ರೈತರಿಗೆ ವಂಚಿಸಿ ತಮಿಳುನಾಡಿಗೆ ನೀರು ಬಿಟ್ಟ ಸರಕಾರ

ಸಿಡಿಎಸ್, ಗಿರಿಜಾ, ವಾರಿಜಾ ಸೇರಿ ನಾಲ್ಕು ನಾಲೆಗಳಿಗೆ ಬುಧವಾರ ( ಏ 25) ಮಧ್ಯರಾತ್ರಿ ಕರ್ನಾಟಕದಿನ ತಮಿಳುನಾಡಿಗೆ ನೀರು ಹರಿದಿದೆ. ನೀರಿಲ್ಲದೆ ಸೊರುಗುತ್ತಿರುವ ರೈತರಿಗೆ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಜೀವನದಿಯಾಗಿರುವ ಕಾವೇರಿ ನೀರನ್ನು ತಮಿಳುನಾಡಿಗೆ ಕೊಟ್ಟ ಸರಕಾರದ ಕ್ರಮ ರೈತರ ಕೆಂಗಣ್ಣಿಗೆ ಗುರಿಯಾಗಿದೆ.
ಕರವೇ ಪ್ರತಿಭಟನೆ: ರಾಜ್ಯ ಸರಕಾರದ ಕ್ರಮ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ವಿವಿಧ ರೈತ ಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ. ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಗಿಳಿದು ಪ್ರತಿಭಟನೆಗೆ ತೊಡಗಿರುವ ಕಾರ್ಯಕರ್ತರು ಶ್ರೀರಂಗಪಟ್ಟಣದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಧರಣಿ ಕೂತಿದ್ದಾರೆ.
ತಮಿಳುನಾಡಿಗೆ ನೀರು ಬಿಟ್ಟಿಲ್ಲ, ಮಾಧ್ಯಮಗಳ ವರದಿ ತಪ್ಪು ಎಂದು ಕೆಆರ್ಎಸ್ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.












Click it and Unblock the Notifications