ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರಿಗೆ ಶೀಘ್ರವೇ ಬೆಳೆವಿಮೆ ಪರಿಹಾರ ನೀಡಲು ಬಿ.ಸಿ.ಪಾಟೀಲ್ ಸೂಚನೆ

|
Google Oneindia Kannada News

ಬೆಂಗಳೂರು, ನವೆಂಬರ್ 12: ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಪರಿಹಾರ ಸಲ್ಲಿಸಿರುವ ರೈತರಿಗೆ ಪ್ರಸಕ್ತ 2022-2023 ಸಾಲಿನ ಬೆಳೆವಿಮೆ ಪರಿಹಾರವನ್ನು ಶೀಘ್ರವೇ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದ್ದಾರೆ.

ಬೆಳೆವಿಮೆ ಪರಿಹಾರ ಇತ್ಯರ್ಥ ಕುರಿತು ಅಧಿಕಾರಿಗಳ ಜೊತೆಗೆ ಗುರುವಾರ ಸಭೆ ನಡೆಸಿದ ಬಿ.ಸಿ.ಪಾಟೀಲ್ ಪ್ರಸಕ್ತ ಸಾಲಿನಲ್ಲಿ ಬೆಳೆ ವಿಮೆ ಪರಿಹಾರವನ್ನು ಇತ್ಯರ್ಥಪಡಿಸುವ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈಗಾಗಲೇ ಬೆಳೆ ವಿಮೆ ಮಾಡಿಸಿರುವ ರೈತರು ಪೂರ್ವ ಮುಂಗಾರು ಹಂಗಾಮಿನ ಪರಿಹಾರಕ್ಕಾಗಿ ಕಾದು ಕುಳಿತಿದ್ದಾರೆ. ಪರಿಹಾರ ಕ್ರಮದ ಸಲುವಾಗಿ ವಿಮಾ ಕಂಪನಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿರಿ ಎಂದು ಸಚಿವರು ತಾಕೀತು ಮಾಡಿದರು.

ಪರಿಹಾರ ಪಡೆಯುವ ರೈತರ ಪೈಕಿ ಆಧಾರ್ ಕಾರ್ಡ್ ಲಿಂಕ್‌ ಆಗದವರು ಹೆಚ್ಚಿದ್ದಾರೆ. ಕೂಡಲೇ ರೈತರು ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಬೆಳೆವಿಮೆಗೆ ಲಿಂಕ್ ಆಗಿದೆಯೆ ಇಲ್ಲವೆಂದು ಪರಿಶೀಲಿಸಿಕೊಳ್ಳಬೇಕು. ಆಧಾರ್‌ ಇನ್ನಿತರ ತಿದ್ದುಪಡಿ ಇದ್ದರೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು. ಜೊತೆಗೆ ಸಲ್ಲಿಸಲಾದ ದಾಖಲೆಗಳು, ಪಾಲಿಸಬೇಕಾದ ನಿಯಮಗಳು ಸರಿಯಾಗಿವೆಯೇ ಎಂದು ರೈತರು ಗಮನವಹಿಸಬೇಕು ಎಂದರು.

ವಿಮಾ ಕಂಪನಿಗಳಿಗೆ ಸಚಿವರ ಸಲಹೆ

ವಿಮಾ ಕಂಪನಿಗಳಿಗೆ ಸಚಿವರ ಸಲಹೆ

ವಿಮಾ ಕಂಪನಿಗಳು ನಿಯಮಬದ್ಧವಾಗಿ ಬೆಳೆವಿಮೆ ಪರಿಹಾರ ಒದಗಿಸುವಲ್ಲಿ ನ್ಯಾಯಯುತವಾಗಿ ಕೆಲಸ ಮಾಡಬೇಕು. ದಾಖಲೆ, ಆಧಾರಗಳಲ್ಲಿ ಲೋಪದೋಷಗಳು ಕಂಡು ಬಂದರೆ ಸುಮ್ಮನಿರದೇ ಕೂಡಲೇ ಅಧಿಕಾರಿಗಳು, ರೈತರ ಬಳಿಕ ಅಗತ್ಯ ಮಾಹಿತಿ ಪಡೆದು ಸರಿಪಡಿಸಿಕೊಳ್ಳಬೇಕು. ರೈತರಿಗೆ ಬೆಳೆ ವಿಮೆ ಪರಿಹಾರ ನೀಡುವಲ್ಲಿ ಕೃಷಿ ಇಲಾಖೆ ಜೊತೆಗೆ ಕಂಪನಿಗಳು ಕೈ ಜೋಡಿಸುವಂತೆ ಬಿ.ಸಿ.ಪಾಟೀಲ್ ಸೂಚಿಸಿದರು.

