Get Updates
Get notified of breaking news, exclusive insights, and must-see stories!

ದೇಶದಲ್ಲಿ ಮುಂಗಾರು ಚುರುಕು: ಭತ್ತ ಬಿತ್ತನೆ ಕೊರತೆ ನೀಗಲಿದೆ

ನವದೆಹಲಿ ಜುಲೈ 24: ದೇಶಾದ್ಯಂತ ಮುಂಗಾರು ಚುರುಕಾಗಿರುವುದರಿಂದ ಪೂರ್ವ ಭಾರತದ ಭಾಗದಲ್ಲಿ ಮುಂಗಾರು ಹಂಗಾಮಿನ ಆರಂಭದಲ್ಲಿ ಉಂಟಾಗಿದ್ದ ಖಾರಿಫ್ ಬೆಳೆ ಬಿತ್ತನೆಯಲ್ಲಿನ ಕೊರತೆ ನೀಗಲಿದೆ ಎಂದು ಕೇಂದ್ರ ಕೃಷಿ ಆಯುಕ್ತ ಎ.ಕೆ. ಸಿಂಗ್ ವಿಶ್ವಾಸ ಹೇಳಿದ್ದಾರೆ.

ಉತ್ತರ ಭಾರತದ ರಾಜ್ಯಗಳಾದ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಸಹ ಕೊಳವೆಬಾವಿಯಲ್ಲಿ ಸಿಗುವ ಲಭ್ಯ ನೀರಾವರಿ ಸಹಾಯದಿಂದ ಖಾರಿಫ್ ಬೆಳೆಯಾದ ಭತ್ತದ ಬಿತ್ತನೆ ಈ ಮೊದಲು ಸಾಮಾನ್ಯವಾಗಿತ್ತು, ಇದೀಗ ಆ ಪ್ರದೇಶಗಳಲ್ಲಿ ಉತ್ತಮ ಭಿತ್ತನೆ ಆಗಿದೆ ಎಂದರು.

ಕೇಂದ್ರ ಭತ್ತ ಬಿತ್ತನೆಯ ಇತ್ತೀಚಿನ ಅಂಕಿಸಂಖ್ಯೆಗಳ ಮಾಹಿತಿ ವರದಿ ಬಿಡುಗಡೆ ಮಾಡಿಲ್ಲ. ಜುಲೈ 17ರವರೆಗೆ ದೊರೆತ ಅಂಕಿ ಅಂಶಗಳು ಪ್ರಕಾರ, ಮುಂಗಾರು ಋತುವಿನಲ್ಲಿ ನಿರೀಕ್ಷಿತ 155.53 ಲಕ್ಷ ಹೆಕ್ಟೇರ್ ಪೈಕಿ ಈಗಾಗಲೇ 128.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತನೆ ಬಿತ್ತನೆ ಆಗಿದೆ. ಬಾಕಿ ಇರುವ ಶೇ.17.4ರಷ್ಟು ಬಿತ್ತನೆ ಹಂತ ಹಂತವಾಗಿ ಬಿತ್ತನೆ ಆಗಲಿದೆ.

ವಾಯುವ್ಯ ಭಾರತದಲ್ಲಿ ಮಳೆ ಕೊರತೆ

ವಾಯುವ್ಯ ಭಾರತದಲ್ಲಿ ಮಳೆ ಕೊರತೆ

ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಕೃಷಿ ಆಯುಕ್ತರಾದ ಎ.ಕೆ. ಸಿಂಗ್ ಅವರು, ನೈರುತ್ಯ ಮುಂಗಾರು ಆರಂಭವಾಗುವ ಜೂನ್‌ ತಿಂಗಳಲ್ಲೇ ಭತ್ತ ಬಿತ್ತನೆಯೂ ಆರಂಭವಾಗುತ್ತದೆ. ಪ್ರಸಕ್ತ ಮಾನ್ಸೂನ್ ಋತುವಿನ ಜೂನ್ ತಿಂಗಳ 1ರಿಂದ ಜುಲೈ 20ರ ಸಮಯದಲ್ಲಿ ದೇಶದಲ್ಲಿ ಬಿದ್ದ ಮಳೆಯ ಪ್ರಮಾಣ ವಾಡಿಕೆಗಿಂತ ಶೇ.11ರಷ್ಟು ಅಧಿಕವಾಗಿದೆ. ಇನ್ನು ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಮಾತ್ರ ವಾಡಿಕೆ ಮಳೆಗಿಂತ ಶೇ. 14ರಷ್ಟು ಕಡಿಮೆ ಮಳೆ ದಾಖಲಾಗಿದೆ. ಅದೇ ರೀತಿ ವಾಯುವ್ಯ ಭಾರತದಲ್ಲಿ ಶೇ. 9ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಳೆ ವರದಿ ತಿಳಿಸಿದೆ ಎಂದರು.

