ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ನಿರ್ಧಾರದಿಂದ ಗೋಧಿ ಹಿಟ್ಟಿನ ಚಿಲ್ಲರೆ ಬೆಲೆ ಇಳಿಕೆ, ಸರ್ಕಾರದ ಆ ನಿರ್ಧಾರ ಯಾವುದು?

ಗೋಧಿ ಹಿಟ್ಟಿನ (ಆಟ್ಟಾ) ಬೆಲೆ ಏರಿಕೆ ಹೆಚ್ಚಳ ತಡೆಯುವ ಸಂಬಂಧ ಕೇಂದ್ರ ಸರ್ಕಾರ ಇತ್ತೀಚೆತಗಷ್ಟೇ ಸಂಗ್ರಹಿಸಿಟ್ಟಿದ್ದ ಗೋಧಿ ದಾಸ್ತಾನಿನಲ್ಲಿ 30 ಲಕ್ಷ ಟನ್ ಗೋಧಿ ಮಾರಾಟಕ್ಕೆ ನಿರ್ಧರಿಸಿತ್ತು. ಇದರಿಂದ ಗೋಧಿಬೆಲೆ ನಿಯಂತ್ರಣಕ್ಕೆ ಬರುತ್ತದೆಯೇ?. ಈ ಬಗ್ಗೆ ರೋಲರ್ ಫ್ಲೋರ್

|
Google Oneindia Kannada News

ಬೆಂಗಳೂರು, ಜನವರಿ 27: ಗೋಧಿ ಹಿಟ್ಟಿನ (ಆಟ್ಟಾ) ಬೆಲೆ ಏರಿಕೆ ಹೆಚ್ಚಳ ತಡೆಯುವ ಸಂಬಂಧ ಕೇಂದ್ರ ಸರ್ಕಾರ ಇತ್ತೀಚೆತಗಷ್ಟೇ ಸಂಗ್ರಹಿಸಿಟ್ಟಿದ್ದ ಗೋಧಿ ದಾಸ್ತಾನಿನಲ್ಲಿ 30 ಲಕ್ಷ ಟನ್ ಗೋಧಿ ಮಾರಾಟಕ್ಕೆ ನಿರ್ಧರಿಸಿತ್ತು. ಕೇಂದ್ರ ಈ ನಿರ್ಧಾರವನ್ನು ರೋಲರ್ ಫ್ಲೋರ್ ಮಿಲ್ಲರ್ಸ್ ಫೆಡರೇಶನ್ ಆಫ್ ಇಂಡಿಯಾ (RFMFI) ಸ್ವಾಗತಿಸಿದೆ. ಇದರಿಂದ ಗೋಧಿ ಹಿಟ್ಟಿನ ಬೆಲೆಯಲ್ಲಿ ಇಳಿಕೆ ಆಗಬಹುದು ಎಂದು ಗುರುವಾರ ತಿಳಿಸಿದೆ.

ಸರ್ಕಾರಿ ಸ್ವಾಮ್ಯದ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (FCI) ಮುಂದಿನ ಎರಡು ತಿಂಗಳ ಅವಧಿಯಲ್ಲಿಇ-ಹರಾಜಿನ ಮೂಲಕ ಹಿಟ್ಟಿನ ಗಿರಣಿದಾರರಂತಹ ಬೃಹತ್ ಗ್ರಾಹಕರಿಗೆ ಗೋಧಿಯನ್ನು ಮಾರಾಟ ಮಾಡಲಿದೆ. ಈ ವೇಳೆ ಎಫ್‌ಸಿಐ ಗೋಧಿ ಧಾನ್ಯವನ್ನು ಆಟ್ಟಾಕ್ಕೆ ಪರಿವರ್ತಿಸಲು ಪ್ರತಿ ಕೆಜಿಗೆ 23.50 ರೂ. ನಂತೆ ನೀಡುತ್ತದೆ. ನಂತರ ಅದು ಆಟ್ಟಾವಾಗಿ ಸಿದ್ಧಗೊಂಡು ಗ್ರಾಕರಿಗೆ ಚಿಲ್ಲರೆಯಾಗಿ ಕೆಜಿಗೆ 29.50 ರೂ.ವಾಗಿ ಸಿಗುತ್ತದೆ.

