ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್, ಹರಿಯಾಣ, ಕೇರಳ, ಬಿಹಾರ ಸಂಪೂರ್ಣ ಬಂದ್: ಹಲವೆಡೆ ಮಿಶ್ರ ಪ್ರತಿಕ್ರಿಯೆ

|
Google Oneindia Kannada News

ಭಾರತ, ಸೆಪ್ಟೆಂಬರ್ 27: ರೈತ ವಿರೋಧಿ ಕೃಷಿ ಕಾಯ್ದೆ ವಿರೋಧಿಸಿ ಸೋಮವಾರ (ಸೆ.27)ರಂದು ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್‌ಗೆ ನೀಡಿದ್ದ ಕರೆಗೆ ಊಹೆಗೂ ನಿಲುಕದ ಪ್ರತಿಕ್ರಿಯೆ ದೊರೆತಿದೆ ಎಂದು ಮೋರ್ಚಾ ತಿಳಿಸಿದೆ.

ಸೋಮವಾರ ಬೆಳಿಗ್ಗೆ ಆರು ಗಂಟೆಯಿಂದ ದೇಶದ ವಿವಿಧ ಭಾಗಗಳಿಂದ ಖಾಲಿ ರಸ್ತೆಗಳು, ಮಾರುಕಟ್ಟೆಗಳ ಫೋಟೋಗಳು ನಿರಂತರವಾಗಿ ಬರುತ್ತಲೇ ಇವೆ. ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ವ್ಯಕ್ತವಾಗಿರುವ ಈ ಪ್ರತಿಕ್ರಿಯೆಯು ರೈತ ಹೋರಾಟಕ್ಕೆ ಬಹುದೊಡ್ಡ ಬೆಂಬಲವಾಗಿರುವುದಲ್ಲದೆ ಸರ್ಕಾರದ ವೈಪಲ್ಯವನ್ನು ಎತ್ತಿ ತೋರುತ್ತಿದೆ.

ಹೊಸದುರ್ಗದಲ್ಲಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿ ವಿಭಿನ್ನ ಪ್ರತಿಭಟನೆಹೊಸದುರ್ಗದಲ್ಲಿ ಮೋದಿ ಭಾವಚಿತ್ರಕ್ಕೆ ಈರುಳ್ಳಿ ಹಾರ ಹಾಕಿ ವಿಭಿನ್ನ ಪ್ರತಿಭಟನೆ

ಪಂಜಾಬ್, ಹರಿಯಾಣ, ಕೇರಳ, ಬಿಹಾರದಲ್ಲಿ ಸಂಪೂರ್ಣ ಬಂದ್ ಆಗಿರುವ ವರದಿ ಬಂದಿದ್ದು, ಅಲ್ಲೆಲ್ಲಾ ಶಾಲಾ ಕಾಲೇಜುಗಳು, ಅಂಗಡಿ- ಮಳಿಗೆಗಳು, ಸಂಚಾರ ಎಲ್ಲವೂ ಬಂದ್ ಆಗಿದೆ. ಅಂತೆಯೇ ರಾಜಸ್ತಾನ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿರುವ ಬಗ್ಗೆ ವರದಿಗಳು ಬಂದಿವೆ. ಬೇರೆ ರಾಜ್ಯಗಳಿಂದ ಇನ್ನಷ್ಟೇ ವರದಿ ಬರಬೇಕಿದೆ.

Bharat bandh Successful in Some States and evokes mixed response in Many States

ದೇಶದ ವಿವಿಧ ಭಾಗಗಳಲ್ಲಿ ರೈತ ಸಂಘಟನೆಗಳು ವಿವಿಧ ಸಂಘ ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳೊಂದಿಗೂ ಸಹ ಚಳವಳಿ ನಡೆಸಿವೆ. ಅನೇಕ ರಾಜ್ಯಗಳಲ್ಲಿ ಖಾಸಗಿ ಕಂಪನಿಗಳು, ರಸ್ತೆ ಸಂಚಾರ ಹಾಗೂ ರೈಲು ಸಂಚಾರ ಸ್ಥಗಿತವಾಗಿರುವ ವರದಿಗಳು ಬಂದಿವೆ.

