ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂಗಾರು ರಸಗೊಬ್ಬರ ಸಬ್ಸಿಡಿಗೆ ಕೇಂದ್ರದ ಅನುಮೋದನೆ

|
Google Oneindia Kannada News

ನವದೆಹಲಿ, ನ.02: ಹಿಂಗಾರು ಋತುವಿನ ಫಾಸ್ಫಾಟಿಕ್ ಮತ್ತು ಪೊಟ್ಯಾಸಿಕ್ (ಪಿ&ಕೆ) ರಸಗೊಬ್ಬರಗಳಿಗೆ ಅಕ್ಟೋಬರ್ 1ರಿಂದ 2023 ಮಾರ್ಚ್ 31ರ ವರೆಗೆ 51,875 ಕೋಟಿ ರೂಪಾಯಿ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಫಾಸ್ಫಾಟಿಕ್ ಮತ್ತು ಪೊಟ್ಯಾಸಿಕ್ (ಪಿ&ಕೆ) ರಸಗೊಬ್ಬರಗಳ ವಿವಿಧ ಪೋಷಕಾಂಶಗಳಾದ ಸಾರಜನಕ(ಎನ್), ರಂಜಕ(ಪಿ), ಪೊಟ್ಯಾಷ್(ಕೆ), ಸಲ್ಫರ್(ಎಸ್) ಪೊಟ್ಯಾಷ್(ಪಿ)ಗೆ ಪ್ರತಿ ಕಿಲೋಗ್ರಾಂ ದರದಲ್ಲಿ ಪೋಷಕಾಂಶ ಆಧಾರಿತ ಸಬ್ಸಿಡಿ (ಎನ್‌ಬಿಎಸ್) ಒದಗಿಸುವ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಪ್ರಸ್ತಾವನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.

Krishi Mela 2022: ನ.3 ರಿಂದ ನಾಲ್ಕು ದಿನಗಳ ಕಾಲ ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳKrishi Mela 2022: ನ.3 ರಿಂದ ನಾಲ್ಕು ದಿನಗಳ ಕಾಲ ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳ

ಕೇಂದ್ರ ಸಚಿವ ಸಂಪುಟ ಸಭೆಯು 2022ರ ಹಿಂಗಾರು ಹಂಗಾಮಿಗೆ ಅಂದರೆ 2022 ಅಕ್ಟೋಬರ್ 01ರಿಂದ 2023 ಮಾರ್ಚ್ 31ರ ವರೆಗೆ ಅನ್ವಯವಾಗುವಂತೆ, ರಸಗೊಬ್ಬರಗಳ ಪೋಷಕಾಂಶ ಆಧರಿತ ಸಬ್ಸಿಡಿ ಮೊತ್ತ 51,875 ಕೋಟಿ ರೂ. ಒದಗಿಸಲು ಅನುಮೋದನೆ ನೀಡಿದೆ. ದೇಶೀಯ ರಸಗೊಬ್ಬರ ಕಾರ್ಖಾನೆಗಳಿಗೆ ಬೆಂಬಲ ನೀಡಲು ಕೇಂದ್ರ ಸರ್ಕಾರವು, ಸರಕು ಸಬ್ಸಿಡಿ ಮೂಲಕ ಈ ಸಹಾಯಧನ ಒದಗಿಸುತ್ತಿದೆ.

Cabinet approved Rs. 51,875 crore subsidy for fertilizers for Rabi season

2022-23ರ ಹಿಂಗಾರು ಹಂಗಾಮಿನಲ್ಲಿ ದೇಶದ ರೈತರಿಗೆ ರಾಸಾಯನಿಕಗಳು ಮತ್ತು ರಸಗೊಬ್ಬರಗಳು ಸಬ್ಸಿಡಿ ಹಾಗೂ ಕೈಗೆಟುಕುವ ಬೆಲೆಗೆ ಸಿಗುವಂತೆ ಮಾಡಲು ಇದು ಸಹಕಾರಿ. ಫಾಸ್ಫಾಟಿಕ್ ಮತ್ತು ಪೊಟ್ಯಾಸಿಕ್ (ಪಿ&ಕೆ) ರಸಗೊಬ್ಬರಗಳ ಸುಗಮ ಲಭ್ಯತೆ ದೊರೆಯುವುದರಿಂದ ಕೃಷಿ ವಲಯಕ್ಕೆ ಬೆಂಬಲ ದೊರೆಯಲಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರಗಳು ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಳಿತವನ್ನು ಹತ್ತಿಕ್ಕಲು ಸರ್ಕಾರದ ಈ ನಿರ್ಧಾರವು ಸಹಾಯಕವಾಗಲಿದೆ.

