Get Updates
Get notified of breaking news, exclusive insights, and must-see stories!

Arecanut Price: ರೈತರಲ್ಲಿ ಖುಷಿ ತಂದ ಅಡಿಕೆ ಧಾರಣೆ; ಕೊಬ್ಬರಿ ಬೆಲೆ ಹೇಗಿದೆ ತಿಳಿಯಿರಿ

ಹಲವು ದಿನಗಳಿಂದ ಏರಿಕೆ ಕಾಣುತ್ತಿರುವ ಅಡಿಕೆ ಬೆಲೆ ಸದ್ಯ ಸ್ಥಿರತೆ ಕಾಯ್ದುಕೊಂಡಿದೆ. ರಾಶಿ ಅಡಿಕೆ ಬೆಲೆ ಕ್ವಿಂಟಾಲ್‌ಗೆ ₹55,000 ದವರೆಗೆ ಏರಿಕೆ ಕಂಡಿದ್ದು, ₹60,000 ತಲುಪುವ ನಿರೀಕ್ಷೆ ಮೂಡಿಸಿತ್ತು, ಆದರೆ ಬೆಲೆ ಅಲ್ಪ ಇಳಿಕೆ ಕಂಡು ₹53,000 ದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಇನ್ನೂ ಕೆಲವೇ ದಿನಗಳಲ್ಲಿ 55 ಸಾವಿರ ದಾಟುವ ಸಾಧ್ಯತೆ ಕೂಡ ಇದೆ ಎಂದು ಅಡಿಕೆ ಬೆಳೆಗಾರರು ನಿರೀಕ್ಷೆ ಮಾಡಿದ್ದಾರೆ.

ಶುಕ್ರವಾರ ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ ₹48,012 ಇದ್ದರೆ, ಗರಿಷ್ಠ ₹53,321 ಆಗಿತ್ತು. ಚಿತ್ರದುರ್ಗ ಮಾರುಕಟ್ಟಯಲ್ಲಿ ಕೂಡ ಅಡಿಕೆ ಬೆಲೆ ಗರಿಷ್ಠ ₹52,500 ಆಗಿತ್ತು. ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆ ಎನಿಸಿಕೊಂಡಿರುವ ಶಿವಮೊಗ್ಗದಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ ₹32,009 ಇದ್ದರೆ, ಗರಿಷ್ಠ ₹53,029 ಆಗಿತ್ತು.

Arecanut prices on the rise bring happiness to farmers Check copra prices

ಶಿವಮೊಗ್ಗ ಅಡಿಕೆ ಮಾರುಕಟ್ಟೆಯಲ್ಲಿ ಸರಕು ಅಡಿಕೆ ಬೆಲೆ ಕನಿಷ್ಠ ₹51,000 ಇದ್ದರೆ ಗರಿಷ್ಠ ₹85,700 ಆಗಿದೆ. ಸಿದ್ದಾಪುರ ಮಾರುಕಟ್ಟೆಯಲ್ಲಿ ಬಿಳೆ ಗೋಟು ಬೆಲೆ ಕನಿಷ್ಠ ₹27,319 ಇದ್ದರೆ ಗರಿಷ್ಠ ₹30,940 ಆಗಿತ್ತು.

ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ (ಕ್ವಿಂಟಲ್‌ಗೆ)

