ಬೆಂಗಳೂರಿಗೆ ಕಾಲಿಟ್ಟ ಖಾದ್ಯತೈಲ ಕಂಪನಿ ಬಿಎಲ್ ಆಗ್ರೊ

ಬೆಂಗಳೂರು, ಆಗಸ್ಟ್ 31: ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಖಾದ್ಯತೈಲ ಮತ್ತು ಆಹಾರ ಉತ್ಪನ್ನಗಳ ಕಂಪನಿ, ಉತ್ತರ ಭಾರತದ ಮೂಲದ ಬಿಎಲ್ ಆಗ್ರೊ ಲಿಮಿಟೆಡ್ ಈಗ ತನ್ನ ವ್ಯಾಪ್ತಿಯನ್ನು ದಕ್ಷಿಣ ಭಾರತಕ್ಕೆ ವಿಸ್ತರಿಸಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿನ ಕಂಪನಿಯು ಈ ವರ್ಷದ ಪ್ರಾರಂಭದಿಂದ ವಿಸ್ತರಣೆಯ ಪ್ರಯತ್ನದಲ್ಲಿದೆ ಮತ್ತು ದೆಹಲಿ, ರಾಜಸ್ಥಾನ, ಉತ್ತರಾಖಂಡ ಮತ್ತು ಈಗ ಕರ್ನಾಟಕಕ್ಕೆ ವಿಸ್ತರಿಸಿದೆ.

ರಾಜ್ಯದಲ್ಲಿ ಮಾರುಕಟ್ಟೆ ಬೇಡಿಕೆ ಮತ್ತು ಅವಕಾಶಗಳಿಂದ ಬೆಂಗಳೂರು ಕಂಪನಿಯು ತನ್ನ ವಿಸ್ತರಣೆ ಮಾಡುತ್ತಿರುವ ಮೊದಲ ನಗರವಾಗಿದೆ.

ಬಿಎಲ್ ಆಗ್ರೊ 5 ದಶಕಗಳ ಹಿಂದೆ ಪ್ರಾರಂಭವಾಗಿದ್ದು ಇಂದು 2500 ಕೋಟಿ ರೂ. ಮೌಲ್ಯದ ಕಂಪನಿಯಾಗಿದೆ. ಬೇಲ್ ಕೊಲ್ಹು' ಕಂಪನಿಯ ಸಾಸಿವೆ ಎಣ್ಣೆ ಬ್ರಾಂಡ್ ಆಗಿದ್ದು ಹಲವು ವರ್ಷಗಳ ಹಿಂದೆ ಬಿಡುಗಡೆಯಾದ ಮೊದಲನೆಯ ಉತ್ಪನ್ನವಾಗಿದೆ. ಬಿಎಲ್ ಆಗ್ರೊ ಅಂದಿನಿಂದ ಕ್ರಮೇಣವಾಗಿ 2018ರಲ್ಲಿ ತನ್ನ ನರಿಶ್' ಬ್ರಾಂಡ್ ಬಿಡುಗಡೆ ಮೂಲಕ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆಹಾರ ಉತ್ಪನ್ನಗಳ ಕಂಪನಿಯಾಗಿ ಬೆಳೆಯುತ್ತಿದೆ. ನರಿಶ್' ಉತ್ಪನ್ನಗಳು ಕಂಪನಿಯ ವೆಬ್‍ಸೈಟ್ ಮೂಲಕ ಹಾಗೂ ಎಕ್ಸ್ ಕ್ಲೂಸಿವ್ ಬ್ರಾಂಡ್ ಔಟ್‍ಲೆಟ್‍ಗಳು(ಇಬಿಒಗಳು) ಪ್ರಸ್ತುತ ತಾಣಗಳಲ್ಲಿ ವ್ಯಾಪ್ತಿ ಹೊಂದಿದೆ.

ಬೆಂಗಳೂರಿನಲ್ಲಿ ಕಂಪನಿಯು ಇಬ್ಬರು ಸೂಪರ್ ಸ್ಟಾಕಿಸ್ಟ್ ಗಳೊಂದಿಗೆ ಸಹಯೋಗ ಹೊಂದಿದೆ ಮತ್ತು ತನ್ನ ತಂಡವನ್ನು ರೀಟೇಲ್ ಮಾರುಕಟ್ಟೆಯಲ್ಲಿ ಸಿದ್ಧವಾಗಿ ಲಭ್ಯವಿರುವ ನರಿಶ್' ಉತ್ಪನ್ನಗಳನ್ನು ಪೂರೈಸಲು ನಿಯೋಜಿಸಿದೆ. ಕಂಪನಿಯು ತನ್ನ ವ್ಯಾಪ್ತಿಯನ್ನು ನಗರದ ಮಾಮ್-ಎನ್-ಪಾಪ್ ಮಳಿಗೆಗಳು, ಸೂಪರ್‍ಮಾರ್ಕೆಟ್‍ಗಳು ಮತ್ತು ಸಗಟು ವ್ಯಾಪಾರಿಗಳಿಗೆ ವಿಸ್ತರಿಸುವ ಉದ್ದೇಶ ಹೊಂದಿದೆ. ಈ ಉತ್ಪನ್ನಗಳನ್ನು ಕಂಪನಿಯ ವೆಬ್‍ಸೈಟ್ ಮೂಲಕವೂ ಕೊಳ್ಳಬಹುದು.

