Get Updates
Get notified of breaking news, exclusive insights, and must-see stories!

ದಲಿತರೇತರರ ದನಗಳ ಹಾಲು ಕಪ್ಪಗಿರುತ್ತಾ ಸಿದ್ರಾಮಣ್ಣಾ?

ಬೆಂಗಳೂರು, ಜೂ 18: ಸಮಾಜದಲ್ಲಿ ಜಾತಿ ಎನ್ನುವ ವಿಷ ಬೀಜ ಬಿತ್ತಿ ರಾಜಕೀಯ ಲಾಭ ಎದುರು ನೋಡುವವರಿಗೆ ದನದ ಹಾಲಾದರೇನೂ, XXX ರಮ್ ಆದರೆ ಏನು? ವಿದ್ಯೆಯಲ್ಲಿ, ಉದ್ಯೋಗದಲ್ಲಿ ಮೀಸಲಾತಿ ಮಾಡಿ ಜಾತಿ ವಿಂಗಡಿಸಿದ್ದಾಯಿತು, ಈಗ ದನದ ಹಾಲಿನ ಸರದಿ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡು ದಿನಗಳ ಹಿಂದೆ ಒಂದು ಫರ್ಮಾನು ಹೊರಡಿಸಿದ್ದಾರೆ. ಅದೇನಪ್ಪಾಂದ್ರೆ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರು ಕೊಡುವ ಹಾಲಿಗೆ ಎರಡು ರೂಪಾಯಿ ಹೆಚ್ಚಿನ ಪ್ರೋತ್ಸಾಹ ಧನ ನೀಡುವುದಾಗಿ ಹೇಳಿ ತಾನು ಮತ್ತೊಮ್ಮೆ ಅಹಿಂದ ಪರ ಎಂದು ತೋರಿಸಿ ಕೊಟ್ಟಿದ್ದಾರೆ.

ರಾಜ್ಯದ ಆರು ಕೋಟಿ ಜನರ ದೊರೆಯಾಗಿರುವ ಮುಖ್ಯಮಂತ್ರಿಗಳ ಒಂದು ಪಂಗಡದ ಮೇಲಿನ ಅಗಾಧ ಪ್ರೀತಿ ಈಗ ಇತರ ರೈತಾಪಿ ವರ್ಗದ ಮುನಿಸಿಗೆ ಕಾರಣವಾಗಿದೆ. ಅಲ್ಲದೇ, ಕಾಂಗ್ರೆಸ್ ಪಕ್ಷದಲ್ಲೂ ಸಿಎಂ ನಿರ್ಧಾರ ಹಲವರಿಗೆ ಬೇಸರ ತಂದಿದೆ. (ಕಾಂಗ್ರೆಸ್ ವಿರುದ್ಧ ವೀರಶೈವ ಮಹಾಸಭಾ ಅಸಮಾಧಾನ)

ಸಮಾಜದಲ್ಲಿ ಎರಡು ವರ್ಗದವರಿಗೆ ಮಾತ್ರ ಹಾಲಿನ ಪ್ರೋತ್ಸಾಹ ಧನ ನೀಡಿದರೆ, ಸಮಾಜದಲ್ಲಿ ನಾವೇ ಜಾತಿ ಬೀಜ ಬಿತ್ತಿದಂತಾಗುತ್ತದೆ ಮತ್ತು ಇತರ ರೈತರ ಸಿಟ್ಟನ್ನು ಎದುರಿಸ ಬೇಕಾಗುತ್ತದೆ ಎನ್ನುವುದು ಕಾಂಗ್ರೆಸ್ ನಾಯಕರ ಅಭಿಪ್ರಾಯ. ವಿರೋಧ ಪಕ್ಷವಾದ ಬಿಜೆಪಿ ಸಿಎಂ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಎರಡು ರೂಪಾಯಿ ವಿಶೇಷ ಪ್ರೋತ್ಸಾಹ ಧನವನ್ನು ಇತರ ವರ್ಗದವರಿಗೂ ವಿಸ್ತರಿಸಿ ಎಂದು ಮನವಿ ಮಾಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಲು ಉತ್ಪಾದಕರಿಗೆ ಎರಡು ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಇದನ್ನು ಇತರ ಹಾಲು ಉತ್ಪಾದಕರಿಗೂ ವಿಸ್ತರಿಸಿ ಎಂದು ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿಗಳ ಈ ವಿವಾದಕಾರೀ ನಿರ್ಧಾರದಿಂದ ಸಾರ್ವಜನಿಕರಲ್ಲಿ ಮೂಡುವ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಸರಕಾರ ಉತ್ತರಿಸುತ್ತಾ?