ನಿಗದಿತ ವೇಳೆ ಭತ್ತ ಬಿತ್ತನೆ ಚೇತರಿಕೆಯಾಗಲಿ

ನಿಗದಿತ ವೇಳೆ ಭತ್ತ ಬಿತ್ತನೆ ಚೇತರಿಕೆಯಾಗಲಿ

ಪ್ರಸಕ್ತ ಋತುವಿನಲ್ಲಿ ನಿರೀಕ್ಷಿತ ಭತ್ತ ಬಿತ್ತನೆ ಆಗಲಿ ಎಂದು ಹಾರೈಸುತ್ತೇನೆ. ನಿಗದಿತ ಸಮಯದಲ್ಲಿ ಬಿತ್ತನೆ ಚೇತರಿಕೆ ಕಾಣಸಲಿ. ಎಲ್ಲೆಡೆ ಮಳೆ ಆರಂಭವಾಗಿದ್ದು, ನಾಟಿ ಮಾಡಿದ ಭತ್ತ ಉಳಿಯಬೇಕು, ಬೆಳೆದು ನಿರೀಕ್ಷಿತ ಆದಾಯ ನೀಡಬೇಕಿದೆ. ಸದ್ಯ ಮುಂಗಾರು ಮಳೆ ದೇಶದಾದ್ಯಂತ ಪ್ರಗತಿಯಲ್ಲಿದೆ. ಕೆಲವೆಡೆ ಉತ್ತಮ ಮಳೆ ಆಗುವ ಮನ್ಸೂಚನೆಯೂ ಇದೆ. ಹೀಗಾಗಿ ಭತ್ತದ ಬಿತ್ತನೆಯು ಚೇತರಿಕೆ ಕಾಣಲು ಇನ್ನೂ ಸಮಯವಿದೆ ಅವರು ತಿಳಿಸಿದರು.

ದೇಶದಲ್ಲಿ ಅದರಲ್ಲೂ ಪೂರ್ವ ಮತ್ತು ಮಧ್ಯ ಹಾಗೂ ಉತ್ತರ ಪ್ರದೇಶ ಒಳಗೊಂಡಂತೆ ಪೂರ್ವ ರಾಜ್ಯಗಳಲ್ಲಿ ಭತ್ತದ ಬಿತ್ತನೆ ಪ್ರಮಾಣ ಸ್ವಲ ಕಡಿಮೆ ಆಗಿದೆ. ಸದ್ಯ ಆಯಾ ರಾಜ್ಯಗಳ ಪ್ರದೇಶಗಳಲ್ಲಿ ಮುಂಗಾರು ಚುರುಕಾಗಿರುವುದರಿಂದ ಭತ್ತ ಬಿತ್ತನೆ ಸುಧಾರಿಸಲಿದೆ.

ಮಳೆ ಕೊರತೆಯೇ ಭತ್ತ ಬಿತ್ತನೆ ಕೊರತೆಗೆ ಕಾರಣ

ಮಳೆ ಕೊರತೆಯೇ ಭತ್ತ ಬಿತ್ತನೆ ಕೊರತೆಗೆ ಕಾರಣ

ಜುಲೈ 15 ರವರೆಗಿನ ಅವಧಿಯು ದೇಶದ ಪೂರ್ವ ಭಾಗದ ಪ್ರದೇಶಗಳಲ್ಲಿ ಸಾಮಾನ್ಯ ಪ್ರಮಾಣದಲ್ಲಿ ಭತ್ತ ನಾಟಿ ಮಾಡಲಾಗುತ್ತದೆ. ಭತ್ತ ನಾಟಿಯಲ್ಲಿ ಕೆಲವೊಮ್ಮೆ ತುಸು ವಿಳಂಬವು ಆಗಿರುತ್ತದೆ. ಇದನ್ನು ಹೆಚ್ಚಿನ ಕೊರತೆ ಇಲ್ಲವೇ ವ್ಯತ್ಯಾಸ ಎಂದು ಪರಿಗಣಿಸಲು ಸಾಧ್ಯವಿಲ್ಲ. ಈವರೆಗೆ ಭತ್ತ ಬಿತ್ತನೆ ಕೊರತೆ ಉಂಟಾಗಲು ಮುಂಗಾರಿನ ಕೊರತೆಯೇ ಕಾರಣ ಎನ್ನಬಹುದು. ಆದರೆ ಮುಂದಿನ ದಿನಗಳಲ್ಲಿ ಈ ಕೊರತೆ ಹೀಗೆ ಇರದು. ಎಲ್ಲವು ಸರಿಹೋಗಲಿದೆ ಎಂದ ಅವರು ವಿವರಿಸಿದರು.