BL Agro Expands To Bengaluru; Eyes PAN India Expansion

ಬಿಎಲ್ ಆಗ್ರೊದ ವ್ಯವಸ್ಥಾಪಕ ನಿರ್ದೇಶಕ ಆಶಿಶ್ ಖಂಡೇಲ್‍ವಾಲ್, ''ಉತ್ತರ ಭಾರತದಲ್ಲಿ ಗ್ರಾಹಕರ ವಿಶ್ವಾಸವನ್ನು ಪಡೆದು ಉಳಿಸಿಕೊಂಡಿದ್ದೇವೆ, ಮತ್ತು ಇದು ಬೆಂಗಳೂರಿನಿಂದ ಪ್ರಾರಂಭಿಸಿ ದೇಶದ ದಕ್ಷಿಣ ಭಾರತಕ್ಕೆ ನಮ್ಮ ವಿಸ್ತರಣೆಯ ತಳಹದಿಯಾಗಿದೆ. ನಮ್ಮ ಆಹಾರೋತ್ಪನ್ನಗಳ ಬ್ರಾಂಡ್ ನರಿಶ್' ಸಮಗ್ರ ಪೌಷ್ಠಿಕತೆಯ ಭರವಸೆ ನೀಡುತ್ತಿದ್ದು ಇದು ನಮ್ಮ ಪ್ರಮುಖ ಸಾಸಿವೆ ಎಣ್ಣೆ ಬ್ರಾಂಡ್ ಬೇಲ್ ಕೊಲ್ಹು ಪರಂಪರೆಯ ಹಾಗೆ ಗುಡ್‍ವಿಲ್ ತಂದುಕೊಡಲಿದೆ'' ಎಂದರು.

Recommended Video

      ತಾಲಿಬಾನ್ ಕೈಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು: ಕಾಶ್ಮೀರದಲ್ಲಿರೋ ಪಾಕ್ ಉಗ್ರರಿಗೂ ರವಾನೆಯಾದ ವೆಪನ್ಸ್ | Oneindia

      ಬಿಎಲ್ ಆಗ್ರೊದ ರಾಷ್ಟ್ರೀಯ ಮುಖ್ಯಸ್ಥ ಸಂಜೀವ್ ತ್ರಿಪಾಠಿ, ''ಕರ್ನಾಟಕ ಮಾರುಕಟ್ಟೆಗೆ ನಮ್ಮ ಪ್ರವೇಶವು ಭಾರತದ ರಕ್ಷಿಣ ಭಾಗದಲ್ಲಿ ನಮ್ಮ ಹೆಜ್ಜೆ ಗುರುತು ವಿಸ್ತರಿಸುವ ಕಾರ್ಯತಂತ್ರದ ಭಾಗವಾಗಿದೆ. ಬಹಳ ಬೇಗನೆ ನಾವು ನಮ್ಮ ವ್ಯಾಪ್ತಿಯನ್ನು ಗೋವಾ ಮತ್ತು ಹೈದರಾಬಾದ್ ಮಾರುಕಟ್ಟೆಗಳಿಗೆ ವಿಸ್ತರಿಸಲಿದ್ದೇವೆ. ಆರೋಗ್ಯಕರ ಭಾರತ ಅಭಿಯಾನದ ಭಾಗವಾಗಿ ನಾವು ಭಾರತದಾದ್ಯಂತ ಲಭ್ಯವಿರುವ ಅತ್ಯುತ್ತಮ ಧಾನ್ಯಗಳನ್ನು ಅತ್ಯುತ್ತಮ ಹಾಗೂ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಮ್ಮ ಬ್ರಾಂಡ್ ನರಿಶ್ ಮತ್ತು ಬೇಲ್ ಕೊಲ್ಹುಗಳಲ್ಲಿ ನೀಡಲು ಬದ್ಧರಾಗಿದ್ದೇವೆ'' ಎಂದರು.

      ನರಿಶ್ ಆಟ್ಟಾ, ಅಕ್ಕಿ, ಬೇಳೆಗಳು, ತುಪ್ಪ ಮತ್ತು ಖಾದ್ಯತೈಲಗಳು, ಡ್ರೈ ಫ್ರೂಟ್ಸ್, ಪಾಪಡ್, ಉಪ್ಪಿನಕಾಯಿ, ಮುರಬ್ಬ, ಮಸಾಲೆಗಳು ಮತ್ತಿತರೆ ಉತ್ಪನ್ನಗಳನ್ನು ಹೊಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+