ಕ್ರಮ
ಸಂಖ್ಯೆ
ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಬಂಟ್ವಾಳ ಕೋಕಾ ₹18,000 ₹28,500 ₹23,500
2 ಬಂಟ್ವಾಳ ಹೊಸ ವೆರೈಟಿ ₹28,500 ₹38,000 ₹34,500
3 ಚನ್ನಗಿರಿ ರಾಶಿ ₹48,012 ₹53,321 ₹51,207
4 ಚಿತ್ರದುರ್ಗ ಅಪಿ ₹52,600 ₹53,000 ₹52,800
5 ಚಿತ್ರದುರ್ಗ ಬೆಟ್ಟೆ ₹36,700 ₹37,100 ₹36,900
6 ಚಿತ್ರದುರ್ಗ ರಾಶಿ ₹52,100 ₹52,500 ₹52,300
7 ದಾವಣಗೆರೆ ರಾಶಿ ₹51,159 ₹51,159 ₹51,159
8 ಕಾರ್ಕಳ ಹೊಸ ವೆರೈಟಿ ₹25,000 ₹38,000 ₹30,000
9 ಕುಮಟಾ ಚಿಪ್ಪು ₹25,191 ₹31,611 ₹29,869
10 ಕುಮಟಾ ಹಣ್ಣು ₹32,300 ₹37,679 ₹36,199
11 ಸಾಗರ ಸಿಪ್ಪೆಗೋಟು ₹17,010 ₹20,299 ₹19,599
12 ಸಾಗರ ಬಿಳೆ ಗೊಟು ₹22,989 ₹29,625 ₹28,609
13 ಸಾಗರ ರಾಶಿ ₹36,199 ₹52,799 ₹51,699
14 ಶಿವಮೊಗ್ಗ ಸರಕು ₹51,000 ₹85,700 ₹65,300
15 ಶಿವಮೊಗ್ಗ ಗೊರಬಲು ₹18,900 ₹38,099 ₹34,099
16 ಶಿವಮೊಗ್ಗ ರಾಶಿ ₹32,009 ₹53,029 ₹51,759
17 ಸಿದ್ದಾಪುರ ರಾಶಿ ₹43,999 ₹48,799 ₹48,359
18 ಶಿರಸಿ ರಾಶಿ ₹46,409 ₹48,699 ₹47,190
19 ಬಂಟ್ವಾಳ ಹೊಸ ವೆರೈಟಿ ₹28,500 ₹37,500 ₹34,000
20 ಭದ್ರಾವತಿ ರಾಶಿ ₹35,199 ₹52,749 ₹50,306

ಕೊಬ್ಬರಿ ಧಾರಣೆ ಮಾಹಿತಿ

ರಾಜ್ಯದಲ್ಲಿ ಕೊಬ್ಬರಿ ಬೆಲೆ ಮಾತ್ರ ಏರಿಕೆ ಕಾಣುತ್ತಿಲ್ಲ. ಅರಸೀಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ ₹7,800 ಇದ್ದರೆ ಗರಿಷ್ಠ ₹8,450 ಆಗಿತ್ತು. ತಿಪಟೂರು ಮಾರುಕಟ್ಟೆಯಲ್ಲಿ ಕನಿಷ್ಠ ₹8,100 ಇದ್ದರೆ ಗರಿಷ್ಠ ಧಾರಣೆ ₹9,400 ಆಗಿದೆ.

ಸದ್ಯ 8000-9000 ಆಸುಪಾಸಿನಲ್ಲಿರುವ ಕೊಬ್ಬರಿ ಬೆಲೆ ಮುಂದಿನ ದಿನಗಳಲ್ಲಾದರೂ ಏರಿಕೆಯಾಗುವ ವಿಶ್ವಾಸದಲ್ಲಿದ್ದಾರೆ ತೆಂಗು ಬೆಳೆಗಾರರು.

ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ (ಕ್ವಿಂಟಲ್‌ಗೆ)

ಕ್ರಮ
ಸಂಖ್ಯೆ
ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಅರಸೀಕೆರೆ ಬೇರೆ ₹7,800 ₹8,450 ₹7,800
2 ಮಳವಳ್ಳಿ ಕೊಬ್ಬರಿ ₹7,700 ₹8,000 ₹8,000
3 ತಿಪಟೂರು ಕೊಬ್ಬರಿ ₹8,100 ₹9,400 ₹8,711
4 ಮಧುಗಿರಿ ಕೊಬ್ಬರಿ ₹7,500 ₹9,000 ₹8,500
5 ನಾಗಮಂಗಲ ಸಣ್ಣ ₹6,400 ₹6,400 ₹6,400
6 ಕೆ.ಆರ್.ಪೇಟೆ ಬೇರೆ ₹9,550 ₹9,550 ₹9,550

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+