ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕ ಬೆಲೆ ನಿರೀಕ್ಷೆಯಿಂದ ಹತ್ತಿ ಮಾರಾಟಕ್ಕೆ ತಡೆ, ರಫ್ತಿಗೆ ಹೊಡೆತ

|
Google Oneindia Kannada News

ಬೆಂಗಳೂರು, ನವೆಂಬರ್ 24: ರೈತರು ಉತ್ಪಾದಿತ ಹತ್ತಿಗೆ ಹೆಚ್ಚಿನ ಬೆಲೆ ಸಿಗಬಹುದು ಎಂಬ ಕಾರಣಕ್ಕೆ ಮಾರಾಟಕ್ಕೆ ಮುಂದಾಗಿಲ್ಲ. ಇದರಿಂದಾಗಿ ಭಾರತದಲ್ಲಿ ಹತ್ತಿ ಉತ್ಪಾದನೆ ಅಧಿಕವಾಗಿದ್ದರು ಸಹ ಹತ್ತಿಯನ್ನು ರಫ್ತು ಮಾಡಲಾಗದ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ.

ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಹತ್ತಿ ಉತ್ಪಾದನೆ ಏರಿಕೆಯಾಗಿದೆ. ಕಳೆದ ತಿಂಗಳೇ ರೈತರಿಗೆ ಹತ್ತಿ ಫಸಲು ಬಂದಿದೆ. ಆದರೆ ಮುಂಬರುವ ದಿನಗಳಲ್ಲಿ ಕಳೆದ ವರ್ಷದಂತೆ ಅತ್ಯಧಿಕ ಬೆಲೆ ಲಭ್ಯವಾಗಬಹುದು ಎಂಬ ಕಾರಣಕ್ಕೆ ಮಾರುಕಟ್ಟೆಗೆ ಹತ್ತಿಯನ್ನು ಬಿಡದೇ ತಮ್ಮಲ್ಲಿಯೇ ಇಟ್ಟುಕೊಂಡಿದ್ದಾರೆ. ಬೆಲೆಯ ಕಾರಣಕ್ಕೆ ಮಾರಾಟ ತಡೆ ಹಿಡಿದಿದ್ದಾರೆ.

ಬೆಂಗಳೂರು ಕಾರ್ಮಿಕ ಆಯುಕ್ತರಿಂದ ಅಮೆಜಾನ್‌ಗೆ ನೋಟಿಸ್‌ ಬೆಂಗಳೂರು ಕಾರ್ಮಿಕ ಆಯುಕ್ತರಿಂದ ಅಮೆಜಾನ್‌ಗೆ ನೋಟಿಸ್‌

ಈ ಕುರಿತು ಪ್ರತಿಕ್ರಿಯಿಸಿರುವ ಕಾಟನ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಸಿಎಐ) ಅಧ್ಯಕ್ಷ ಅತುಲ್ ಎಂಬುವವರು,

ರೈತರು ಕಳೆದ ಹಂಗಾಮಿನಲ್ಲಿ ತಾವು ಬೆಳೆದ ಹತ್ತಿಗೆ ಉತ್ತಮ ಬೆಲೆ ಪಡೆದಿದ್ದರು. ಆದರೆ ಈ ಭಾರಿ ಸ್ಥಳಿಯವಾಗಿ ಉತ್ಪಾದನೆ ಹೆಚ್ಚಾದರೆ ಜಾಗತಿಕ ಮಾರುಕಟ್ಟೆಗಳಲ್ಲಿ ಸಾಮಾನ್ಯವಾಗಿ ಬೆಲೆ ತುಸು ಇಳಿಯುತ್ತದೆ. ಕಳೆದ ವರ್ಷದಷ್ಟೇ ಅತ್ಯಧಿಕ ಬೆಲೆ ಸಿಗುವುದು ಕಷ್ಟ ಎಂದು ವಾಸ್ತವವನ್ನು ತಿಳಿಸಿದರು.

ಜೂನ್‌ನಲ್ಲಿ ಗರಿಷ್ಠ ಮಟ್ಟಕ್ಕೆ ಹತ್ತಿ ಬೆಲೆ ಏರಿತ್ತು

ಜೂನ್‌ನಲ್ಲಿ ಗರಿಷ್ಠ ಮಟ್ಟಕ್ಕೆ ಹತ್ತಿ ಬೆಲೆ ಏರಿತ್ತು

ಇದೇ ವರ್ಷ ಕಳೆದ ಜೂನ್‌ ತಿಂಗಳಿನಲ್ಲಿ ಹತ್ತಿ ಬೆಲೆಗಳು 170 ಕೆ.ಜಿಗೆ (1 ಬೇಲ್) 52,410 ರೂ.ನಷ್ಟು ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿತ್ತು. ಈ ಬೆಲೆಯು ಸಮರ್ಪಕ ಬೆಲೆ ಕೊರತೆಯನ್ನು ಶೇ. 40ರಷ್ಟನ್ನು ಸರಿಪಡಿಸಿದೆ. ಕಳೆದ ಹಂಗಾಮಿನಲ್ಲಿ ಕಚ್ಚಾ ಹತ್ತಿಯ ಪ್ರತಿ 100 ಕೆ.ಜಿಗೆ 8,000 ರೂ. ಮಾರಾಟ ಮಾಡಿದ್ದೇವೆ. ನಂತರ ಅದರ ಬೆಲೆ 13,000 ರೂ.ವರೆಗೆ ಹೆಚ್ಚಾಯಿತು.

