದಕ್ಕೆ ಮಾತ್ರ ಸುಂದರವಾಗಿಲ್ಲ. ಮಳೆಗಾಲದ ವೇಳೆ ತುಂಬಿ ಹರಿಯುವ ನದಿ, ಕಡಲಕೊರೆತಗಳಿಂದ ಮಣ್ಣಿನ ಸವಕಳಿ ತಪ್ಪಿಸುವುದಲ್ಲದೆ ಸದ್ದಿಲ್ಲದೆ ಕರಾವಳಿ ಭೂ ಪ್ರದೇಶವನ್ನು ಸೈನಿಕನಂತೆಯೇ ಕಾಯುತ್ತಿದೆ.

ಪರಿಸರ ಸಮತೋಲನಕ್ಕೆ ತನ್ನ ವಿಶಿಷ್ಟ ಕೊಡುಗೆ

ಪರಿಸರ ಸಮತೋಲನಕ್ಕೆ ತನ್ನ ವಿಶಿಷ್ಟ ಕೊಡುಗೆ

ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಈಚೆಗೆ ಬಿಡುಗಡೆ ಮಾಡಿರುವ ಅರಣ್ಯ ಸ್ಥಿತಿಗತಿ 2021ರ ವರದಿಯಲ್ಲಿ ರಾಜ್ಯದಲ್ಲಿ ಒಟ್ಟು 12.61 ಚ.ಕಿ.ಮೀ ಇದೆ. ಈ ಪೈಕಿ ಉತ್ತರಕನ್ನಡದಲ್ಲಿ 10.47 ಚ.ಕಿ.ಮೀ ಇದ್ದು, ಉಡುಪಿ ಜಿಲ್ಲೆಯಲ್ಲಿ 1.69 ಚ.ಕಿ.ಮೀ. ದಕ್ಷಿಣ ಕನ್ನಡ 0.45 ಚ.ಕಿ.ಮೀ ಕಾಂಡ್ಲಾವನವಿದೆ. ಅಲ್ಲದೆ ಕಳೆದ ಎರಡು ವರ್ಷದ ಅವಧಿಯಲ್ಲಿ ಕಾಂಡ್ಲಾ ಪ್ರದೇಶಗಳ ವಿಸ್ತರಣೆ ಹೆಚ್ಚಾಗಿರುವುದು ಕಂಡುಬಂದಿದೆ.

ತೀರವನ್ನು ಗಾಢವಾಗಿ ಆಲಂಗಿಸಿಕೊಂಡು ನೆರೆ ತೊರೆಗಳಿಂದ ಅದನ್ನು ಕಾಯಕವನ್ನು ಸದ್ದಿಲ್ಲದೆ ಮಾಡುತ್ತಿರುವ, ಕರಾವಳಿಯನ್ನು ಕಾಯುವ ಸೈನಿಕನೆಂಬ ಅನ್ವರ್ಥ ಗೌರವ ಮನ್ನಣೆ ಪಡೆದಿರುವುದು ಕಾಂಡ್ಲ ವನ.

ಪಶ್ಚಿಮ ಘಟ್ಟ ಹಾಗೂ ಅರಬ್ಬಿಸಮುದ್ರದ ನಡುವಿನ ಕರಾವಳಿಯ ಗುಂಟ ಸಾಗಿದರೆ ಅಲ್ಲಲ್ಲಿ ಈ ಕಾಂಡ್ಲಾ ವನ ಕಾಣ ಸಿಗುತ್ತವೆ. ಪರಿಸರ ಸಮತೋಲನಕ್ಕೆ ತನ್ನ ವಿಶಿಷ್ಟ ಕೊಡುಗೆಯನ್ನು ನೀಡಿದೆ. ಹೊನ್ನಾವರ, ಭಟ್ಕಳ, ಕುಮಟಾ ತಾಲ್ಲೂಕುಗಳನ್ನು ಒಳಗೊಂಡಿರುವ ಹೊನ್ನಾವರ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ೪ ಚ.ಕಿ.ಮೀ ವ್ಯಾಪ್ತಿಯಲ್ಲಿ ಕಾಂಡ್ಲಾ ವನ ಇದ್ದು, ಹಲವು ಜೀವ ಪ್ರಬೇಧಗಳಿಗೆ ಆಶ್ರಯ ನೀಡಿದೆ.

