Arecanut Price: ₹55,000 ಸನಿಹದಲ್ಲಿ ಅಡಿಕೆ ಬೆಲೆ; ಕೊಬ್ಬರಿ ಬೆಲೆ ಹೇಗಿದೆ ತಿಳಿಯಿರಿ

ಕಳೆದ ಕೆಲವು ದಿನಗಳಿಂದ ಭರ್ಜರಿ ಏರಿಕೆ ಕಾಣುತ್ತಿರುವ ಅಡಿಕೆ ಬೆಲೆ ಬೆಳೆಗಾರರಲ್ಲಿ ಸಂತಸ ತಂದಿದೆ. ರಾಶಿ ಅಡಿಕೆ ಧಾರಣೆ ₹50,000 ದಾಟಲೂ ಕಷ್ಟಪಡುತ್ತಿತ್ತು, ಆದರೆ ಈಗ ಸತತ ಏರಿಕೆ ಕಾಣುತ್ತಿದ್ದು, ₹55,000 ಸನಿಹಕ್ಕೆ ಬಂದಿದೆ, ಇನ್ನು ಕೆಲವೇ ದಿನಗಳಲ್ಲಿ 55 ಸಾವಿರ ದಾಟುವ ಸಾಧ್ಯತೆ ಕೂಡ ಇದೆ.

ಶನಿವಾರ ಸೊರಬ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ ₹36,009 ಇದ್ದರೆ, ಗರಿಷ್ಠ ₹54,199 ಆಗಿತ್ತು. ಶಿವಮೊಗ್ಗ ಮಾರುಕಟ್ಟಯಲ್ಲಿ ಕೂಡ ಅಡಿಕೆ ಬೆಲೆ ₹54,000 ದಾಟಿದೆ.

Arecanut Price on the Rise Touches 55 000 Check Copra Price

ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ ₹46,000 ಇದ್ದರೆ ಗರಿಷ್ಠ ₹53,639 ಆಗಿತ್ತು. ಸಾಗರ ಮಾರುಕಟ್ಟೆಯಲ್ಲಿ ಕನಿಷ್ಠ ₹42,399 ಇದ್ದರೆ ಗರಿಷ್ಠ ₹51,299 ಆಗಿತ್ತು.

ಕಳೆದ ವರ್ಷ ಬಹುತೇಕ ₹50,000 ಒಳಗಡೆಯೇ ಇದ್ದ ಅಡಿಕೆ ಬೆಲೆ ಈ ವರ್ಷದ ಆರಂಭದಲ್ಲೇ ಏರಿಕೆ ಕಾಣುತ್ತಿರುವುದು ಅಡಿಕೆ ಬೆಳೆಗಾರರಲ್ಲಿ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಅಡಿಕೆ ಬೆಲೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಪಂಡಿತರು ನಿರೀಕ್ಷೆ ಮಾಡಿದ್ದಾರೆ.

ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ (ಕ್ವಿಂಟಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಸೊರಬ ಸಿಪ್ಪೆಗೋಟು ₹18,190 ₹18,190 ₹18,190
2 ಸೊರಬ ಬಿಳೆ ಗೊಟು ₹25,890 ₹25,890 ₹25,890
3 ಸೊರಬ ಗೊರಬಲು ₹24,690 ₹32,599 ₹27,193
4 ಸೊರಬ ರಾಶಿ ₹36,009 ₹54,199 ₹51,193
5 ಸೊರಬ ಇಡಿ ₹51,699 ₹51,699 ₹51,699
6 ಚನ್ನಗಿರಿ ರಾಶಿ ₹46,000 ₹52,913 ₹53,639
7 ಸಿದ್ದಾಪುರ ರಾಶಿ ₹30,006 ₹53,869 ₹52,099
8 ಸಿದ್ದಾಪುರ ಬಿಳೆ ಗೋಟು ₹26,099 ₹29,299 ₹28,399
9 ಸಿದ್ದಾಪುರ ಕೆಂಪು ಗೋಟು ₹27,900 ₹31,699 ₹30,699
10 ಶಿರಸಿ ರಾಶಿ ₹44,618 ₹49,408 ₹47,441
11 ಶಿರಸಿ ಚಾಲಿ ₹32,199 ₹36,118 ₹34,834
12 ಶಿರಸಿ ಬೆಟ್ಟೆ ₹37,050 ₹46,609 ₹40,482
13 ಯಲ್ಲಾಪುರ ಬಿಳಿಗೋಟು ₹23,601 ₹32,299 ₹30,009
14 ಯಲ್ಲಾಪುರ ಆಪಿ ₹58,299 ₹61,565 ₹60,695

ಕೊಬ್ಬರಿ ಬೆಲೆ ಹೇಗಿದೆ?

ಅಡಿಕೆ ಬೆಲೆ ಹೆಚ್ಚಳವಾಗುತ್ತಿದ್ದರೂ ಕೊಬ್ಬರಿ ಬೆಲೆ ಮಾತ್ರ ಇನ್ನೂ ಏರಿಕೆಯ ಹಾದಿ ಹಿಡಿದಿಲ್ಲ. ನಾಫೆಡ್‌ ಮೂಲಕ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಮಾಡಿದ ಬಳಿಕವಾದರೂ ಕೊಬ್ಬರಿ ಹೆಚ್ಚುವ ನಿರೀಕ್ಷೆಯಲ್ಲಿ ತೆಂಗು ಬೆಳೆಗಾರರಿಗೆ ನಿರಾಸೆಯಾಗಿದೆ.

ಶನಿವಾರ ತಿಪಟೂರು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಕನಿಷ್ಠ ₹8,300 ಇದ್ದರೆ ಗರಿಷ್ಠ ₹9,250 ಆಗಿತ್ತು. ಬೆಂಗಳೂರು ಮಾರುಕಟ್ಟೆಯಲ್ಲಿ ಕನಿಷ್ಠ ₹9,500 ಇದ್ದರೆ ಗರಿಷ್ಠ ₹11,500 ಇತ್ತು.

ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ (ಕ್ವಿಂಟಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಅರಸೀಕೆರೆ ಕೊಬ್ಬರಿ ₹7,800 ₹9,200 ₹8,406
2 ಅರಸೀಕೆರೆ ಬೇರೆ ₹8,000 ₹8,500 ₹8,000
3 ಬೆಂಗಳೂರು ಕೊಬ್ಬರಿ ₹9,500 ₹11,500 ₹10,500
4 ಕೆ.ಆರ್.ಪೇಟೆ ಕೊಬ್ಬರಿ ₹9,550 ₹9,550 ₹9,550
5 ತಿಪಟೂರು ಕೊಬ್ಬರಿ ₹8,300 ₹9,250 ₹9,000
6 ನಾಗಮಂಗಲ ಮಾಧ್ಯಮ ₹8,800 ₹8,800 ₹8,800
7 ಮಳವಳ್ಳಿ ಕೊಬ್ಬರಿ ₹8,900 ₹8,900 ₹8,900
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+