10,000 ರೂ.ಗಿಂತ ಕಡಿಮೆ ಬೆಲೆಗೆ ಹತ್ತಿ ಮಾರುವುದಿಲ್ಲ

10,000 ರೂ.ಗಿಂತ ಕಡಿಮೆ ಬೆಲೆಗೆ ಹತ್ತಿ ಮಾರುವುದಿಲ್ಲ

ಈ ವರ್ಷ ಹಿಂದಿನ ವರ್ಷದಂತೆ ದುಡುಕಿ ಮಾರಾಟ ಮಾಡುವುದಿಲ್ಲ. ಈ ವರ್ಷ ರೈತರು ನಾವೇಲ್ಲ ಕಚ್ಚಾ ಹತ್ತಿಯನ್ನು 10,000 ರೂ.ಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದಿಲ್ಲ ಎಂದು ನಿರ್ಧರಿಸಿದ್ದೇವೆ. ಕಾರಣ ಕಳೆದ ವರ್ಷ ಪೈರು ಬರುತ್ತಿದ್ದಂತೆ ಮಾರಾಟ ಮಾಡಿದ್ದರಿಂದ 5,000ರೂ. ಹಣ ಕಳೆದುಕೊಂಡಿದ್ದೇವೆ ಎಂದು ದೇಶದ ಅಧಿಕ ಹತ್ತಿ ಉತ್ಪಾದಕ ಗುಜರಾತ್‌ ರಾಜ್ಯದ ಹತ್ತಿ ಉತ್ಪಾದಕ ಬಾಬುಲಾಲ್ ಪಟೇಲ್ ತಿಳಿಸಿದರು.

ಉತ್ಪಾದನೆಯ ಮೂರರ ಒಂದು ಭಾಗ ಮಾತ್ರ ಪೂರೈಕೆ

ಉತ್ಪಾದನೆಯ ಮೂರರ ಒಂದು ಭಾಗ ಮಾತ್ರ ಪೂರೈಕೆ

ಫಿಲಿಪ್ ಕ್ಯಾಪಿಟಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸರಕುಗಳ ಸಂಶೋಧನೆಯ ಮುಖ್ಯಸ್ಥರು ಈ ಬಗ್ಗೆ ಮಾತನಾಡಿ, ದೇಶದಲ್ಲಿರುವ ಅಧಿಕ ಹತ್ತಿ ಉತ್ಪಾದನೆ ನಡುವೆಯು ಸಾಮಾನ್ಯಕ್ಕಿಂತ ಸುಮಾರು ಮೂರನೇ ಒಂದರಷ್ಟು ಭಾಗ ಮಾತ್ರ ಪೂರೈಕೆ ಆಗುತ್ತಿದೆ. ರೈತರು ಕಳೆದ ಹಂಗಾಮಿನಲ್ಲಿ ಹತ್ತಿ ಕೊಯ್ಲಿನಿಂದ ಬಂದ ಅಧಿಕ ಹಣವನ್ನು ಪೈರು ಶೇಖರಣಾ ಸೌಲಭ್ಯಗಳ ನಿರ್ಮಾಣಕ್ಕೆ ಬಳಸಿದ್ದಾರೆ. ಬೆಲೆ ಇಳಿಕೆಯ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳನ್ನು ಕೊಠಡಿ, ಉಗ್ರಾಣಗಳಲ್ಲಿ ಶೇಖರಿಸಿಟ್ಟುಕೊಂಡು, ಬೆಲೆ ಏರಿಕೆಯಾಗಿ ತಮಗೆ ಸೂಕ್ತ ಎನಿಸಿದಾಗ ಮಾರುಕಟ್ಟೆ ಬಿಡಲು ಯೋಜಿಸಿದ್ದಾರೆ ಎಂದು ಹೇಳಿದರು.

ಈ ವರ್ಷ 70,000 ಬೇಲ್ ಹತ್ತಿ ರಫ್ತಿಗೆ ಒಪ್ಪಂದ

ಈ ವರ್ಷ 70,000 ಬೇಲ್ ಹತ್ತಿ ರಫ್ತಿಗೆ ಒಪ್ಪಂದ

ಪ್ರಸಕ್ತ 2022-23 ಋತುವಿನ ಆರಂಭದಲ್ಲಿ ಭಾರತವು 34.4 ಮಿಲಿಯನ್ ಹತ್ತಿಯನ್ನು ಉತ್ಪಾದಿಸಿದ್ದು ಇದು ಈ ಹಿಂದಿನ ವರ್ಷದಕ್ಕೂ ಹೋಲಿಕೆ ಮಾಡಿದರೆ ಶೇ. 12ರಷ್ಟು ಅಧಿಕ ಎನ್ನಬಹುದು. ಈ ಋತುವಿನಲ್ಲಿ ಭಾರತದ ವ್ಯಾಪಾರಿಗಳು ಈವರೆಗೆ ತಾವು 70,000 ಬೇಲ್ ಗಳನ್ನು ರಫ್ತು ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಒಪ್ಪಂದ ಮಾಡಿಕೊಂಡ 500,000 ಬೇಲ್‌ಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಜಾಗತಿಕ ವ್ಯಾಪಾರ ಸಂಸ್ಥೆ ಒಂದರ ವಿತರಕರು ತಿಳಿಸಿದ್ದಾರೆ.

English summary
Cotton production high in India farmers expectations of high prices hit is cotton exports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X