ಗೋಧಿ ಹಿಟ್ಟಿನ ಬೆಲೆ ಏರಿಕೆ: ಸಂಗ್ರಹಿಸಿಟ್ಟಿದ್ದ ಗೋಧಿ ಮಾರಾಟಕ್ಕೆ ಸರ್ಕಾರ ನಿರ್ಧಾರ, ಎಷ್ಟು ಮಾರಾಟವಾಗಲಿದೆ? ಗೋಧಿ ಹಿಟ್ಟಿನ ಬೆಲೆ ಏರಿಕೆ: ಸಂಗ್ರಹಿಸಿಟ್ಟಿದ್ದ ಗೋಧಿ ಮಾರಾಟಕ್ಕೆ ಸರ್ಕಾರ ನಿರ್ಧಾರ, ಎಷ್ಟು ಮಾರಾಟವಾಗಲಿದೆ?

ಸದ್ಯ ಆಟ್ಟಾ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಗೋಧಿ ಮಾರಾಟ ನಿರ್ಧಾರ ಒಂದು ತಿಂಗಳ ಮೊದಲೇ ಕೈಗೊಂಡಿದ್ದರೂ ಇನ್ನೂ ಹೆಚ್ಚು ಅನುಕೂಲವಾಗುತ್ತಿತ್ತು. ಈಗ ಕೈಗೊಂಡ ನಿರ್ಧಾರದಿಂದ ಏನಿಲ್ಲವಾದರೂ ಬರುವ ದಿನಗಳಲ್ಲಿ ಸಗಟು ಮತ್ತು ಚಿಲ್ಲರೆ ಬೆಲೆ ಕೆಜಿಗೆ ರೂ. 5ರಿಂದ 6 ನಷ್ಟು ಇಳಿಕೆ ಆಗುತ್ತದೆ ಎಂದು ಮಿಲ್ಲರ್ ಫೆಡರೇಷನ್ ಅಧ್ಯಕ್ಷ ಪ್ರಮೋದ್ ಕುಮಾರ್ ವಿವರಿಸಿದರು.

Due to the Govt decision to sell 30 lakh wheat, wheat flour price may be decreased to Rs 5-6

ಸರ್ಕಾರದ ನೀಡಿದ ಮಾಹಿತಿ ಪ್ರಕಾರ, ದೇಶದ ಪ್ರಮುಖ ನಗರಗಳಲ್ಲಿ ಗೋಧಿಯ ಸರಾಸರಿ ಬೆಲೆ ಬುಧವಾರಕ್ಕೆ ಕೆಜಿಗೆ ರೂ 33.43 ರಷ್ಟಿತ್ತು, ಇದೇ ಅವಧಿಯಲ್ಲಿ ಕಳೆದ ವರ್ಷ ಪ್ರತಿ ಕೆಜಿ ಗೋಧಿಗೆ 28.24 ರೂ.ನಷ್ಟಿತ್ತು. ಇನ್ನೂ ಗೋಧಿ ಹಿಟ್ಟು ಸರಾಸರಿ ಬೆಲೆ ಕಳೆದ ವರ್ಷ ಪ್ರತಿ ಕೇಜಿಗೆ 31.41 ರೂ. ಇತ್ತು, ಇದೀಗ ಅದರ ಬೆಲೆ ಕೆಜಿಗೆ 37.95 ರೂ.ನಷ್ಟಾಗಿದೆ.

ಈ ಎಲ್ಲ ಕಾರಣದಿಂದ ಕೇಂದ್ರ ಆಹಾರ ಸಚಿವಾಲಯ ಮಾರುಕಟ್ಟೆಗೆ ದಾಸ್ತಾನಿನಲ್ಲಿರುವ ಪೈಕಿ 30 ಲಕ್ಷ ಟನ್ ಗೋಧಿ ಮಾರಾಟ ಮಾಡುವುದಾಗಿ ತಿಳಿಸಿದೆ. ಇದರಿಂದ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಗೋಧಿ ಮತ್ತು ಆಟಾ ಹಿಟ್ಟಿನ ಬೆಲೆ ತಕ್ಷಣವೇ ಪರಿಣಾಮ ಬೀರುತ್ತದೆ. ಬೆಲೆಯು ನಿಯಂತ್ರಣಕ್ಕೆ ಬರಲಿದೆ ಎಂದು ಸಚಿವಾಲಯ ತಿಳಿಸಿದೆ.

