ಸಾಲಮನ್ನಾ ವಿಚಾರದಲ್ಲಿ ಗೋಲ್‌ಮಾಲ್ ಮಾಡಿದರೆ ಕಠಿಣ ಕ್ರಮ
ಬೆಂಗಳೂರು, ಜೂನ್ 02: ಹೊಸ ಸರ್ಕಾರದ ಮಹತ್ವಪೂರ್ಣ ಹೆಜ್ಜೆ 'ರೈತರ ಸಾಲಮನ್ನಾ'ಕ್ಕೆ ಸಮಯ ಹತ್ತಿರವಿದ್ದು, ಸಾಲಮನ್ನಾ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ತುರ್ತು ಗಮನ ಹರಿಸಲಾಗುತ್ತಿದೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 'ಸಾಲ ಮನ್ನಾ ಯೋಜನೆಯು ಪರಿಣಾಮಕಾರಿಯಾಗಿ ರೈತರಿಗೆ ತಲುಪಲೇ ಬೇಕು' ಎಂದು ಒತ್ತಿ ಹೇಳಿದ್ದಾರೆ.
ಸಾಲಮನ್ನಾ ವಿಷಯದಲ್ಲಿ ರೈತರಿಗೆ ವಂಚನೆ ಮಾಡುವುದಾಗಲಿ, ದಿಕ್ಕು ತಪ್ಪಿಸುವ ಕಾರ್ಯಗಳೇನಾದರೂ ಅಧಿಕಾರಿಗಳಿಂದ ಅಥವಾ ಬ್ಯಾಂಕ್‌ಗಳಿಂದ ಆದದ್ದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿಣಾತಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಜನರ ತೆರಿಗೆ ಹಣ ಸೂಕ್ತ ರೀತಿಯಲ್ಲಿ ಖರ್ಚಾಗಬೇಕು ಅದರಿಂದ ರಾಜ್ಯದ ಕಲ್ಯಾಣವಾಗಬೇಕು ಹಾಗಾಗಿಯೇ ಈ ಸಾಲಮನ್ನದ ನಿರ್ಣಯ ಕೈಗೊಳ್ಳಲಾಗಿದೆ. ಸಾಲಮನ್ನಾ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳದ್ದು ಮಹತ್ವದ ಪಾತ್ರ ಎಂದು ಅವರು ಹೇಳಿದರು.












Click it and Unblock the Notifications