ಇತರರು ಕೊಡುವ ಹಾಲು ಕಪ್ಪಗಿರುತ್ತಾ?

ಇತರರು ಕೊಡುವ ಹಾಲು ಕಪ್ಪಗಿರುತ್ತಾ?

ಪರಿಶಿಷ್ಟ ಜಾತಿ, ಪಂಗಡ ಮತ್ತು ಅಹಿಂದ ವರ್ಗದ ಹಾಲು ಉತ್ಪಾದಕರು ಕೊಡುವ ಹಾಲು ಬೆಳ್ಳಗಿದ್ದು ಇತರರು ಕೊಡುವ ಹಾಲು ಕಪ್ಪಗಿರುತ್ತಾ?

ಪೌಷ್ಠಿಕಾಂಶದಲ್ಲಿ ತೊಂದರೆಯಾಗುತ್ತಾ?

ಪೌಷ್ಠಿಕಾಂಶದಲ್ಲಿ ತೊಂದರೆಯಾಗುತ್ತಾ?

ಎರಡು ವರ್ಗದವರು ಹೊರತಾಗಿ ಇತರರು ನೀಡುವ ಹಾಲಿನಲ್ಲಿ ಪೌಷ್ಠಿಕಾಂಶದ ಕೊರತೆ ಏನಾದರೂ ಇರುತ್ತಾ? ಇದರಿಂದ ಜನರು ತೊಂದರೆ ಅನುಭವಿಸುವ ಸಾಧ್ಯತೆ ಇದೆಯಾ?

ಮೇವು

ಮೇವು

ದನ, ಕರು, ಎತ್ತುಗಳಿಗೆ ಜಾತಿ ಎನ್ನುವುದು ಇದೆಯಾ? ಪರಿಶಿಷ್ಟ ಜಾತಿ ಮತ್ತು ಪಂಗಡ ಅನ್ನುವುದು ಭೇದಬಾವ ಇದೆಯಾ? ಅವುಗಳು ತಿನ್ನುವ ಮೇವುಗಳಲ್ಲಿ ಏನಾದರೂ ವ್ಯತ್ಯಾಸ ಇದೆಯಾ?

ಇತರರು ನಿಮಗೆ ಮತ ನೀಡಲಿಲ್ವಾ?

ಇತರರು ನಿಮಗೆ ಮತ ನೀಡಲಿಲ್ವಾ?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಹೊರತಾಗಿ ಇತರರು ಕಾಂಗ್ರೆಸ್ಸಿಗೆ ಮತ ನೀಡಲಿಲ್ವಾ? ಇತರ ಹಾಲು ಉತ್ಪಾದಕರ ಮತ ನಿಮಗೆ ಸಿಗದೇ ಇದ್ದ ಪಕ್ಷದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕಷ್ಟವಾಗುತ್ತಿರಲಿಲ್ಲವೇ?

ಇದೇನು ಹೊಸತಲ್ಲ

ಇದೇನು ಹೊಸತಲ್ಲ

ಕೆಲವು ತಿಂಗಳ ಹಿಂದೆ ಮಕ್ಕಳ ಪ್ರವಾಸಕ್ಕೂ ಓಬಿಸಿ, ಮುಸ್ಲಿಮರು ಎನ್ನುವ ಟ್ಯಾಗ್ ಲೈನ್ ನೀಡಿದ್ರಿ. ರಾಜ್ಯಾದ್ಯಂತ ಇದಕ್ಕೆ ತೀವ್ರ ವಿರೋಧ ಹೆಚ್ಚಾದ ಹಿನ್ನಲೆಯಲ್ಲಿ ಎಲ್ಲರಿಗೂ ಈ ಸೌಲಭ್ಯವನ್ನು ವಿಸ್ತರಿಸಿದಿರಿ. ಸಮಾಜದಲ್ಲಿ ಜಾತಿ ವಿಷಬೀಜ ಬಿತ್ತುತ್ತಿರುವುವರು ಯಾರು?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+