ಉತ್ತಮ ಮಳೆ ಆಗುತ್ತಿರುವ ಪೂರ್ವ ರಾಜ್ಯಗಳಲ್ಲಿ ಒಂದು ವೇಳೆ ರೈತರು ಭತ್ತ ನಾಟಿ ಮಾಡಲು ಸಾಧ್ಯವಾಗದಿದ್ದರೆ ಅವರಿಗೆ ಇತರ ಕೆಲವು ಆಯ್ಕೆಗಳಿವೆ. ರೈತರು ನೇರ ಬಿತ್ತನೆ ವಿಧಾನಕ್ಕೆ ಭತ್ತ ಬಿತ್ತಬಹುದು. ಇಲ್ಲವೇ ನಿತ್ಯಹರಿದ್ವರ್ಣ ಬೆಳೆಯಾದ ಜೋಳವನ್ನು ಬೆಳೆಯಬಹುದು ಎಂದು ಕೃಷಿ ಆಯುಕ್ತರು ಸಲಹೆ ನೀಡಿದ್ದಾರೆ. ಮುಂಗಾರು ವಿಳಂಬವಾದಲ್ಲಿ ಆರಂಭಿಕವಾಗಿ ರೈತರು ಸಾಸಿವೆ ಸೇರಿದಂತೆ ಇನ್ನಿತರ ಬೆಳೆ ಬೆಳೆಯಲು ಅವಕಾಗಳಿವೆ ಎಂದರು.

Recommended Video

    Tiger Crossing Road: ಹುಲಿಯನ್ನ ರಸ್ತೆ ದಾಟಿಸಿದ ಪೊಲೀಸ್ ಅಧಿಕಾರಿ | *India | OneIndia Kannada
    ಮಳೆ ಕೊರತೆ ಕಂಡ ಪ್ರದೇಶಗಳ ವಿವರ

    ಮಳೆ ಕೊರತೆ ಕಂಡ ಪ್ರದೇಶಗಳ ವಿವರ

    ಭಾರತೀಯ ಹವಾಮಾನ ಇಲಾಖೆ (ಐಎಂಡಿ) ವರದಿ ಪ್ರಕಾರ, ಜುಲೈ 20ರವರೆಗೆ ಉತ್ತರ ಪ್ರದೇಶದಲ್ಲಿ ಶೇ.68ರಷ್ಟು, ಪಶ್ಚಿಮ ಬಂಗಾಳದಲ್ಲಿ ಶೇ.27ರಷ್ಟು ಕಡಿಮೆ ಮಳೆ ಆಗಿದೆ. ಇನ್ನು ಜಾರ್ಖಂಡ್ ಶೇ.51ರಷ್ಟು ಮಳೆ ಕೊರತೆ ನೋಡಿದೆ. ಬಿಹಾರದಲ್ಲಿ ಶೇ.49, ಮಣಿಪುರದಲ್ಲಿ ಶೇ.40ರಷ್ಟು, ತ್ರಿಪುರಾದಲ್ಲಿ ಶೇ.30ರಷ್ಟು, ದೆಹಲಿ ಸಹ ಶೇ.22ರಷ್ಟು ಮಳೆ ಕೊರತೆ ಕಂಡ ಪ್ರದೇಶವಾಗಿದೆ. ಇನ್ನು ಮಿಜೋರಾಂನಲ್ಲಿ ಶೇ 21ರಷ್ಟು ಮಳೆ ಕಡಿಮೆ ದಾಖಲಾಗಿದೆ. ಅಲ್ಲದೇ ನಾಗಾಲ್ಯಾಂಡ್‌ (ಶೇ.18) ಹಾಗೂ ಉತ್ತರಾಖಂಡನಲ್ಲೂ (ಶೇ.16) ಮಳೆ ಕೊರತೆಯ ಪ್ರದೇಶಗಳಾಗಿವೆ. ಪಂಜಾಬ್, ಹರಿಯಾಣ ಹಾಗೂ ಉತ್ತರ ಪ್ರದೇಶಗಳ ರೈತರು ಮೂಲತಃ ಕೊಳವೆಬಾವಿ ನೀರಾವರಿ ಬಳಕೆ ಮಾಡಿದ್ದಾರೆ ಎಂದು ಕೃಷಿ ಆಯುಕ್ತರು ವಿವರಿಸಿದ್ದಾರೆ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+