Get Updates
Get notified of breaking news, exclusive insights, and must-see stories!

Arecanut & Copra Price: ಅಡಿಕೆ ಬೆಲೆ ಹೆಚ್ಚಳ; ಕೊಬ್ಬರಿ ಬೆಲೆ ಎಷ್ಟಿದೆ?

ಅಡಿಕೆ ಧಾರಣೆ ಮತ್ತೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು ಬೆಳೆಗಾರರಲ್ಲಿ ಆಶಾಭಾವನೆ ಮೂಡುವಂತೆ ಮಾಡಿದೆ. 55,000 ರೂಪಾಯಿಗಿಂತ ಹೆಚ್ಚಾಗಿದ್ದ ಕ್ವಿಂಟಾಲ್‌ ರಾಶಿ ಅಡಿಕೆ ಬೆಲೆ ಮತ್ತೆ ಕುಸಿತ ಕಂಡಿದ್ದು 45000 ರೂಪಾಯಿ ಆಸುಪಾಸಿಗೆ ಬಂದಿತ್ತು. ಈಗ ಮತ್ತೆ ನಿಧಾನವಾಗಿ ಅಡಿಕೆ ಬೆಲೆ ಹೆಚ್ಚಾಗುತ್ತಿದ್ದು

ಕೊಳೆ ರೋಗ, ಹಿಂಗಾರು ಒಣಗುವ ರೋಗ ಸೇರಿದಂತೆ ಅನೇಕ ಸಮಸ್ಯೆಗಳು ಅಡಿಕೆ ಬೆಳೆಯನ್ನು ಕಾಡುತ್ತಿದ್ದು, ರೈತರು ತೋಟಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. 46 ಸಾವಿರ ರೂಪಾಯಿಗೆ ಕುಸಿದಿದ್ದ ರಾಶಿ ಅಡಿಕೆ ಬೆಲೆ ಮತ್ತೆ ಹೆಚ್ಚಾಗುತ್ತಿರುವುದು ಒಂದು ಮಟ್ಟಕ್ಕೆ ನೆಮ್ಮದಿ ತರಿಸಿದೆ.

arecanut price surpassee Rs 50000 per quintal kobri price details

ಮಂಗಳವಾರ ಭದ್ರಾವತಿಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ 33,199 ರೂಪಾಯಿ ಇದ್ದರೆ ಗರಿಷ್ಠ 50,300 ರೂಪಾಯಿಗೆ ಮಾರಾಟವಾಗಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ 31,400 ರೂಪಾಯಿ ಗರಿಷ್ಠ 49,899 ರೂಪಾಯಿ ಆಗಿತ್ತು. ಸರಕು ಅಡಿಕೆ ಬೆಲೆ ಕ್ವಿಂಟಲ್‌ಗೆ 48,000 ರೂಪಾಯಿ ಇದ್ದರೆ ಗರಿಷ್ಠ 80,210 ರೂಪಾಯಿ ಆಗಿತ್ತು.

ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ (ಕ್ವಿಂಟಾಲ್‌ಗೆ)

ಇನ್ನು ಕೊಬ್ಬರಿ ಬೆಲೆ ಈ ವರ್ಷ ಬರೋಬ್ಬರಿ 18,000 ರೂಪಾಯಿಗೆ ಏರಿಕೆಯಾಗಿ ದಾಖಲೆ ಬರೆದಿತ್ತು. ಬಳಿಕ ಕುಸಿತ ಕಂಡಿದ್ದ ಕೊಬ್ಬರಿ ಮತ್ತೆ ನಿಧಾನವಾಗಿ ಏರಿಕೆಯಾಗುತ್ತಿದೆ. ಅರಸೀಕೆರೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ದರ 14,000 ರೂಪಾಯಿಗೆ ಮಾರಾಟವಾಗುತ್ತಿದೆ. ತಿಪಟೂರು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ 14,310 ರೂಪಾಯಿ ಆಗಿತ್ತು.

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಬಂಟ್ವಾಳ ಕೊಕ್ಕೋ ₹20,000 ₹27,500 ₹26,000
2 ಬಂಟ್ವಾಳ ಹೊಸ ವೆರೈಟಿ ₹30,000 ₹33,500 ₹32,500
3 ಭದ್ರಾವತಿ ರಾಶಿ ₹33,199 ₹50,300 ₹47,001
4 ಚನ್ನಗಿರಿ ರಾಶಿ ₹45,000 ₹50,799 ₹49,131
5 ಗೋಣಿಕೊಪ್ಪಲ್ ಪೈಲೋನ್ ₹3,500 ₹4,000 ₹3,700
6 ಪುತ್ತೂರು ಹೊಸ ವೆರೈಟಿ ₹25,000 ₹33,500 ₹29,500
7 ಸಾಗರ ಬಿಳೆ ಗೊಟು ₹24,689 ₹24,729 ₹24,689
8 ಸಾಗರ ಚಾಲಿ ₹32,299 ₹32,729 ₹32,299
9 ಸಾಗರ ಕೆಂಪು ಗೋಟು ₹24,989 ₹25,989 ₹24,989
10 ಸಾಗರ ರಾಶಿ ₹30,009 ₹47,829 ₹46,209
11 ಶಿವಮೊಗ್ಗ ಬೆಟ್ಟೆ ₹52,114 ₹57,629 ₹53,119
12 ಶಿವಮೊಗ್ಗ ರಾಶಿ ₹31,400 ₹49,899 ₹48,899
13 ಶಿವಮೊಗ್ಗ ಸರಕು ₹48,000 ₹80,210 ₹63,199
14 ಸಿದ್ದಾಪುರ ಕೆಂಪು ಗೋಟು ₹18,899 ₹21,019 ₹20,099
15 ಸಿದ್ದಾಪುರ ರಾಶಿ ₹42,689 ₹47,699 ₹46,599
16 ಸಿದ್ದಾಪುರ ತಟ್ಟಿ ಬೆಟ್ಟೆ ₹28,609 ₹42,689 ₹34,099
17 ಶಿರಸಿ ರಾಶಿ ₹43,208 ₹48,499 ₹44,031
18 ಶಿರಸಿ ಕೆಂಪು ಗೋಟು ₹22,299 ₹22,369 ₹22,334
19 ಯಲ್ಲಾಪುರ ಬಿಳೆ ಗೊಟು ₹16,899 ₹30,190 ₹27,499
20 ಯಲ್ಲಾಪುರ ರಾಶಿ ₹42,199 ₹56,769 ₹48,992
21 ಯಲ್ಲಾಪುರ ಕೆಂಪು ಗೋಟು ₹14,899 ₹24,899 ₹20,899

ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ (ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಅರಸೀಕೆರೆ ಬೇರೆ ₹9,800 ₹9,800 ₹9,800
2 ತಿಪಟೂರು ಕೊಬ್ಬರಿ ₹14,310 ₹14,310 ₹14,310
3 ಮಧುಗಿರಿ ಕೊಬ್ಬರಿ ₹10,000 ₹13,000 ₹12,000
4 ತುಮಕೂರು ಬೇರೆ ₹10,000 ₹11,500 ₹10,600
5 ದಾವಣಗೆರೆ ಕೊಬ್ಬರಿ ₹9,660 ₹9,660 ₹9,660
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+