ಕೇಂದ್ರ ಸರ್ಕಾರವು ರಸಗೊಬ್ಬರ ತಯಾರಕರು, ಆಮದುದಾರರ ಮೂಲಕ ರೈತರಿಗೆ ಸಬ್ಸಿಡಿ ಬೆಲೆಯಲ್ಲಿ ಯೂರಿಯಾ ಮತ್ತು ಪಿ&ಕೆ ರಸಗೊಬ್ಬರಗಳ 25 ಶ್ರೇಣಿಗಳು ರೈತರಿಗೆ ಲಭ್ಯವಾಗುವಂತೆ ಮಾಡುತ್ತಿದೆ. ಪಿ ಅಂಡ್ ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಪೋಷಕಾಂಶ ಆಧರಿತ ಸಬ್ಸಿಡಿ(ಎನ್ ಬಿ ಎಸ್) ಯೋಜನೆ ಮೂಲಕ ರೈತಸ್ನೇಹಿ ವಿಧಾನಕ್ಕೆ ಅನುಗುಣವಾಗಿ, ಕೇಂದ್ರ ಸರ್ಕಾರವು ಕೈಗೆಟಕುವ ಬೆಲೆಗೆ ರೈತರಿಗೆ ಪಿ&ಕೆ ರಸಗೊಬ್ಬರಗಳ ದೊರೆಯುವಂತೆ ಮಾಡುತ್ತಿದೆ.

Cabinet approved Rs. 51,875 crore subsidy for fertilizers for Rabi season

ಯೂರಿಯಾ, ಡಿಎಪಿ, ಎಂಒಪಿ ಮತ್ತು ಸಲ್ಫರ್‌ ಮತ್ತಿತರ ರಸಗೊಬ್ಬರಗಳ ಅಂತಾರಾಷ್ಟ್ರೀಯ ಬೆಲೆ ಏರಿಳಿತದಿಂದ ರೈತರಿಗೆ ಆಗುವ ಹಣಕಾಸಿನ ಹೊರೆಯನ್ನು ತಗ್ಗಿಸಲು ಕೇಂದ್ರ ಸರ್ಕಾರವು, ಡಿಎಪಿ ಸೇರಿದಂತೆ ಪಿ & ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿ ಹೆಚ್ಚಿಸುವ ಮೂಲಕ ರೈತರಿಗೆ ಬೆಂಬಲ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅನುಮೋದಿತ ದರಗಳ ಪ್ರಕಾರ, ದೇಶೀಯ ರಸಗೊಬ್ಬರ ಕಂಪನಿಗಳಿಗೆ ಸಬ್ಸಿಡಿ ಬಿಡುಗಡೆ ಮಾಡಲಾಗುವುದು ಇದರಿಂದ ಅವರು ರೈತರಿಗೆ ಕೈಗೆಟುಕುವ ಬೆಲೆಗೆ ರಸಗೊಬ್ಬರ ಲಭ್ಯವಾಗುವಂತೆ ಮಾಡುತ್ತಾರೆ.

2022-23ರ ಹಿಂಗಾರು ಸಬ್ಸಿಡಿ. ರೂಪಾಯಿಗಳಲ್ಲಿ.

ಸಾರಜನಕ(ಎನ್)- 98.02

ರಂಜಕ(ಪಿ)- 66.93

ಪೊಟ್ಯಾಷ್(ಕೆ)- 23.65

ಸಲ್ಫರ್(ಎಸ್)- 6.12

English summary
India cabinet approved Rs. 51,875 crore subsidy for fertilizers for rabi season 2022. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X