ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಂಗಿನಕಾಯಿ ಸಗಟು ದರ ಕುಸಿತ: ರೈತರಿಗೆ ಆರ್ಥಿಕ ಸಂಕಷ್ಟ, ಸರ್ಕಾರಕ್ಕೆ ಮನವಿ

|
Google Oneindia Kannada News

ಮೈಸೂರು, ಅಕ್ಟೋಬರ್ 24: ತೆಂಗಿನಕಾಯಿ ಬೆಲೆ ಸಗಟು ಮಾರುಕಟ್ಟೆಯಲ್ಲಿಇಳಿಕೆ ಕಂಡಿದೆ. ರಾಜ್ಯದ ಮೈಸೂರು ಮತ್ತು ಚಾಮರಾಜನಗರದ ಜಿಲ್ಲಾ ವ್ಯಾಪ್ತಿಯಲ್ಲಿ ಅಧಿಕ ಫಸಲು ಲಭ್ಯವಿದೆ. ಆದರೆ ಉಷ್ಣವಲಯದ ಬೆಳೆಯ ಕೃಷಿಯಲ್ಲಿ ತೊಡಗಿರುವ ರೈತರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ನಮ್ಮತ್ತ ಸರ್ಕಾರ ಗಮನಹರಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ಸಗಟು ಮಾರುಕಟ್ಟೆಯಲ್ಲಿ ತೆಂಗಿನಕಾಯಿಯ ಸಗಟು ದರ ವಾರಗಳ ಹಿಂದೆ ಕೇಜಿಗೆ 40 ಇದ್ದದ್ದು ರೂ. 20ಗೆ ಕುಸಿದಿದೆ. ಇದರು ರೈತರನ್ನು ಕಂಗಾಲಾಗಿಸಿದ್ದು, ಲಾಭದ ಆಸೆ ನಿರಾಸೆಯಾಗಿದೆ.

 Video; ತಲೆಗೆ ತೆಂಗಿನಕಾಯಿ ಒಡೆದುಕೊಳ್ಳುವ ಬಾಗಲಕೋಟೆ ವಿಶೇಷ ಜಾತ್ರೆ Video; ತಲೆಗೆ ತೆಂಗಿನಕಾಯಿ ಒಡೆದುಕೊಳ್ಳುವ ಬಾಗಲಕೋಟೆ ವಿಶೇಷ ಜಾತ್ರೆ

ಕೇವಲ ಚಾಮರಾಜನಗರ ಜಿಲ್ಲೆ ಒಂದರ ವ್ಯಾಪ್ತಿಯಲ್ಲೇ ರೈತರು 13,200 ಹೆಕ್ಟೇರ್‌ನಲ್ಲಿ ತೆಂಗು ಬೆಳೆಯಲಾಗುತ್ತಿದೆ. ಅಲ್ಲದೇ ಮೈಸೂರಲ್ಲಿ ಸುಮಾರು 16 ಸಾವಿರ ಹೆಕ್ಟೇರ್‌ನಲ್ಲಿ ತೆಂಗು ಬೆಳೆಯಲು ಮೀಸಲಿಡಲಾಗಿದೆ. ಎರಡು ಜಿಲ್ಲೆಗಳಾದ್ಯಂತ ಸಾವಿರಾರು ರೈತರಿಗೆ ಈ ಬೆಳೆಯ ಮೇಲೆ ಜೀವನ ಅವಲಂಬಿಸಿದ್ದಾರೆ. ಆದರೆ ಸದ್ಯಕ್ಕೆ ಕುಸಿತ ಕಂಡು ಸಗಟು ತೆಂಗಿನಕಾಯಿ ದರ ಇಳಿಕೆ ರೈತರು ಹಾಗೂ ತೆಂಗಿನ ಕಾಯಿ ಪಾಲುದಾರರ ಅಸಮಾಧಾನಕ್ಕೆ ಕಾರಣವಾಗಿದೆ.