25-30 ಹೆಕ್ಟೇರ್ ಪ್ರದೇಶದಲ್ಲಿ ಕಾಂಡ್ಲಾ ಗಿಡ ನಾಟಿ

25-30 ಹೆಕ್ಟೇರ್ ಪ್ರದೇಶದಲ್ಲಿ ಕಾಂಡ್ಲಾ ಗಿಡ ನಾಟಿ

ಜಿಲ್ಲೆಯ ಪಶ್ಚಿಮ ಘಟ್ಟ ಸಾಲಿನ ನದಿ ತೀರಗಳಲ್ಲಿ ಹಾಗೂ ಅರಬ್ಬಿ ಸಮುದ್ರದಂಚಿನ ಅಲ್ಲಲ್ಲಿ ಕಾಣಸಿಗುವ ಕಾಂಡ್ಲಾ ಗಿಡ ಪರಿಸರ ಸಮತೋಲನದಲ್ಲಿ ತನ್ನದೆಯಾದ ವಿಶಿಷ್ಟ ಕೊಡುಗೆ ನೀಡಿದೆ. ಜಿಲ್ಲೆಯ ಕರಾವಳಿಯ ಹೊನ್ನಾವರ, ಕುಮಟಾ, ಕಾರವಾರ, ಅಂಕೋಲಾ ಭಾಗದಲ್ಲಿ ಹೆಚ್ಚಾಗಿ ಕಾಣಸಿಗುತ್ತದೆಯಾದರೂ ಭಟ್ಕಳದಲ್ಲಿಯೂ ಅಲ್ಲಲ್ಲಿ ಇದೆ. ಈ ಪೈಕಿ ನೈಸರ್ಗಿಕವಾಗಿ ಬೆಳೆದು ವ್ಯಾಪಿಸಿದ, ಅರಣ್ಯ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಮೂಲಕ ನಾಟಿ ಮಾಡಿ ಸಂರಕ್ಷಣೆ ಮಾಡಲಾಗಿದೆ.

ಇನ್ನು ಜಿಲ್ಲೆ ಪೈಕಿ ಹೊನ್ನಾವರದಲ್ಲಿ ಸುಮಾರು 400 ಹೆಕ್ಟೇರ್ ಇದ್ದು, ಪ್ರತಿ ವರ್ಷ 25-30 ಹೆಕ್ಟೇರ್ ಪ್ರದೇಶದಲ್ಲಿ ಕಾಂಡ್ಲಾ ಗಿಡಗಳನ್ನು ನಾಟಿ ಮಾಡಲಾಗುತ್ತಿದೆ. ಆದರೆ ನಾಟಿ ಮಾಡಿದ ಎಲ್ಲ ಗಿಡಗಳು ಕೂಡ ಬೇಳೆಯುವುದಿಲ್ಲ. ಅದಕ್ಕೆ ಪೂರಕವಾದ ಮುದ್ದೆಯಾದ ಮಣ್ಣು ಬೇಕಾಗುತ್ತದೆ. ಉಬ್ಬರ ವಿಳಿತವಿದ್ದಾಗ ನಾಟಿ ಮಾಡಿದ ಗಿಡಗಳು ನಾಶವಾಗುವ ಸಾಧ್ಯತೆ ಕೂಡ ಇದೆ. ಆದರೆ ಇಲಾಖೆಯಿಂದ ಪ್ರತಿ ವರ್ಷವೂ ನಾಟಿ ಮಾಡಿ ಕಾಂಡ್ಲಾಗಿಡಗಳನ್ನು ಹೆಚ್ಚಿಸಲಾಗುತ್ತದೆ ಎಂದು ಹೊನ್ನಾವರ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ತಿಳಿಸಿದರು.

ವನ್ಯ ಸಂಪತ್ತಿನ ವಿಸ್ತರಣೆಗೆ ತಕ್ಕಮಟ್ಟಿಗೆ ಸಹಕಾರಿ

ವನ್ಯ ಸಂಪತ್ತಿನ ವಿಸ್ತರಣೆಗೆ ತಕ್ಕಮಟ್ಟಿಗೆ ಸಹಕಾರಿ

ಇನ್ನು ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಿಂದ ರೈಸೊಪೋರಾ ಕಾಂಡ್ಲಾ ತಳಿಯನ್ನು ಹೆಚ್ಚಾಗಿ ನಾಟಿ ಮಾಡಿ ಬೆಳಸಲಾಗುತ್ತಿದೆ. ಸಮುದ್ರ ಉಬ್ಬರವಿಳಿತದ ಪ್ರಭಾವದಲ್ಲಿಯೂ ಕೊಚ್ಚಿ ಹೋದಲ್ಲಿ ಹಿನ್ನೀರಿನಲ್ಲಿಯೂ ಅದು ಚಿಗುರೊಡೆಯುತ್ತದೆ. ಶರಾವತಿ ನದಿಯಲ್ಲಿ ಇದು ಹೆಚ್ಚು ಯಶಸ್ವಿಯೂ ಆಗಿದೆ. ದಪ್ಪ ಎಲೆ ಇರುವ ಈ ಪ್ರಭೇದದ ಕೊಡುಗಳು ಹೆಚ್ಚು ಉದ್ದವಾಗಿಯೂ ಇರುತ್ತವೆ. ಮರದಿಂದ ನೀರಿಗೆ ಬಿದ್ದಾಗ ತಳದವರೆಗೂ ಹೋಗಿ ಅಲ್ಲಿಯೇ ನಿಲ್ಲುತ್ತವೆ. ಅಲ್ಲದೆ ಪ್ರತಿ ವರ್ಷ ಇವುಗಳನ್ನು ನೆಡಲು ಮುಂದಾದ ಕಾರಣ ಕಾಂಡ್ಲಾ ಪ್ರದೇಶಗಳ ವಿಸ್ತರಣೆ ಹೆಚ್ಚಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಕರಾವಳಿಯ ವಿವಿಧೆಡೆ ಉಪ್ಪು ನೀರು ಮತ್ತು ಸಿಹಿನೀರು ಮಿಶ್ರಣವಾಗುವ ಹಿನ್ನೀರು ಪ್ರದೇಶಗಳಲ್ಲಿ ಸೀಗಡಿ, ಏಡಿ ಕೃಷಿ ಮಾಡಲಾಗುತ್ತದೆ. ಬಳಿಕ ಆ ಪ್ರದೇಶವನ್ನು ಹಾಗೇ ಬಿಟ್ಟರೆ ಅಲ್ಲಿ ಕಾಂಡ್ಲಾ ಅಭಿವೃದ್ಧಿಯಾಗುತ್ತದೆ. ಇದು ಕೂಡ ಈ ವನ್ಯ ಸಂಪತ್ತಿನ ವಿಸ್ತರಣೆಗೆ ತಕ್ಕಮಟ್ಟಿಗೆ ಸಹಕಾರಿಯಾಗಿದೆ ಎಂದು ಅರಣ್ಯಾಧಿಕಾರಿಗಳು ಅಭಿಪ್ರಾಯ ಪಡುತ್ತಾರೆ.