ಇಡೀ ದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿರುವ ಬಗ್ಗೆ ಈವರೆಗೆ ವರದಿಯಾಗಿಲ್ಲ. ಈ ಬಂದ್ ಸ್ವಯಂಪ್ರೇರಿತವಾಗಿ ನಡೆಯಬೇಕೆಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿತ್ತು. ಈಗಲೂ ಅದನ್ನೇ ಹೇಳುತ್ತಿದ್ದೇವೆ. ಎಲ್ಲಿಯೂ ಸಹ ಒತ್ತಾಯಪೂರ್ವಕವಾದ ಬಂದ್ ಮಾಡಿಸುವ ಪ್ರಮೇಯವೇ ಇಲ್ಲ. ಅಷ್ಟೇ ಅಲ್ಲದೆ ಯಾವುದೇ ತುರ್ತು ಸಂದರ್ಭಗಳಿಗೆ ಮತ್ತು ಅಗತ್ಯ ಸೇವಾ ಸೌಲಭ್ಯಗಳನ್ನು ತಡೆಹಿಡುಯುವಂತಿಲ್ಲವೆಂದು ಸಂಯುಕ್ತ ಕಿಸಾನ್ ಮೋರ್ಚಾ ಮತ್ತೊಮ್ಮೆ ಹೇಳುತ್ತಿದೆ ಎಂದು ಭಾರತ್ ಬಂದ್‌ನ ತನ್ನ ಮೊದಲ ಪ್ರಕಟಣೆಯಲ್ಲಿ ತಿಳಿಸಿದೆ.

Bharat bandh Successful in Some States and evokes mixed response in Many States

ಕರ್ನಾಟಕದಲ್ಲಿಯೂ ಮಿಶ್ರ ಪ್ರತಿಕ್ರಿಯೆ
ಕರ್ನಾಟಕದಲ್ಲಿ ಭಾರತ್ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರೈತರು ಹಾಗೂ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಅನೇಕ ಕಾರ್ಮಿಕರು, ಕಾರ್ಯಕರ್ತರು ಭಾರತ್ ಬಂದ್‌ನಲ್ಲಿ ಭಾಗವಹಿಸಿದ್ದರು.

ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿಯೂ ರೈತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಬೆಂಗಳೂರಿನಲ್ಲಿ ಪ್ರತಿಭಟನೆಯ ಕಾವು ಏರುತ್ತಿದ್ದಂತೆ ರೈತ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಬಸ್ ಸಂಚಾರ ತಡೆಯಲು ಯತ್ನಿಸಿದ ಕನ್ನಡ ಪರಸಂಘಟನೆಗಳ ಮುಂಖಡರಾದ ಸಾ.ರಾ. ಗೋವಿಂದು, ಶಿವರಾಮೇಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೌರ್ಯ ವೃತ್ತದ ಬಳಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸಹಿತ ಹಲವು ಪ್ರತಿಭಟನೆಕಾರರನ್ನು ಪೊಲೀಸರು ಕರೆದೊಯ್ದಿದ್ದಾರೆ.

Bharat bandh Successful in Some States and evokes mixed response in Many States

ಸಾ.ರಾ. ಗೋವಿಂದು, ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಸೇರಿದಂತೆ ಹಲವು ಕಾರ್ಯಕರ್ತರು ಮತ್ತು ರೈತ ಪ್ರತಿನಿಧಿಗಳು ಮೆಜೆಸ್ಟಿಕ್ ಬಳಿಯ ಭಾಗ್ಯ ವಿನಾಯಕ ದೇವಸ್ಥಾನದ ಬಳಿ ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ಬಸ್ ಸಂಚಾರ ತಡೆಯುವಂತಹ ಪ್ರಯತ್ನವನ್ನೂ ಮಾಡಲಾಯಿತು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಸ್‌ಗಳಲ್ಲಿ ಕರೆದೊಯ್ದರು.

English summary
Bharat Bandh call given by farmers protesting against the Narendra Modi government’s three farm laws has evoked mixed response in many states and successful in some state. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X