ಶೀಘ್ರವೇ ಪರಿಹಾರ ಕೊಡುವ ಭರವಸೆ

ಶೀಘ್ರವೇ ಪರಿಹಾರ ಕೊಡುವ ಭರವಸೆ

ರೈತರು ಈ ವರ್ಷ ಬೆಳೆ ವಿಮೆ ಪರಿಹಾರ ಯಾವಾಗ ಸಿಗಲಿದೆ? ಎಂದು ಕಾತರದಿಂದ ಕಾಯುತ್ತಿದ್ದಾರೆ. ಈ ಬಗ್ಗೆ ಅವರಿಗೆ ಉತ್ತರ ಸಿಕ್ಕಿಲ್ಲ. ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಕಳಸದ, ಆಯುಕ್ತ ಶರತ್ ಪಿ., ಬೆಳೆ ವಿಮೆ ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಸೇರಿದಂತೆ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಶೀಘ್ರವೇ ಬೆಳೆ ವಿಮೆ ನೀಡುವುದಾಗಿ ಸಚಿವರಿಗೆ ಭರವಸೆ ನೀಡಿದರು.

ಬೆಳೆವಿಮೆಯ ಮೊತ್ತವೆಷ್ಟು?, ಪರಿಶೀಲನೆ ಹೇಗೆ?

ಬೆಳೆವಿಮೆಯ ಮೊತ್ತವೆಷ್ಟು?, ಪರಿಶೀಲನೆ ಹೇಗೆ?

ರೈತರು ಎಷ್ಟು ಬೆಳೆ ವಿಮೆ ಬರುತ್ತದೆ ಎಂದು ಯಾವಾಗ ಬರುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ಹೊಂದಿದ್ದಾರೆ. ನಿಮಗೆ ಬೆಳೆವಿಮೆ ಎಷ್ಟು ಬರಲಿದೆ ಎಂದು ತಿಳಿಯಲು ಸರ್ಕಾರಕದ ಅಧಿಕೃತ ವೆಬ್‌ಸೈಟ್‌ https://www.samrakshane.karnataka.gov.in/ ಗೆ ಭೇಟಿ ನೀಡಿ ವರ್ಷ ಆಯ್ಕೆ, ಬೆಳೆಯ ಋತು ಮೇಲೆ ಕ್ಲಿಕ್‌ ಮಾಡಬೆಕು. ನಂತರ ಫಾರ್ಮರ್‌ ಕಾಲಂನಲ್ಲಿನ ಬೆಳೆ ವಿಮೆ ಪರಿಹಾರದ ವಿವರದ ಮೇಲೆ ಟ್ಯಾಪ್‌ ಮಾಡಬೇಕು. ನಂತರ ನಿಮ್ಮ ಜಿಲ್ಲೆ, ತಾಲೂಕು, ಹೂಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಸರ್ವೇ ನಂಬರ್ ನಮೂದಿಸಬೇಕು.

ಮಾಹಿತಿಗೆ ಸಹಾಯವಾಣಿಗೆ ಕರೆ ಮಾಡಿ

ಮಾಹಿತಿಗೆ ಸಹಾಯವಾಣಿಗೆ ಕರೆ ಮಾಡಿ

ನಂತರ ನಿಮ್ಮ ಸರ್ವೇನಂಬರ್‌ ಎಲ್ಲ ಹಿಸ್ಸಾ ನಂಬರ್‌ಗಳು ಬರುತ್ತವೆ. ನಿಮ್ಮ ಸರ್ವೇ ನಂಬರ್ ಮೇಲೆ ಕ್ಲಿಕ್ ಮಾಡಿದರೆ ನೀವು ಬೆಳೆವಿಮೆ ಮಾಡಿಸಿದ್ದರೆ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ನಂತರ ನೀವು ಅಪಿಕೇಷನ್‌ ನಂಬರ್ ಮೇಲೆ ಕ್ಲಿಕ್ ಮಾಡಿದರೆ ನೀವು ಎಷ್ಟು ಬೆಳೆವಿಮೆ ಕಟ್ಟಿದ್ದೀರಿ, ಅದಕ್ಕೆ ಎಷ್ಟು ಬೆಳೆ ವಿಮೆ ಬರುತ್ತದೆ ಎಂಬ ಸಂಪೂರ್ಣ ಮಾಹಿತಿ ಸಿಗುತ್ತದೆ.


ರೈತರು ಹೆಚ್ಚಿನ ಮಾಹಿತಿಗೆ ಯೋಜನೆಯ ವೆಬ್‌ಸೈಟ್‌ https://pmfby.gov.in ಭೇಟಿ ಕೊಡಿ. ಬೆಳೆ ವಿಮೆ ಮಾಹಿತಿ ಪಡೆಯಲು ಹಾಗೂ ನಿಮ್ಮ ಜಿಲ್ಲೆಯ ಬೆಳೆ ವಿಮಾ ಕಂಪನಿಯ ಸಿಬ್ಬಂದಿ ಮೊಬೈಲ್‌ ನಂಬರ್ ಬೇಕಿದ್ದಲ್ಲಿ ಸಹಾಯವಾಣಿ 1800180151ಗೆ ಕರೆ ಮಾಡಬಹುದು.

English summary
Agriculture minister BC Patil instructed to give crop insurance compensation to the farmers very soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X