ಅತೀ ಹೆಚ್ಚಿನ ಕಾಂಡ್ಲಾ ಕಾಡುಗಳ ವಿಸ್ತೀರ್ಣತೆ

ಅತೀ ಹೆಚ್ಚಿನ ಕಾಂಡ್ಲಾ ಕಾಡುಗಳ ವಿಸ್ತೀರ್ಣತೆ

ಕರ್ನಾಟಕದಲ್ಲಿ ಕಾಂಡ್ಲಾ ವನ ಪ್ರದೇಶದ ವಿಸ್ತೀರ್ಣತೆ ಹೆಚ್ಚಿದ್ದು, ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆ ಅತೀ ಹೆಚ್ಚಿನ ಕಾಂಡ್ಲಾ ಕಾಡುಗಳ ವಿಸ್ತೀರ್ಣತೆ ಪಡೆದಿವೆ.

ಈ ಅಂಕಿ ಅಂಶಗಳಲ್ಲಿ ನೈಸರ್ಗಿಕವಾಗಿ ಬೆಳೆದು ವ್ಯಾಪಿಸಿದ, ಅರಣ್ಯ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳು ನಾಟಿ ಮಾಡಿ ಸಂರಕ್ಷಣೆ ಮಾಡಿದ ಕಾಂಡ್ಲಾ ವನದ ಮಾಹಿತಿಗಳೂ ಒಳಗೊಂಡಿವೆ. ಉತ್ತರ ಕನ್ನಡದ ಕಾರವಾರ, ಕುಮಟಾ ಮತ್ತು ಹೊನ್ನಾವರ ತಾಲ್ಲೂಕುಗಳ ಕೆಲವೆಡೆ ಆಸಕ್ತರು, ಸರ್ಕಾರೇತರ ಸಂಘ ಸಂಸ್ಥೆಗಳು ಕೆಲವು ವರ್ಷಗಳಿಂದ ಪಾಳು ಬಿದ್ದಿರುವ ಗಜನಿ ಭೂಮಿಯಲ್ಲಿ (ಉಪ್ಪು ನೀರಿನ ಪ್ರದೇಶ) ಕಾಂಡ್ಲಾ ಸಂರಕ್ಷಣೆ ಮಾಡುತ್ತಿದ್ದಾರೆ.

ಇನ್ನು ಕಾರವಾರ ಅಂಕೋಲಾ ಭಾಗದಲ್ಲಿ ಕಳೆದ ಐದು ವರ್ಷದಲ್ಲಿ 150 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಕಾಂಡ್ಲಾ ನೆಡುತೋಪು ನಿರ್ಮಾಣ ಮಾಡಲಾಗಿದೆ. ಗೂಗಲ್ ಮೂಲಕ ವೀಕ್ಷಣೆ ಮಾಡಿದಾಗ ಕಳೆದ ಸಾಲಿನ ಚಿತ್ರಗಳಿಗಿಂತ ಇದೀಗ ಅಧಿಕವಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಕಾಳಿನದಿ, ಗಂಗಾವಳಿ, ಮಾವಿನ ಹೊಳೆ, ಹಟ್ಟಿಕೇರಿ ಹೊಳೆ ಹಿನ್ನೀರಿನಲ್ಲಿ ಸೋನರೇಶಿಯಾ, ಅವಿಶಿನಿಯಾ, ರೈಜೋಷರಾ, ಕ್ಯಾಡಂಲಿಯಾ, ಬ್ರಗೇರಿಯಾಗಳನ್ನು ಬೆಳೆಯಲಾಗಿದೆ ಎಂದು ಆರ್‌ಎಫ್‌ಓ ಪ್ರಮೋದ ಮಾಹಿತಿ ನೀಡಿದರು.

Recommended Video

      ಪುಟಿನ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಬ್ರಿಟನ್ ! | *Defence | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+