ದೀಪಾವಳಿಗೆ ತೆಂಗಿನಕಾಯಿಗೆ ಬೇಡಿಕೆ ಹೆಚ್ಚು

ದೀಪಾವಳಿಗೆ ತೆಂಗಿನಕಾಯಿಗೆ ಬೇಡಿಕೆ ಹೆಚ್ಚು

ರೈತರ ಇನ್ನಿತರ ಕೃಷಿ ಉತ್ಪನ್ನಗಳಂತೆಯೇ ಸಗಟು ಬೆಲೆಯಲ್ಲಿನ ಏರಿಳಿತಗಳು ಚಿಲ್ಲರೆ ವೆಚ್ಚದ ಮೇಲೆ ಸ್ವಲ್ಪಮಟ್ಟಿಗೆ ಪ್ರಭಾವ ಬೀರುತ್ತವೆ. ಚಿಲ್ಲರೆ ಮಾರುಕಟ್ಟೆಯಲ್ಲಿ ತೆಂಗಿನ ದರವು ಅದರ ಸಗಟು ಬೆಲೆಯಲ್ಲಿನ ಕುಸಿತದಿಂದ ಪ್ರಭಾವಿತವಾಗಿಲ್ಲ. ಅಂದರೆ ಚಿಲ್ಲರೆ ಬೆಲೆ ಮಾತ್ರ ಯಥಾಸ್ಥಿತಿ ಎಂಬಂತಿದೆ. ಒಂದು ತೆಂಗಿನಕಾಯಿಗೆ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ 20ರೂ.ನಿಂದ 30 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಸದ್ಯ ದೀಪಾವಳಿ ಹಬ್ಬ ಎದುರಾಗಿದ್ದು, ಪೂಜೆ ಹಾಗೂ ಇನ್ನಿತರ ಕಾರಣಗಳಿಂದ ತೆಂಗಿನಕಾಯಿಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲದೇ ಹಬ್ಬದ ವೇಳೆ ಪ್ರಮುಖ ಅಡುಗೆಗೂ ಹೆಚ್ಚು ಬಳಸಲಾಗುತ್ತದೆ. ಹೀಗಾಗಿ ಸಗಟು ದರ ಇಳಿಕೆಯು ಈಗ ಚಿಲ್ಲರೆ ಬೆಲೆಯ ಮೇಲೆ ಉಂಟಾಗಿಲ್ಲ ಎನ್ನಲಾಗಿದೆ.

ಮಧ್ಯವರ್ತಿಗಳಿಂದ ಸಗಟು ದರ ಕುಸಿತ

ಮಧ್ಯವರ್ತಿಗಳಿಂದ ಸಗಟು ದರ ಕುಸಿತ

ಚಾಮರಾಜನಗರದ ತೆಂಗು ಬೆಳೆಗಾರರ ​​ಮಾರುಕಟ್ಟೆ ಒಕ್ಕೂಟ ತನ್ನ ಸಂಸ್ಕರಣಾ ಘಟಕಕ್ಕೆ ತೆಂಗಿನ ಬೆಳೆಯನ್ನು ರೈತರಿಂದ ಅತ್ಯಂತ ಸೀಮಿತ ಸಂಖ್ಯೆಯ ತೆಂಗಿನಕಾಯಿಗಳನ್ನು ಖರೀದಿಸಿದೆ. ಈ ಖರೀದಿ ಪ್ರಕ್ರಿಯೆ ವೇಳೆ ಮಾರಾಟ ಮಧ್ಯವರ್ತಿಗಳ ಕಾರಣದಿಂದ ಸಗಟು ಬೆಲೆ ಕುಸಿತಗೊಂಡಿದೆ ಎಂದು ತಿಳಿದು ಬಂದಿದೆ.