ರಿಯಾಯಿತಿ ದರದಲ್ಲಿ ಗೋಧಿ ವಿತರಣೆ

ಗೋಧಿ ಮಾರಾಟದ ಪ್ರತಿ ಹರಾಜಿನಲ್ಲಿ ಹಿಟ್ಟು ಗಿರಣಿಗಾರರು, ಬೃಹತ್ ಖರೀದಿದಾರರು, ಮತ್ತಿತರರಿಗೆ ಗರಿಷ್ಠ 3,000 ಟನ್‌ಗಳಿಗೆ ಇ-ಹರಾಜು ಮೂಲಕ ನೀಡಲು ಕೇಂದ್ರ ನಾಯಕರ ಸಮಿತಿ ನಿರ್ಧರಿಸಿದೆ. ಇ-ಹರಾಜು ಇಲ್ಲದೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಗೋಧಿ ದೊರೆಯಲಿದೆ. ಅಂತೆಯೇ ಸರ್ಕಾರಿ ಪಿಎಸ್‌ಯು, ಸಹಕಾರಿ ಸಂಸ್ಥೆಗಳು, ಫೆಡರೇಶನ್‌ಗಳು, ಕೇಂದ್ರೀಯ ಭಂಡಾರ್, ಎನ್‌ಸಿಸಿಎಫ್, ಎನ್‌ಎಎಫ್‌ಇಡಿ ಇತ್ಯಾದಿಗಳಿಗೆ ಇ-ಹರಾಜು ಇಲ್ಲದೆ ಪ್ರತಿ ಕ್ವಿಂಟಾಲ್‌ಗೆ 2,350 ರೂ. ರಿಯಾಯಿತಿ ದರ ಗೋಧಿ ನೀಡಲಾಗುವುದು ಸಮಿತಿ ತಿಳಿಸಿದೆ.

Due to the Govt decision to sell 30 lakh wheat, wheat flour price may be decreased to Rs 5-6

ಎಫ್‌ಸಿಐ ಯಿಂದ ಮುಂದಿನ ಎರಡು ತಿಂಗಳಲ್ಲಿ (ಮಾರ್ಚ್ ವರೆಗೆ) ದೇಶಾದ್ಯಂತ ತಕ್ಷಣವೇ ಷೇರುಗಳ ಇ-ಹರಾಜು ಆರಂಭಿಸಲಿದೆ. ಮಾರುಕಟ್ಟೆಯಲ್ಲಿ ಬೃಹತ್ ಗ್ರಾಹಕರು, ಖಾಸಗಿ ವ್ಯಾಪಾರಿಗಳಿಗೆ ಈಗಾಗಲೇ ನಿರ್ಧರಿಸಿದ ಬೆಲೆಯಲ್ಲೇ ಗೋಧಿ ಮಾರಾಟಕ್ಕೆ ಎಫ್‌ಸಿಐಗೆ ಸರ್ಕಾರ ಅವಕಾಶ ನೀಡಿದೆ. ಕೇಂದ್ರ ಸರ್ಕಾರ ಆಹಾರ ಧಾನ್ಯಗಳ ದಾಸ್ತಾನು ಮಾಡುವಲ್ಲಿ ಮತ್ತು ವಿತರಣೆಗಾಗಿ ಎಫ್‌ಸಿಐನಡಿ ಇದುವರಿಗೆ (ಜನವರಿ 1) ಸರಿಸುಮಾರು 171.70 ಲಕ್ಷ ಟನ್ ಗೋಧಿ ಸಂಗ್ರಹಿಸಿದೆ.

ಭಾರತವು 2021-22ರಲ್ಲಿ (ಜುಲೈ-ಜೂನ್) 106.84 ಮಿಲಿಯನ್ ಟನ್‌ ಗೋಧಿ ಉತ್ಪಾದಿಸುವ ಮೂಲಕ ಹಿಂದಿನ ವರ್ಷಕ್ಕಿಂತ (109.59 ಮಿ.ಟನ್‌) ಕಡಿಮೆ ಗೋಧಿ ಉತ್ಪಾದಿಸಿತ್ತು. ಇದರಿಂದಾಗಿ ಗೋಧಿ ಸಂಗ್ರಹಣೆಯಲ್ಲಿ ಇಳಿಕೆ ಆಗಿತ್ತು. ಸದ್ಯ ಅಗತ್ಯದಷ್ಟು ಗೋಧಿ ದಾಸ್ತಾನು ಖರೀದಿ ಮುಂದಿನ ಏಪ್ರೀಲ್ ನಿಂದ ನಡೆಯಲಿದೆ ಎಂದು ತಿಳಿದು ಬಂದಿದೆ.

English summary
Due to the Union Government decision to sell 30 lakh wheat, wheat flour price may be decreased to Rs 5-6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X