ಕರ್ನಾಟಕದ ಮೈಸೂರು, ಚಾಮರಾಜನಗರ ಮಾತ್ರವಲ್ಲದೆ ನೆರೆಯ ರಾಜ್ಯ ತಮಿಳುನಾಡು, ಆಂಧ್ರಪ್ರದೇಶ, ಕೇರಳದಲ್ಲಿ ಕೊಬ್ಬರಿ ಕೊಯ್ಲು ಹೆಚ್ಚುವರಿಯಾಗಿರುವುದೇ ತೆಂಗಿನ ಸಗಟು ಬೆಲೆ ಕುಸಿತಕ್ಕೆ ಕಾರಣ ಅಂತಳು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ರೈತರು ಆತಂಕ ಪಡಬೇಕಾಗಿಲ್ಲ. ಬೆಲೆ ಪುನಃ ಲಾಭದಾಯಕ ಹಂತದಲ್ಲಿ ಸ್ಥಿರಗೊಳ್ಳಲಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಟಿ.ರುದ್ರೇಶ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ತೆಂಗು ಬೆಳೆಗಾರರ ಮನವಿ

ಸರ್ಕಾರಕ್ಕೆ ತೆಂಗು ಬೆಳೆಗಾರರ ಮನವಿ

ಈ ಕುರಿತು ಪ್ರತಿಕ್ರಿಯಿಸಿ ಚಾಮರಾಜನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಮತ್ತು ತೆಂಗು ಬೆಳೆಗಾರ ಬಿ.ಕೆ.ರವಿಕುಮಾರ್ ಅವರು, ಸದ್ಯದ ಪರಿಸ್ಥಿತಿಯಲ್ಲಿ ತೋಟಗಾರಿಕೆ ಬೆಳೆಗಳ ಸಗಟು ಬೆಲೆ ಕುಸಿತ ಕಂಡಿದ್ದರಿಂದ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ರೈತರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಕೈಜೋಡಿಸಬೇಕು. ಎಂದು ಅವರು ಮನವಿ ಮಾಡಿದರು.

ತೆಂಗನ್ನು ಫಸಲ್ ಭಿಮಾ ಬೆಳೆವಿಮೆ ವ್ಯಾಪ್ತಿಗೆ ತನ್ನಿ

ತೆಂಗನ್ನು ಫಸಲ್ ಭಿಮಾ ಬೆಳೆವಿಮೆ ವ್ಯಾಪ್ತಿಗೆ ತನ್ನಿ

ಕೇಂದ್ರ ಸರ್ಕಾರವು ತೆಂಗಿನಕಾಯಿಗೆ ಕನಿಷ್ಠ ಬೆಂಬಲ ಬೆಲೆಯಾಗಿ ಕ್ವಿಂಟಾಲ್‌ಗೆ ರೂ. 2,860 ನಿಗದಿಪಡಿಸಿದೆ. ರಾಜ್ಯ ಸರ್ಕಾರವು ಈಗ ಕನಿಷ್ಠ ಬೆಲೆ ನೀಡುವ ಮೂಲಕ ಎಪಿಎಂಸಿಗಳು ರೈತರ ಬೆಳೆಗಳನ್ನು ಖರೀದಿಸುವಂತೆ ಕ್ರಮ ಕೈಗೊಳ್ಳಬೇಕು. ಇದರಿಂದ ರೈತರಿಗೆ ಆರ್ಥಿವಾಗಿ ಅನುಕೂಲವಾಗುತ್ತದೆ. ಅಲ್ಲದೇ ಮುಖ್ಯವಾಗಿ ಫಸಲ್ ಬಿಮಾ ಬೆಳೆ ವಿಮೆಯ ವ್ಯಾಪ್ತಿಗೆ ತೆಂಗಿನ ಕಾಯಿಯನ್ನು ಸೇರಿಸುವಂತೆ ಅವರು ಮನವಿ ಮಾಡಿದರು.

English summary
Decrease in wholesale price of coconut Financial backdown for farmers. Farmers appeal to government for take proper action
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X